ಸಾರಾಂಶ
ಉನ್ನತ ಶ್ರೇಣಿಗೆ ತಲುಪಿದ ಬಳಿಕ ಬಡ ಜನರಿಗಾಗಿ ಸಹಾಯಹಸ್ತ ಚಾಚುವ ಮನಸ್ಸು ಇದ್ದವರಿಗೆ ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆ ಸಹಕಾರಿಯಾಗಿದೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವವರಿಗೆ ಮಾರ್ಗ ತೋರಿಸುವುದೇ ಈ ಸಂಸ್ಥೆಯಾಗಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್‌ನ ನೂತನ ಅಧ್ಯಕ್ಷೆ ಕಲ್ಪನಾ ಶಾಬಾದಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಉನ್ನತ ಶ್ರೇಣಿಗೆ ತಲುಪಿದ ಬಳಿಕ ಬಡ ಜನರಿಗಾಗಿ ಸಹಾಯಹಸ್ತ ಚಾಚುವ ಮನಸ್ಸು ಇದ್ದವರಿಗೆ ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆ ಸಹಕಾರಿಯಾಗಿದೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವವರಿಗೆ ಮಾರ್ಗ ತೋರಿಸುವುದೇ ಈ ಸಂಸ್ಥೆಯಾಗಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್‌ನ ನೂತನ ಅಧ್ಯಕ್ಷೆ ಕಲ್ಪನಾ ಶಾಬಾದಿ ಹೇಳಿದರು.ನಗರದ ಶುಭಶ್ರೀ ಹೋಟೆಲ್‌ನಲ್ಲಿ ನಡೆದ ಉತ್ತರ ವಿಜಯಪುರ ಇನ್ನರ್‌ವ್ಹೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಬದುಕು ಯಾವಾಗಲೂ ಎಲೆಗಳ ಮೇಲಿನ ನೀರಿನ ಹನಿಗಳು ಇದ್ದಂತೆ ನಳನಳಿಸುತ್ತಿರಬೇಕು. ಸಾಧ್ಯವಾದಷ್ಟು ಬಡವರಿಗೆ ನಾವು ಸಹಾಯ ಮಾಡುವಂತಿರಬೇಕು ಎಂದರು.ಮನುಷ್ಯನ ಬದುಕು ಮೂರು ಹಂತದಲ್ಲಿ ಇರುತ್ತದೆ. ಬಾಲ್ಯಾವಸ್ಥೆಯಲ್ಲಿ ಯಾವುದನ್ನೂ ಅರಿಯದೆ ಇರುತ್ತದೆ. ಯೌವನಾವಸ್ಥೆಯಲ್ಲಿ ಜೀವನ ಗೆಲುವಿಗಾಗಿ ಹೋರಾಟ ನಡೆದಿರುತ್ತದೆ. ಇನ್ನು ಪಕ್ವತಾವಸ್ಥೆಗೆ ಬಂದ ಬಳಿಕ ಮನುಷ್ಯನಿಗೆ ಸಾಮಾಜಿಕವಾಗಿ ಏನಾದರೂ ಸಾಧಿಸಬೇಕು ಎಂಬ ತುಡಿತ ಇರುತ್ತದೆ ಎಂದು ತಿಳಿಸಿದರು.ನಾವು ಏನು ಆಗಬೇಕು ಎಂದುಕೊಂಡಿದ್ದೆವೋ ಅದು ಆಗಿಯೇ ಆಗುತ್ತದೆ. ನಮ್ಮಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಮ್ಮಿಂದ ನಾಲ್ಕು ಜನಕ್ಕೆ ಒಳ್ಳೆಯದಾಗುವುದನ್ನು ಬಯಸಬೇಕು. ಇನ್ನೊಬ್ಬರಿಗೆ ಸಹಾಯ ಮಾಡಲು ವಿಶ್ವಾಸಾರ್ಹ ಮಾರ್ಗ ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆ ತೋರಿಸುತ್ತದೆ ಎಂದರು.ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಕಲ್ಪನಾ ಶಾಬಾದಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಗಿರಗಾವಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಮುಕರ್ತಿಹಾಳ, ಖಜಾಂಚಿ ಡಾ.ಸವಿತಾ ಕಲ್ಲೂರ, ಐಎಸ್‌ಒ ಸುವರ್ಣಾ ತೇಲಿ, ಕ್ಲಬ್ ಬುಲೆಟಿನ್ ಮಾಗ್ಜಿನ್ ಸಂಪಾದಕಿ ಡಾ.ನಂದಿನಿ ಮುಚ್ಚಂಡಿ, ಕಾರ್ಯಕಾರಿ ಸಮೀತಿ ಸದಸ್ಯರಾದ ರಾಜಶ್ರೀ ಮೊಗಲಿ, ಮಹೇಶ್ವರಿ ಪಾಟೀಲ್, ಪುಷ್ಪಾ ಪವಾರ, ಮಂಗಲಾ ಪಾಟೀಲ್, ಸ್ಮಿತಾ ಬಗಲಿ, ಸುಮತಿ ಬಗಲಿ ಅವರಿಗೆ ಮಾಜಿ ಅಧ್ಯಕ್ಷೆ ಸ್ಮೀತಾ ಪಾಟೀಲ್ ಹಾಗೂ ವಿಜಯಲಕ್ಷ್ಮಿ ಅಧಿಕಾರ ಹಸ್ತಾಂತರ ಮಾಡಿ ಪದಗ್ರಹಣ ಮಾಡಲಾಯಿತು.ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಮೇಧಾ ಮಿರಜ್ ಅವರು ನೂತನವಾಗಿ ಅಧಿಕಾರ ವಹಿಸಿಕೊಂಡ ಪದಾಧಿಕಾರಿಗಳಿಗೆ ಅಭಿನಂದಿಸಿ, ಚಾರ್ಟಡ್ ಅಕೌಂಟೆಂಟ್‌ಗಳು ಮತ್ತು ವೈದ್ಯರು ಸೇರಿದಂತೆ ಹಲವು ಗಣ್ಯರಿಗೆ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಸಂಧ್ಯಾ ಜಹಾಗಿರದಾರ, ಸುನಂದಾ ಬಿರಾದಾರ, ಭಾವನಾ ಹಲ್ಕುಡೆ, ಸುಮಂಗಲಾ ಸಿಂಧೂರ, ಡಾ.ಸ್ಪೂರ್ತಿ ಹಂಪನವರ, ಡಾ.ವೀಣಾ, ಸಿಂಧು ಧಾರವಾಡಕರ, ಅನ್ನಪುರ್ಣಾ ಶಿರಡೋಣ, ಎಸ್.ಜಿ.ಅಪರಂಜಿ, ಶ್ವೇತಾ ಶಿರಡೋಣ, ಶ್ವೇತಾ ಶಿರಡೋಣ, ಚೇತನಾ ಬಿರಾದಾರ, ರೋಟರಿ ಕ್ಲಬ್ ನ ದಿಲೀಪಕುಮಾರ ಪೂಜಾರಿ, ಉದಯ ಯಾಳವಾರ, ಮಲ್ಲು ಕಲಾದಗಿ, ಶ್ರೀಪಾದ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆಯಲ್ಲಿ ಇಲ್ಲಿಯವರೆಗೆ 28 ಅಧ್ಯಕ್ಷರು ಆಗಿದ್ದು, ಉತ್ತಮ ಸೇವೆ ಸಲ್ಲಿಸಿದ್ದಾರೆ. ಇದೀಗ ನಾನು 29ನೇ ಅಧ್ಯಕ್ಷೆಯಾಗಿ ಅವರಂತೆ ಸಾಮಾಜಿಕ ಸೇವೆ ಮಾಡುತ್ತೇನೆ. ಬಡ ಸಮುದಾಯಕ್ಕೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯಗಳನ್ನು ಸಂಸ್ಥೆಯ ವತಿಯಿಂದ ಮಾಡಲಾಗುವುದು. ಪರಿಸರಕ್ಕಾಗಿ ಗಿಡ ಬೆಳೆಸುವುದು, ವೈದ್ಯಕೀಯವಾಗಿ ಬಡವರಿಗೆ ನೇತ್ರ ಶಸ್ತ್ರಚಿಕಿತ್ಸೆಗಳು, ಮಹಿಳಾ ಉದ್ಯೋಗಿಕರಣಕ್ಕೆ ಹೊಲಿಗೆ ಯಂತ್ರ ವಿತರಣೆ ಮಾಡುವ ಮೂಲಕ ಅನೇಕ ಜಾಗೃತಿ ಯೋಜನೆಗಳನ್ನು ರೂಪಿಸಲಾಗುವುದು. ಅಲ್ಲದೆ ತಮ್ಮ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆಯ ಸಮಸ್ತ ತಂಡಕ್ಕೆ ಅಭಿನಂದನೆ ಹಾಗೂ ಧನ್ಯವಾದಗಳು.- ಕಲ್ಪನಾ ಶಾಬಾದಿ, ಇನ್ನರ್‌ವ್ಹೀಲ್ ಕ್ಲಬ್ ನೂತನ ಅಧ್ಯಕ್ಷೆ.