ಸಾರಾಂಶ
-ತಾಲೂಕಿನಲ್ಲಿ 22 ಶುದ್ಧ ಕುಡಿವ ನೀರಿನ ಘಟಕಗಳಿದ್ದರೂ ನಿರ್ವಹಣೆಯ ಕೊರತೆ
-----ಕಲಬುರಗಿಯಲ್ಲಿ ಜಲ ಕಂಟಕ ಭಾಗ 3
ವಿಶೇಷ ವರದಿಕನ್ನಡಪ್ರಭ ವಾರ್ತೆ ಯಡ್ರಾಮಿ
ಪ್ರತಿವರ್ಷ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುವುದು ಸಾಮಾನ್ಯ.ತಾಲೂಕಿನ 16 ಗ್ರಾ.ಪಂಗಳಲ್ಲಿ 58 ಗ್ರಾಮಗಳಿದ್ದು, ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಖಾಸಗಿ ಜಮೀನುಗಳಲ್ಲಿ ಕೊಳವೆಬಾವಿಯಿಂದ ಬಹುಗ್ರಾಮ ಯೋಜನೆ ಮೂಲಕ ನೀರು ಪೂರೈಸುತ್ತಿದ್ದರೂ, ತಾಲೂಕಿಗೆ ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ.
ತಾಲೂಕಿನಲ್ಲಿ 22ಕ್ಕೂ ಅಧಿಕ ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಬಹುತೇಕ ಗ್ರಾಮಗಳಲ್ಲಿ ನಿರ್ವಹಣೆ ಹಾಗೂ ದುರಸ್ತಿ ಮಾಡಲಾರದ ಪರಿಸ್ಥಿತಿಯಿದೆ.ಆರ್‌ಒ ಘಟಕಗಳು ಸ್ಥಗಿತ: ತಾಲೂಕಿನ ಕುಳಗೇರಿ, ಮಳ್ಳಿ, ಜವಳಗಾ, ಕಾಖಂಡಕಿ, ಅರಳಗುಂಡಗಿ, ಕೋಣಶಿರಸಗಿ, ವಡಗೇರಾ, ಯಲಗೋಡ, ನಂದಿಹಳ್ಳಿ ಸೇರಿ ಇನ್ನಿತರ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ. ಕೆಲ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್ ಗಳು ಸ್ಥಗಿತವಾಗಿದ್ದರೂ ಪುನಾರಂಭಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಟ್ಟಣದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ನಿರ್ವಹಣೆ ಹಾಗೂ ನಾನಾ ಸಮಸ್ಯೆಗಳಿಂದ ಎರಡು ಘಟಕಗಳು ಸ್ಥಗಿತಗೊಂಡಿವೆ. ಬೇಸಿಗೆ ಪ್ರಾರಂಭದಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮಾಡಲು ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಿ ಎನ್ ಜಿಒ ಮೂಲಕ ನಿರ್ವಹಣೆ ಮಾಡಿಸಲಾಗುವುದು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.------------
....ಬಾಕ್ಸ್......ಯಡ್ರಾಮಿ ಸಮುದಾಯ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ
ಯಡ್ರಾಮಿ ಸರ್ಕಾರಿ ಆಸ್ಪತ್ರೆಯಲ್ಲಿ ಕುಡಿಯಲು ಹನಿ ನೀರು ಸಿಗುತ್ತಿಲ್ಲ. ರೋಗಿಗಳು ಆಸ್ಪತ್ರೆಗೆ ಹೋಗುವಾಗ ಬಾಟಲ್ ನೀರು ತೆಗೆದುಕೊಂಡು ಹೋಗುವ ಸ್ಥಿತಿ ಇದೆ. ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಔಷಧ, ಸ್ವಚ್ಛತೆ ಕೊರತೆ ಇದ್ದರೆ ಈ ಆಸ್ಪತ್ರೆಯಲ್ಲಿ ಕುಡಿವ ನೀರಿನ ಸಮಸ್ಯೆ ಬೇತಾಳನಂತೆ ಕಾಡುತ್ತಿದೆ.ರೋಗಿಗಳಿಗೆ ಕಷ್ಟ: ಹೆರಿಗೆಗಾಗಿ ಬಾಣಂತಿಯರು ಆಸ್ಪತ್ರೆಗೆ ಬಂದವರಿಗೆ ಕುಡಿಯಲು, ಬಟ್ಟೆ ತೊಳೆಯಲು ನೀರಿನ ಸಮಸ್ಯೆ ಎದುರಾಗಿದೆ. ವಾರದಲ್ಲಿ ಒಂದು ಬಾರಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಯುತ್ತೆ. ಆದರೆ, ಕಣ್ಣು ಕಾಣದ ರೋಗಿಗಳು ಬೇರೊಬ್ಬರ ಸಹಾಯದಿಂದ ನೀರು ತರಿಸುವ ಪರಿಸ್ಥಿತಿ ಇದೆ.
ಆಸ್ಪತ್ರೆಯಲ್ಲಿ ಕಳೆದ 6 ತಿಂಗಳಿನಿಂದ ನೀರಿನ ಕೊರತೆ ಕಂಡು ಬಂದಿದ್ದರೂ ಯಾರೂ ಈ ಕಡೆ ಗಮನ ಹರಿಸಿಲ್ಲ. ರೋಗಿಗಳು ಸ್ಥಳೀಯರಾಗಿದ್ದರೆ ತಮ್ಮ ಮನೆಯಿಂದ ನೀರು ತರಬಹುದು. ಆದರೆ, ಗ್ರಾಮೀಣ ಭಾಗಗಳಿಂದ ಬಂದ ರೋಗಿಗಳಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಗಿರೀಶ ಗುತ್ತೇದಾರಹಣ ಖರ್ಚು: ಆಸ್ಪತ್ರೆಗೆ ಬರುವ ರೋಗಿ ಹಾಗೂ ಅವರ ಜೊತೆ ಬರುವ ಸಂಬಂಧಿಕರು ಕುಡಿವ ನೀರಿನ ಸೌಲಭ್ಯ ಇಲ್ಲದ ಕಾರಣ ಹೊರಗಡೆಯಿಂದ ಬಾಟಲ್ ನೀರು ತರುವ ಪರಿಸ್ಥಿತಿ ಇದೆ. ಒಂದು ಲೀ. ಬಾಟಲ್ ನೀರಿಗೆ 20 ರು. ನೀಡಬೇಕು. ಇನ್ನು ದಿನಪೂರ್ತಿ ಕುಡಿವ ನೀರಿಗೆ ನೂರಾರು ರೂಪಾಯಿ ಖರ್ಚು ಮಾಡುವ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
-------ಕೋಟ್-------ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆಯಾಗುತ್ತಿದೆ. ತೋಟಗಳತ್ತ ಹೋಗಿ ನೀರು ತರಬೇಕಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದೆ.
- ರಾಜು ಕರಕಿಹಳ್ಳಿ, ಗ್ರಾಮಸ್ಥ--------------------------------
ಫೋಟೋ- ಯಡ್ರಾಮಿ ನೀರಿನ ಸಮಸ್ಯೆಯಡ್ರಾಮಿ ಸಮುದಾಯ ಆಸ್ಪತ್ರೆಯಲ್ಲಿ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕ.----
ಫೋಟೋ- ಯಡ್ರಾಮಿ ವಾಟರ್ ಕ್ರೈಸಿಸ್ಕ್ರಿ 2 ಮತ್ತು 3ಯಡ್ರಾಮಿ ತಾಲೂಕಿನ ಕರಕಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿಗಾಗಿ ನಿತ್ಯವೂ ಇಂತಹ ನೋಟಗಳು ಕಂಡು ಬರುತ್ತಿವೆ. ಸರದಿಯಲ್ಲಿ ನಿಂತೇ ನೀರು ಪಡೆಯೋದು ಅನಿವಾರ್ಯ.