ಸಾರಾಂಶ
-ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತು
----ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನಗಣತಿಯ ಜೊತೆ ಜಾತಿ ಗಣತಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜನಗಣತಿ ಆಗಿರಲಿಲ್ಲ. ಅಂದಿನ ಬ್ರಿಟಿಷ್ ಸರ್ಕಾರ ೫೦೦ಕ್ಕೂ ಹೆಚ್ಚು ಸಂಸ್ಥಾನ ರಾಜ್ಯಗಳಿದ್ದಾಗ ಜನಗಣತಿ ಮಾಡಿತ್ತು. ನಂತರ ಯಾವ ಸರ್ಕಾರ ಬಂದರೂ ಎಲ್ಲ ಯೋಜನೆಗಳೂ ಏನೋ ಒಂದು ಅಂದಾಜಿನಲ್ಲಿ ರೂಪುಗೊಳ್ಳುತ್ತಿದ್ದವು. ಜನಗಣತಿಗೆ ಒತ್ತಡ ಬಂದರೂ ಏನಾದರೊಂದು ನೆಪದಿಂದ ಮುಂದೂಡಲ್ಪಡುತ್ತಿತ್ತು ಎಂದ ಅವರು ಗಣತಿ ಬರೇ ನೌಕರಿಗಲ್ಲ. ಅಭಿವೃದ್ಧಿಗಾಗಿಯೂ ಬೇಕು ಎಂದರು.
ಪ್ರಸ್ತಾವಿತ ಜನಗಣತಿ ಜೊತೆ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಪರಿಗಣಿಸಬೇಕು. ಕೇಂದ್ರ ಸರ್ಕಾರ ಇದನ್ನು ಮಾಡುತ್ತದೆ.ಇದಕ್ಕೆ ಸುಮಾರು 12 ಸಾವಿರ ಕೋಟಿ ರು.ಬೇಕು. ಗಣತಿ ಮಾಡಿ ಜಾರಿಗೊಳಿಸಲು 18-21 ತಿಂಗಳು ಬೇಕಾಗಬಹುದು. ಜನರು ತಾಳ್ಮೆಯಿಂದ ಇರಬೇಕಾಗುತ್ತದೆ ಎಂದರು.
ರಾಜ್ಯ ಸರ್ಕಾರದ ಜಾತಿ ಗಣತಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜನಗಣತಿ ನಡೆಸಲು ರಾಜ್ಯಕ್ಕೆ ಆ ಅಧಿಕಾರ ಇಲ್ಲ. ಮಾಡಿದರೂ ಮಹತ್ವ ಇರುವುದಿಲ್ಲ. ಸ್ವತಃ ಸಿದ್ದರಾಮಯ್ಯನವರೇ ಮೋದಿಯವರ ಗಣತಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ, ಪ್ರಮುಖರಾದ ಮಾಜಿ ಶಾಸಕ ಸ್ವಾಮಿ ರಾವ್, ಧರ್ಮಪ್ರಸಾದ, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್, ಸುಧಾಕರ, ಪ್ರಭಾಕರ, ಸುಮಿತ್ರಾ, ಸುಮಂಗಲಾ, ವಿಕಾಸ್ ಇದ್ದರು.
--ಪೊಟೋ: 02ಎಸ್‌ಎಂಜಿಕೆಪಿ06
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿದರು.