ಸಾರಾಂಶ
ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ಅ.27ರಂದು ದುಷ್ಕರ್ಮಿಗಳಿಂದ ಭೀಕರ ಹಲ್ಲೆಗೊಳಗಾಗಿದ್ದ ಜಗದೇವಪ್ಪ ಶಂಕರ್ ಕ್ವಾಟ್ನೂರ್ (52) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸಧ್ಯ ಬಿಗುವಿನ ವಾತಾವರಣವಿದ್ದು ಸಿಪಿಐ ವಿ.ನಾರಾಯಣ್, ಪಿಎಸ್ಐ ಆಶಾ ರಾಥೋಡ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಹರಕಂಚಿ ಗ್ರಾಮದಲ್ಲಿ ಬಿಗುವಿನ ವಾತಾವರಣ: ಬೀಡು ಬಿಟ್ಟ ಪೊಲೀಸರುಕನ್ನಡಪ್ರಭ ವಾರ್ತೆ ಕಮಲಾಪುರ
ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ಅ.27ರಂದು ದುಷ್ಕರ್ಮಿಗಳಿಂದ ಭೀಕರ ಹಲ್ಲೆಗೊಳಗಾಗಿದ್ದ ಜಗದೇವಪ್ಪ ಶಂಕರ್ ಕ್ವಾಟ್ನೂರ್ (52) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸಧ್ಯ ಬಿಗುವಿನ ವಾತಾವರಣವಿದ್ದು ಸಿಪಿಐ ವಿ.ನಾರಾಯಣ್, ಪಿಎಸ್ಐ ಆಶಾ ರಾಥೋಡ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಅ.27ರಿಂದ 17ದಿನ ಚಿಕಿತ್ಸೆ ಪಡೆದ ನಂತರ ಹಲ್ಲೆಗೊಳಗಾಗದ್ದ ಜಗದೇವಪ್ಪರನ್ನು ನ.13ರಂದು ಜಿಮ್ಸ್‌ಗೆ ದಾಖಲಿಸಲಾಗಿತ್ತು. ಹರಕಂಚಿ ಗ್ರಾಮದ ರೌಡಿಶೀಟರ್ ಪರಮೇಶ್ವರ್ ನಾಯ್ಕೋಡಿ, ಸುನಿಲ್ ನಾಯ್ಕೋಡಿ, ದೇವರಾಜ್ ಗುಂಡಪ್ಪ ನಾಯ್ಕೋಡಿ, ಶಿವಶರಣಪ್ಪ ನಾಯ್ಕೋಡಿ, ಮಾಣಿಕ್ ಶಾಮರಾವ್ ನಾಯ್ಕೋಡಿ, ವಿಶಾಲ್ ತಿಪ್ಪಣ್ಣ ನಾಯ್ಕೋಡಿ, ಅನಿಲ್ ಗುಂಡಪ್ಪ ನಾಯ್ಕೋಡಿ, ಹಾಗೂ ಸಿದ್ದರಾಮ್ ಶಾಮರಾವ್ ನಾಯ್ಕೋಡಿ ಸೇರಿ ಒಟ್ಟು ಏಳು ಜನರ ವಿರುದ್ಧ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ್ ಪರಮೇಶ್ವರ್ ನಾಯ್ಕೋಡಿ, ದೇವರಾಜ್ ಗುಂಡಪ್ಪ ನಾಯ್ಕೋಡಿ, ಸುನಿಲ್ ಶಿವಶರಣಪ್ಪ ನಾಯ್ಕೋಡಿ, ಇವರನ್ನು ಪ್ರಕರಣ ದಾಖಲಾದ 6 ಗಂಟೆ ಒಳಗೆ ಬಂಧಿಸಲಾಯಿತು. ಕೆಲ ದಿನಗಳ ಹಿಂದೆ ಮಾಣಿಕ್ ಶಾಮರಾವ ನಾಯ್ಕೋಡಿಯನ್ನು ಬಂಧಿಸಲಾಗಿದೆ. ವಿಶಾಲ್ ತಿಪ್ಪಣ್ಣ ನಾಯ್ಕೋಡಿ, ಅನಿಲ್ ಗುಂಡಪ್ಪ ನಾಯ್ಕೋಡಿ,ಹಾಗೂ ಸಿದ್ದರಾಮ್ ನಾಯ್ಕೋಡಿ ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆಂದು ಮಹಾಗಾಂವ ಠಾಣೆ ಇಬ್ಬರು ಪೊಲೀಸ್ ಪೇದೆಯರನ್ನು ಅಮಾನತ್ತು ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.15ಜಿಬಿ9ಹರಕಂಚಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿರುವ ನೋಟ
15ಜಿಬಿ10ಜಗದೇವಪ್ಪ ಕ್ವಾಟ್ನೂರ್.