ಯುವಜನತೆಯಲ್ಲಿ ಹೃದಯಾಘಾತ ಹೆಚ್ಚಳ ಆತಂಕಕಾರಿ: ಡಾ.ಮಾನಸ

| Published : Oct 01 2024, 01:18 AM IST

ಸಾರಾಂಶ

ಪ್ರಪಂಚ ಕಂಡ ಮಹಾಮಾರಿ, ಜಗತ್ತನ್ನೆ ತಲ್ಲಣಗೊಳಿಸಿದ, ಕೊರೋನಾ ನಂತರದ ಜನಜೀವನದಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಅದರಲ್ಲೂ ಜನಾರೋಗ್ಯದಲ್ಲಿ ತೀವ್ರ ತೆರನಾದ ಘಟನೆಗಳು ಸಂಭವಿಸಿವೆ. ವಿಶೇಷವಾಗಿ ಯುವಜನರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಬಾಪೂಜಿ ಆಸ್ಪತ್ರೆ ಮಕ್ಕಳ ಮತ್ತು ನವಜಾತ ಶಿಶು ತಜ್ಞೆ ಡಾ. ಕೆ.ಬಿ.ಮಾನಸ ದಾವಣಗೆರೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಕೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರಪಂಚ ಕಂಡ ಮಹಾಮಾರಿ, ಜಗತ್ತನ್ನೆ ತಲ್ಲಣಗೊಳಿಸಿದ, ಕೊರೋನಾ ನಂತರದ ಜನಜೀವನದಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಅದರಲ್ಲೂ ಜನಾರೋಗ್ಯದಲ್ಲಿ ತೀವ್ರ ತೆರನಾದ ಘಟನೆಗಳು ಸಂಭವಿಸಿವೆ. ವಿಶೇಷವಾಗಿ ಯುವಜನರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಬಾಪೂಜಿ ಆಸ್ಪತ್ರೆ ಮಕ್ಕಳ ಮತ್ತು ನವಜಾತ ಶಿಶು ತಜ್ಞೆ ಡಾ. ಕೆ.ಬಿ.ಮಾನಸ ಅಭಿಪ್ರಾಯಪಟ್ಟರು.

ನಗರದ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ರಾಜ್ಯ ವಿಜ್ಞಾನ ಪರಿಷತ್ತು , ಜಿಲ್ಲಾ ಬಾಲಭವನ ಸಮಿತಿ ಆಯೋಜಿಸಿದ್ದ ದಿ: ಎಂ.ಎನ್. ಮುಸ್ಟೂರಪ್ಪ ಮತ್ತು ದಿ:ದೊಗ್ಗಳ್ಳಿ ಗೌಡರ ಪುಟ್ಟರಾಜು ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಯುವಜನಾಂಗವನ್ನು ಮಾನಸಿಕ ದೈಹಿಕ ಸದೃಢವನ್ನಾಗಿಸಬೇಕಿದೆ. ಸದೃಢ ಯುವಜನತೆ ದೇಶದ ಆಸ್ತಿ ಎಂದರು. ಕೋವಿಡ್ ಹಾವಳಿ ನಂತರದಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆಗಳಿಗೆ ನಮ್ಮ ಮಕ್ಕಳು, ಶಿಕ್ಷಕರು ಒಗ್ಗಿಕೊಳ್ಳದೇ ಅದರೊಟ್ಟಿಗೆ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ರೋಗಗಳನ್ನು ದೂರವಿಡಲು ಸಾಮಾಜಿಕ ಅಂತರ ಕಾಪಾಡಲು ಆನ್‌ಲೈನ್ ಶಿಕ್ಷಣದತ್ತ ಮುಖ ಮಾಡಿದೆವು. ಅದರ ಪರಿಣಾಮ ಮಕ್ಕಳು, ಯುವಜನತೆ ಮೊಬೈಲ್ ದಾಸರಾಗುತ್ತಿದ್ದಾರೆ ಎಂದರು.

ಪ್ರತಿನಿತ್ಯ ಮೊಬೈಲ್ ದಾಸರಾಗಿರುವ ಮಕ್ಕಳು ನಿಮ್ಹಾನ್ಸ್‌ಗೆ ದಾಖಲಾಗುವುದು ಹೆಚ್ಚಾಗುತ್ತಿದೆ. ಮೊಬೈಲ್‌ ಗೀಳಿನಿಂದ ಹೊರಬರಲು ಮಕ್ಕಳನ್ನು ನೈಜಸ್ಥಿತಿಗೆ ತರುವ ಹೊಣೆಗಾರಿಕೆ ಪೋಷಕರು, ಶಿಕ್ಷಕರು ಮತ್ತು ಸಮಾಜದ ಮೇಲಿದೆ. ಈಗಿರುವ ಅಂಕಗಳ ಆಧಾರಿತ ಶಿಕ್ಷಣದಿಂದ ಹೊರಬಂದು ಜೀವನದಲ್ಲಿ ಬದುಕುವ ಕಲೆ, ಆತ್ಮಸ್ಥೈರ್ಯ, ಮಾನಸಿಕ ಸದೃಢತೆ, ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೀಗಾದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವವರು ಇಂದಿನ ಮಕ್ಕಳ ಯುವಜನತೆಯ ಮನಸ್ಸನ್ನು ಅರಿತು ಬೋಧಿಸುವ ಕಲೆ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕ.ರಾ.ವಿ.ಪ. ಗೌರವಾಧ್ಯಕ್ಷ ಡಾ. ಜೆ.ಬಿ.ರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಬಿ.ಎಸ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಕೆ.ಎಸ್. ಗಂಗಾಧರ್, ಎಂ.ನಾಗರಾಜ್, ಕರಾವಿಪ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ, ಶಿಕ್ಷಕಿ ಕಲ್ಯಾಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -30ಕೆಡಿವಿಜಿ37ಃ:

ದಾವಣಗೆರೆಯಲ್ಲಿ ನಡೆದ ದಿ: ಎಂ.ಎನ್. ಮುಸ್ಟೂರಪ್ಪ ಮತ್ತು ದಿ: ದೊಗ್ಗಳ್ಳಿ ಗೌಡರ ಪುಟ್ಟರಾಜು ಸ್ಮಾರಕ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಕೆ.ಬಿ. ಮಾನಸ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.