ಚೆಲುವನಾರಾಯಣಸ್ವಾಮಿಯ ಅಶ್ವವಾಹನೋತ್ಸವದ ಜಂಬೂ ಸವಾರಿ ಮತ್ತು ವಿಜಯೋತ್ಸವ ಮೆರವಣಿಗೆ ವಿಜಯದಶಮಿಯ ದಿನವಾದ ಬುಧವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿಯ ಅಶ್ವವಾಹನೋತ್ಸವದ ಜಂಬೂ ಸವಾರಿ ಮತ್ತು ವಿಜಯೋತ್ಸವ ಮೆರವಣಿಗೆ ವಿಜಯದಶಮಿಯ ದಿನವಾದ ಬುಧವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು.ವಾಹನೋತ್ಸವ ಮಂಟಪದಿಂದ ಸಂಜೆ 4.30ಕ್ಕೆ ಪೊಲೀಸ್ ಗೌರವ ವಂದನೆಯೊಂದಿಗೆ ಆರಂಭಗೊಂಡ ಅಶ್ವವಾಹನೋತ್ಸವ ರಾಜಬೀದಿ ಬಸ್ ನಿಲ್ದಾಣದ ರಸ್ತೆಯ ಮೂಲಕ ಬನ್ನಿಮಂಟಪ ತಲುಪಿತು. ಅಲ್ಲಿರುವ ಶಮಿ ವೃಕ್ಷಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದರು.
ನಂತರ ದಶದಿಕ್ಕುಗಳಿಗೂ ಬಾಣ ಪ್ರಯೋಗ ಮಾಡಿ ನಮ್ಮಲ್ಲಿರುವ ರಾಕ್ಷಸಗುಣಗಳು ಸಂಹಾರವಾಗಿ ಸಾತ್ವಿಕ ಗುಣಗಳು ನೆಲೆಸಲಿ, ನಾಡು ಮಳೆ ಬೆಳೆಯಿಂದ ಕೂಡಿ ಸಮೃದ್ಧಿಯಾಗಿಲಿ ಎಂದು ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಲಾಯಿತು.ಶ್ರೀರಾಮಚಂದ್ರ ರಾವಣನ ಸಂಹಾರ ಮಾಡಿದ ನಿಮಿತ್ತ ನಡೆಯುವ ವಿಜದಶಮಿಯ ಆಚರಣೆಗೆ ಮಹತ್ವನೀಡಲು ಸೂಚಿಸಿದ್ದ ಪರಿಣಾಮ ಈ ವರ್ಷ ಉತ್ಸವ ವಿಶೇಷ ಮಹತ್ವ ಪಡೆದುಕೊಂಡಿತ್ತು. ಬನ್ನಿ ಪೂಜೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹೋದರ ರಾಘು, ದೇಗುಲದ ಇಒ ಶೀಲಾ, ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಸೇರಿದಂತೆ ಎಲ್ಲಾ ಸದಸ್ಯರು, ಕೈಂಕರ್ಯಪರರು ಭಾಗಿಯಾಗಿದ್ದರು.
ಬನ್ನಿಪೂಜೆ ನಂತರ ಚೆಲುವನಾರಾಯಣಸ್ವಾಮಿಯವರ ವಿಜಯೋತ್ಸವ ಭವ್ಯ ಮೆರವಣಿಗೆಯೊಂದಿಗೆ ದೇವಾಲಯದತ್ತ ಸಾಗಿ ಅಂಗಡ ಬೀದಿವೃತ್ತದಲ್ಲಿ ಬಂದಾಗ ಕಲ್ಯಾಣನಾಯಕಿ ಅಮ್ಮನವರು ಶೇಷವಾಹನೋತ್ಸವದಲ್ಲಿ ಬಂದು ಸ್ವಾಗತಿಸಿದ ವೇಳೆ ಭಕ್ತರ ಹರ್ಷೋದ್ಘಾರ ಮುಗಿಸಲು ಮುಟ್ಟಿತ್ತು.ಈ ವೇಳೆ ಗಡಚಿಕ್ಕುವ ಪಟಾಕಿಗಳನ್ನು ಸಿಡಿಸುವ ಮೂಲಕ ಸಂಬ್ರಮಕ್ಕೆ ಮತ್ತಷ್ಟು ಮೆರಗು ನೀಡಲಾಗಿತ್ತು. ಉತ್ಸವಕ್ಕೆ ಬ್ರಾಸ್ ಬ್ಯಾಂಡ್, ಮಂಗಳ ವಾದ್ಯ, ಪಾಂಡವಪುರ ವಿಜಯ ಕಾಲೇಜಿನ ಬ್ಯಾಂಡ್, ಡೊಳ್ಳುಕುಣಿತ ಯಕ್ಷಗಾನ ಗೊಂಬೆಗಳು, ಪಟಾಕುಣಿತ ಜಾನಪದ ತಂಡಗಳೂ ಭಾಗಿಯಾಗಿ ಸಂಭ್ರಮ ಹೆಚ್ಚಸಿತು.
ದೇವಾಲಯದ ಆವರಣವನ್ನು ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರಮಾಡಲಾಗಿತ್ತು. ಮೇಲುಕೋಟೆ ಇನ್ಸ್ಪೆಕ್ಟರ್ ಆನಂದಗೌಡ ಖುದ್ದು ಸಿಬ್ಬಂದಿಯೊಂದಿಗೆ ಹಾಜರಿದ್ದು ಭದ್ರತೆ ಒದಗಿಸಿದ್ದರು.ಕಿಕ್ಕೇರಿ ಹೋಬಳಿಯಾದ್ಯಂತ ಸಂಭ್ರಮದ ಆಯುಧ ಪೂಜೆ
ಕಿಕ್ಕೇರಿರೈತರಿಗೆ ನೊಗ, ಕುಡುಗೋಲು ಇದ್ದರೆ, ಗಡಿ ಮತ್ತಿತರ ರಕ್ಷಣೆಗೆ ವಿವಿಧ ಆಯುಧಗಳು ಇವೆ. ಇವೆಲ್ಲವನ್ನು ಒಳಿತಿಗಾಗಿ ಬಳಸಬೇಕು ಎಂದು ಕಿಕ್ಕೇರಿ ಇನ್ಸ್ನ್ ಪೆಕ್ಟರ್ ಎಸ್.ಎನ್. ಜಯರಾಂ ಹೇಳಿದರು.ಪಟ್ಟಣದ ಆರಕ್ಷಕ ಠಾಣೆಯಲ್ಲಿ ಏರ್ಪಡಿಸಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಯುಧಗಳನ್ನು ಒಳಿತಿಗಾಗಿ ಅಸ್ತ್ರಗಳಾಗಿ ಬಳಸಬೇಕು. ರೈತ ಬಳಸುವ ಕುಡುಗೋಲು ಬೇಸಾಯಕ್ಕೆಎಂಬುದನ್ನು ಅರಿಯಬೇಕು. ಅಸ್ತ್ರಗಳು ಅಟಿಕೆ ವಸ್ತುಗಳಾಗಬಾರದು. ಇದು ಪ್ರದರ್ಶನ, ಬೆದರಿಕೆಗೆ ಬಳಸಿದರೆ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.ವರ್ಷಪೂರ್ತಿ ಬಳಸುವ ಯಂತ್ರೋಪಕರಣ, ಸಾಮಗ್ರಿಗಳು ದೀರ್ಘ ಬಳಕೆ, ಒಳಿತಿಗಾಗಿ ಲಭಿಸಲಿ ಎಂದು ವಿಜಯದ ಸಂಕೇತವಾಗಿ ಪೂರ್ವಜರು ಬಳಸಲಾಗುತ್ತಿತ್ತು. ಇದನ್ನು ಅರಿತು ಜನತೆ ಆಯುಧ ಪೂಜೆಯನ್ನು ಸಂಭ್ರಮದ ಹಬ್ಬವಾಗಿ ಆಚರಿಸಬೇಕು ಎಂದು ನುಡಿದರು.ಹೋಬಳಿಯ ವಿವಿಧೆಡೆ ವಿಜೃಂಭಣೆಯಿಂದ ಭರದ ಹಿನ್ನೆಲೆ ಇದ್ದರೂ ಮೋಟಾರ್ ಬೈಕ್, ಬೈಸಿಕಲ್, ಪಂಪುಸೆಟ್ ಯಂತ್ರ ಮತ್ತಿತರ ವಸ್ತುಗಳಿಗೆ ನಾಗರೀಕರು ಪೂಜಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಹೋಬಳಿಯಾದ್ಯಂತ ಸಂಭ್ರಮದ ಆಯುಧ ಪೂಜೆರೈತರಿಗೆ ನೊಗ, ಕುಡುಗೋಲು ಇದ್ದರೆ, ಗಡಿ ಮತ್ತಿತರ ರಕ್ಷಣೆಗೆ ವಿವಿಧ ಆಯುಧಗಳು ಇವೆ. ಇವೆಲ್ಲವನ್ನು ಒಳಿತಿಗಾಗಿ ಬಳಸಬೇಕು ಎಂದು ಕಿಕ್ಕೇರಿ ಇನ್ಸ್ನ್ ಪೆಕ್ಟರ್ ಎಸ್.ಎನ್. ಜಯರಾಂ ಹೇಳಿದರು.ಪಟ್ಟಣದ ಆರಕ್ಷಕ ಠಾಣೆಯಲ್ಲಿ ಏರ್ಪಡಿಸಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಯುಧಗಳನ್ನು ಒಳಿತಿಗಾಗಿ ಅಸ್ತ್ರಗಳಾಗಿ ಬಳಸಬೇಕು. ರೈತ ಬಳಸುವ ಕುಡುಗೋಲು ಬೇಸಾಯಕ್ಕೆಎಂಬುದನ್ನು ಅರಿಯಬೇಕು. ಅಸ್ತ್ರಗಳು ಅಟಿಕೆ ವಸ್ತುಗಳಾಗಬಾರದು. ಇದು ಪ್ರದರ್ಶನ, ಬೆದರಿಕೆಗೆ ಬಳಸಿದರೆ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.ವರ್ಷಪೂರ್ತಿ ಬಳಸುವ ಯಂತ್ರೋಪಕರಣ, ಸಾಮಗ್ರಿಗಳು ದೀರ್ಘ ಬಳಕೆ, ಒಳಿತಿಗಾಗಿ ಲಭಿಸಲಿ ಎಂದು ವಿಜಯದ ಸಂಕೇತವಾಗಿ ಪೂರ್ವಜರು ಬಳಸಲಾಗುತ್ತಿತ್ತು. ಇದನ್ನು ಅರಿತು ಜನತೆ ಆಯುಧ ಪೂಜೆಯನ್ನು ಸಂಭ್ರಮದ ಹಬ್ಬವಾಗಿ ಆಚರಿಸಬೇಕು ಎಂದು ನುಡಿದರು.ಹೋಬಳಿಯ ವಿವಿಧೆಡೆ ವಿಜೃಂಭಣೆಯಿಂದ ಭರದ ಹಿನ್ನೆಲೆ ಇದ್ದರೂ ಮೋಟಾರ್ ಬೈಕ್, ಬೈಸಿಕಲ್, ಪಂಪುಸೆಟ್ ಯಂತ್ರ ಮತ್ತಿತರ ವಸ್ತುಗಳಿಗೆ ನಾಗರೀಕರು ಪೂಜಿಸಿ, ಸಿಹಿ ಹಂಚಿ ಸಂಭ್ರಮಿಸಿದರು.