ಶ್ರೀರಾಮನ ಆದರ್ಶಗಳು ಸಮಾಜಕ್ಕೆ ದಿವ್ಯೌಷಧ: ಪಿ.ಎಚ್. ಪೂಜಾರ

| Published : Apr 07 2025, 12:36 AM IST

ಸಾರಾಂಶ

ಸಕಲ ಸದ್ಗುಣ ಸಂಪನ್ನ, ಪರಾಕ್ರಮ ಶಾಲಿ, ಧರ್ಮಜ್ಞ, ಸತ್ಯದ ವ್ರತಧಾರಿಯಾಗಿದ್ದ ಶ್ರೀರಾಮ ದಿವ್ಯಮೌಲ್ಯವಾಗಿದ್ದಾರೆ. ಶ್ರೀರಾಮನ ಆದರ್ಶವನ್ನು ನಾವೆಲ್ಲರು ಪಾಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ಕನ್ನಡಪ್ರಭ ವಾರ್ತೆ ಕಮತಗಿ

ಸಕಲ ಸದ್ಗುಣ ಸಂಪನ್ನ, ಪರಾಕ್ರಮ ಶಾಲಿ, ಧರ್ಮಜ್ಞ, ಸತ್ಯದ ವ್ರತಧಾರಿಯಾಗಿದ್ದ ಶ್ರೀರಾಮ ದಿವ್ಯಮೌಲ್ಯವಾಗಿದ್ದಾರೆ. ಶ್ರೀರಾಮನ ಆದರ್ಶವನ್ನು ನಾವೆಲ್ಲರು ಪಾಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ಸಮೀಪದ ಮುಳ್ಳೂರು ಗ್ರಾಮದಲ್ಲಿ ಹಿಂದೂ ಕ್ಷತ್ರೀಯ ಸಮಾಜದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ರಾಮದೇವರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆದರ್ಶದ ಜೀವನದ ಮೂಲಕ ಮನುಷ್ಯರಿಗೆ ಮಾದರಿಯಾಗಿರುವ ಪ್ರಭು ಶ್ರೀರಾಮನ ಆದರ್ಶಗುಣಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀರಾಮ ಪ್ರಭುವಿನ ಶ್ರೇಷ್ಠ ಗುಣಗಳು ನಮ್ಮ ಬದುಕಿನಲ್ಲಿ ಅಳವಡಿತಗೊಂಡು ನಮ್ಮ ಬದುಕು ಭವ್ಯವಾಗಲಿ, ರಾಮರಾಜ್ಯ ಪುನಃ ನಿರ್ಮಾಣವಾಗಲಿ ಎಂದು ಹಾರೈಸಿದರು.

ಕ್ಷತ್ರೀಯ ಸಮಾಜದ ಮುಖಂಡ ಯುವರಾಜ ದೇಸಾಯಿ, ಬಾಗಲಕೋಟೆ-ವಿಜಯಪುರ ಹಾಲು ಒಕ್ಕೂಟದ ನಿರ್ದೇಶಕ ಸಂಗಣ್ಣ ಹಂಡಿ, ಪಿಎಸ್‌ಐ ಜ್ಯೋತಿ ವಾಲಿಕಾರ, ಲಕ್ಷ್ಮಣಗೌಡ ಗೌಡರ, ಬಸವರಾಜ ಚೌಧರಿ, ಶಿವಾನಂದ ಪೂಜಾರಿ, ಗ್ರಾಪಂ ಮಾಜಿ ಅಧ್ಯಕ್ಷ ಮುದ್ದಪ್ಪ ಕೊಳಮಲಿ, ಬಸವನಗೌಡ ಗೌಡರ, ಯಮನಪ್ಪ ಕೊಪ್ಪದ, ಪಿಕೆಪಿಎಸ್ ಸದಸ್ಯ ತಿಪ್ಪಣ್ಣ ಗೌಡರ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು ಇದ್ದರು.

ಮೆರವಣಿಗೆ: ಇದಕ್ಕೂ ಮುನ್ನ ಮುಳ್ಳೂರ ಗ್ರಾಮದಲ್ಲಿ ಶ್ರೀರಾಮದೇವರ ಭಾವಚಿತ್ರದ ಮೆರವಣಿಗೆ ಸಡಗರ-ಸಂಭ್ರಮದಿಂದ ಜರುಗಿತು. ಮಹಿಳೆಯರು ಕಳಸಾರತಿಯೊಂದಿಗೆ ಭಾಗವಹಿಸಿದ್ದರು. ಯುವಕರು, ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.