ಸಾರಾಂಶ
ನಾನು ಈ ಹಿಂದೆ 2 ಬಾರಿ, ಈಗ ಮತ್ತೊಮ್ಮೆ ಶಾಸಕನಾಗಿದ್ದೇನೆ. ನನ್ನ ಹಿರಿತನ, ಕಾರ್ಯವೈಖರಿ ಗಮನಿಸಿ ಸಚಿನ ಸ್ಥಾನ ನೀಡುವ ವಿಶ್ವಾಸವಿದೆ.
ಕೊಳ್ಳೇಗಾಲ:ಹೈಕಮಾಂಡ್ ನನ್ನ ಹಿರಿತನಕ್ಕೆ ಮನ್ನಣೆ ನೀಡಿ ಸಚಿವ ಸ್ಥಾನ ನೀಡಿದರೆ ನಿಭಾಯಿಸಲು ಸಿದ್ಧ ಎಂದು ಶಾಸಕ ಎಆರ್ ಕೃಷ್ಣಮೂರ್ತಿ ಹೇಳಿದರು.ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಅವರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನಾನು ಈ ಹಿಂದೆ 2 ಬಾರಿ, ಈಗ ಮತ್ತೊಮ್ಮೆ ಶಾಸಕನಾಗಿದ್ದೇನೆ. ನನ್ನ ಹಿರಿತನ, ಕಾರ್ಯವೈಖರಿ ಗಮನಿಸಿ ಸಚಿನ ಸ್ಥಾನ ನೀಡುವ ವಿಶ್ವಾಸವಿದೆ. ಈ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿರುವೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಮಾಜಿ ಅಧ್ಯಕ್ಷರಾದ ಬಸ್ತಿಪುರ ಶಾಂತು, ರೇಖಾ ರಮೇಶ್, ರಮೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ಲಿಂಗರಾಜು, ತಾಪಂನ ಮಾಜಿ ಉಪಾಧ್ಯಕ್ಷ ಹಂಪಾಪುರ ಬಸವಣ್ಣ, ಸ್ವಾಮಿ ನಂಜಪ್ಪ, ಬೀಮನಗರದ ಯಜಮಾನ ಸಿದ್ದಾರ್ಥ, ಸುರೇಶ್, ರಾಜಶೇಖರಮೂರ್ತಿ ಇನ್ನಿತರಿದ್ದರು.
-------23ಕೆಜಿಎಲ್71 ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿರವರನ್ನು ಕಾಂಗ್ರೆಸ್ ಮುಖಂಡರು ಅಭಿನಂದನೆ ಸಲ್ಲಿಸಿದರು.;Resize=(128,128))
;Resize=(128,128))