ವಚನ ಸಾಹಿತ್ಯದಲ್ಲಿರುವ ವಿಚಾರಧಾರೆಗಳು ಆದರ್ಶವಾಗಿವೆ-ಹೆಗಡಾಳ

| Published : Sep 01 2024, 01:54 AM IST

ವಚನ ಸಾಹಿತ್ಯದಲ್ಲಿರುವ ವಿಚಾರಧಾರೆಗಳು ಆದರ್ಶವಾಗಿವೆ-ಹೆಗಡಾಳ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಆಚರಣೆಯಲ್ಲಿರುವ ಕಂದಾಚಾರಗಳನ್ನು ತೊಲಗಿಸಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಚನ ಸಾಹಿತ್ಯದಲ್ಲಿರುವ ವಿಚಾರಧಾರೆಗಳು ಆದರ್ಶವಾಗಿವೆ ಎಂದು ಎಸ್‌ಜೆಎಂವಿ ಕಾಲೇಜಿನ ಪ್ರಾ. ಆರ್.ವ್ಹಿ. ಹೆಗಡಾಳ ಹೇಳಿದರು.

ರಾಣಿಬೆನ್ನೂರು:ಸಮಾಜದಲ್ಲಿ ಆಚರಣೆಯಲ್ಲಿರುವ ಕಂದಾಚಾರಗಳನ್ನು ತೊಲಗಿಸಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಚನ ಸಾಹಿತ್ಯದಲ್ಲಿರುವ ವಿಚಾರಧಾರೆಗಳು ಆದರ್ಶವಾಗಿವೆ ಎಂದು ಎಸ್‌ಜೆಎಂವಿ ಕಾಲೇಜಿನ ಪ್ರಾ. ಆರ್.ವ್ಹಿ. ಹೆಗಡಾಳ ಹೇಳಿದರು. ನಗರದ ನಾಗಶಾಂತಿ ಉನ್ನತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ, ಕದಳಿ ಮಹಿಳಾ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಶರಣ ವಚನದಲ್ಲಿರುವ ವಿಚಾಧಾರೆಗಳನ್ನು ಸಾಮೂಹಿಕವಾಗಿ ಸಮಾಜದ ಜನಸಾಮಾನ್ಯರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಶರಣ ಸಾಹಿತ್ಯ ಪರಿಷತ್ ನಿರ್ವಹಿಸುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಾಜೇಶ್ವರಿ ಪಾಟೀಲ ಮಾತನಾಡಿ, ಸಮಾಜದಲ್ಲಿ ಶರಣ ವಚನಗಳು ಮತ್ತು ಅವರ ವಿಚಾಧಾರೆಗಳು ನಮ್ಮ ಬಾಳಿಗೆ ದಾರಿ ದೀಪವಾಗಿವೆ. ಅವರು ತೋರಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು. ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಎಸ್.ಕೆ.ನೇಸ್ವಿ, ಗಾಯತ್ರಮ್ಮ ಕುರವತ್ತಿ, ಶೀಲಾ ಮಾಕನೂರ, ಅನ್ನಪೂರ್ಣ ಬೆನ್ನೂರ, ಮಂಗಳಾ ಪಾಟೀಲ, ಬಸವರಾಜ ಪಾಟೀಲ, ಕೆ.ಎಚ್ ಮುಕ್ಕನ್ಣನವರ, ಎಸ್,ಎಚ್.ಪಾಟೀಲ, ಪ್ರಭುಲಿಂಗಪ್ಪ ಹಲಗೇರಿ, ರಮೇಶ ಬಡಕರಿಯಪ್ಪನವರ ಮತ್ತಿತರರಿದ್ದರು.