ಬಾಳೆಹೊನ್ನೂರುರಾಜ್ಯದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರನ್ನು ಅಡ್ಡ ಹಾಕಿರುವ ಘಟನೆಯಂತಹ ದುರಂತವನ್ನು ನಾನು ಈವರೆಗೂ ನೋಡಿಲ್ಲ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಾಜ್ಯದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರನ್ನು ಅಡ್ಡ ಹಾಕಿರುವ ಘಟನೆಯಂತಹ ದುರಂತವನ್ನು ನಾನು ಈವರೆಗೂ ನೋಡಿಲ್ಲ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಹಿರಿಯರಾದ ಹರಿಪ್ರಸಾದ್ ಅವರಂತಹ ಮುತ್ಸದ್ಧಿ ರಾಜಕಾರಣಿ ರಾಜ್ಯಸಭೆ, ವಿಧಾನಸಭೆಯಲ್ಲಿದ್ದು, ಪ್ರತಿಪಕ್ಷದ ನಾಯಕರಾಗಿದ್ದವರು ರಾಜ್ಯಪಾಲರನ್ನು ಅಡ್ಡ ಹಾಕಿರುವುದು ನೋವಿನ ಸಂಗತಿ. ಇದು ಪ್ರಜಾ ಪ್ರಭುತ್ವಕ್ಕೆ ಚಂದವಲ್ಲ ಎಂದು ಪಟ್ಟಣದಲ್ಲಿ ಸುದ್ದಿಗಾರರಿಗೆ ಹೇಳಿದರು.

ರಾಜ್ಯಪಾಲರದ್ದು ಸಂವಿಧಾನ ಬದ್ಧ ಹುದ್ದೆ. ರಾಜ್ಯಪಾಲರು ಸರ್ಕಾರದ ಭಾವನೆ ಮತ್ತು ಆಶಯಗಳನ್ನು ಹೇಳ ಬೇಕೆಂಬ ವಿಚಾರ ಸರಿಯಿದೆ. ಆದರೆ ಅವರ ಇಚ್ಛೆಗೆ ವಿರುದ್ಧವಾಗಿ ಹೇಳಬೇಕು ಎಂದು ವಿರೋಧಿ ಸುವಂತಿಲ್ಲ.

ಹಂಸರಾಜ್ ಭಾರಧ್ವಜ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರಾಗಿದ್ದರು. ಆ ಸಂದರ್ಭ ದಲ್ಲಿ ನಡೆದ ಅಧಿವೇಶನದಲ್ಲಿ ಅವರು ಕೇವಲ ಸರ್ಕಾರದ ಭಾಷಣದ ಪ್ರತಿಯನ್ನು ನೋಡಿ ಅದನ್ನು ಓದದೆ ಹಾಗೆಯೇ ಇಟ್ಟು ವಾಪಾಸ್ ತೆರಳಿದರು. ನಾವು ಅವರನ್ನು ಬೀಳ್ಕೊಟ್ಟು ಬಂದಿದ್ದೆವು. ಯಾಕೆಂದರೆ ಅದು ರಾಜ್ಯಪಾಲರ ಪರಮಾಧಿಕಾರ. ಹೀಗೆ ಹೇಳಬೇಕು ಎಂದೇನಿಲ್ಲ.

ರಾಜ್ಯಪಾಲರ ಭಾಷಣ ಮಂಡನೆ ಮಾಡದಿದ್ದರೆ, ಎರಡೂ ಸದನಗಳು ನಡೆಯದಿದ್ದರೆ ಮುಂದೆ ನಾವು ಹಣಕಾಸು ಖರ್ಚು, ವೆಚ್ಚಗಳನ್ನು ನಿಭಾವಣೆ ಮಾಡಲು ಆಗುವುದಿಲ್ಲ. ಸರ್ಕಾರಿ ನೌಕರರ ಸಂಬಳ ಕೊಡುವುದೂ ಕಷ್ಟವಾಗಲಿದೆ. ಏಕೆಂದರೆ ರಾಜ್ಯಪಾಲರ ಭಾಷಣದ ಮೂಲಕ ಎರಡೂ ಸದನಗಳಿಂದ ಹಣಕಾಸು ವ್ಯವಸ್ಥೆಗೆ ಅನುಮೋದನೆ ಪಡೆಯಬೇಕಿದೆ. ಇದು ಈ ರೀತಿ ಇರುವಾಗ ರಾಜ್ಯಪಾಲರು ಅವರ ಇಚ್ಛೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರವನ್ನು ದೂರಬೇಕು ಎನ್ನುವ ಬೇಡಿಕೆಗೆ ಸಹಮತವಿಲ್ಲದೆ, ಸದನಕ್ಕೆ ಬಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಟ್ಟು ಅದನ್ನು ಮಂಡನೆ ಮಾಡಿ ಹೋಗಿದ್ದಾರೆ. ಅವರು ಹೇಳಲೇಬೇಕು ಎಂದು ಹೇಳುವ ಅಧಿಕಾರ ನಮಗಿಲ್ಲ. ಸರ್ಕಾರದ ಆಶಯ ಹೇಳುವ ಉದ್ದೇಶವಿತ್ತು. ಅದನ್ನು ಅವರು ಮಂಡನೆ ಮಾಡಿದ್ದಾರೆ ಎಂದು ಹೇಳಿದರು.

-- (ಬಾಕ್ಸ್)--

ಅಂಗಡಿ ತೆರವು: ಹೋರಾಟ ಅನಿವಾರ್ಯ

ಶೃಂಗೇರಿ ಗಾಂಧಿ ಮೈದಾನದಲ್ಲಿ ಅಂಗಡಿ ಮುಂಗಟ್ಟು ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋಟಾ ಶ್ರೀನಿವಾಸಪೂಜಾರಿ ಸಲ್ಲಿ ಅಂಗಡಿ ಹೊಂದಿದ್ದವರು ಶಾಶ್ವತ ಕಟ್ಟಡ ಕಟ್ಟಿರಲಿಲ್ಲ. ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು. ಆದರೆ ದುರುದ್ದೇಶಪೂರಿತವಾಗಿ ಅವರನ್ನು ತೆರವು ಮಾಡಲಾಗಿದೆ. ಇದಕ್ಕೆಲ್ಲಾ ರಾಜಕಾರಣ ತಂದರೆ ಒಳ್ಳೆಯದಲ್ಲ ಎಂದು ಹೇಳಿದ್ದೆ. ಆದರೆ ತಹಸೀಲ್ದಾರ್ ಸಮಸ್ಯೆಗಳನ್ನು ಸೃಷ್ಟಿ ಮಾಡಿ ತೆರವು ಮಾಡಿದ್ದಾರೆ. ಪ್ರಸ್ತುತ ಹೊಸ ಜಿಲ್ಲಾಧಿಕಾರಿ ಬಂದಿದ್ದು ಅವರ ಜೊತೆ ಮಾತನಾಡಲಾಗುತ್ತದೆ. ಇಂತಹ ಸಮಸ್ಯೆಯಾದಾಗ ಅನಿವಾರ್ಯವಾಗಿ ರಾಜಕೀಯ ಪಕ್ಷ ಮರು ಹೋರಾಟಕ್ಕೆ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.೨೫ಬಿಹೆಚ್‌ಆರ್ ೨: ಕೋಟಾ ಶ್ರೀನಿವಾಸಪೂಜಾರಿ