ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೊಸ ಯುಗವನ್ನೇ ಸೃಷ್ಟಿಸಿದರು

| Published : Oct 01 2024, 01:21 AM IST

ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೊಸ ಯುಗವನ್ನೇ ಸೃಷ್ಟಿಸಿದರು
Share this Article
  • FB
  • TW
  • Linkdin
  • Email

ಸಾರಾಂಶ

ಸಾಧಕರಾದ ಡಾ. ಲತಾ ರಾಜಶೇಖರ್, ಚಂದ್ರಗುಪ್ತ ವಿ. ಜೈನ್, ಟಿ.ಪಿ. ರಮೇಶ್, ರಾಮನಾಥ ಗುಪ್ತ, ಕೆ. ಓಬಯ್ಯ ಮತ್ತು ಪ್ರಕಾಶ್ ರಾಜೇ ಅರಸ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕರ್ನಾಟಕದಲ್ಲಿ ಒಂದು ಹೊಸ ಯುಗವನ್ನೇ ಸೃಷ್ಟಿ ಮಾಡಿದರು ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು.ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಸಂಪಾದಿಸಿರುವ ಅರಸು ಚುಟುಕು ಸ್ಪರ್ಶಗಳು ಕೃತಿ ಬಿಡುಗಡೆ ಮತ್ತು ಸಾಧಕರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನನಗೂ ಮತ್ತು ಡಿ. ದೇವರಾಜ ಅರಸು ಅವರಿಗೂ ಸೋಜಿಗದ ಪರಿಚಯ. 1972 ರಿಂದ ಅವರ ಕೊನೆಯವರೆಗೂ ಇದ್ದವನು ನಾನು. ಇಂದಿರಾ ಗಾಂಧಿಯವರನ್ನು ಕರ್ನಾಟಕಕ್ಕೆ ಕರೆತಂದು ಗೆಲ್ಲಿಸಿದ್ದ ಹೆಗ್ಗಳಿಕೆ ಅರಸು ಅವರಿಗೆ ಸಲ್ಲುತ್ತದೆ. ರೈತರಿಗೆ ಅರಸು ಅವರು ಕೊಟ್ಟಂತ ಬಳುವಳಿ ಯಾರು ಎಂದಿಗೂ ಮರೆಯುವ ಹಾಗಿಲ್ಲ ಎಂದರು.ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಸಂತಸದ ವಿಷಯ. ಸಮಾಜ ಸಾಧಕರನ್ನು ಗುರುತಿಸಬೇಕು. ಹಾಗೆಯೇ, ಸಾಹಿತಿಗಳು ಸಾಧಕರನ್ನು ಗುರುತಿಸಬೇಕು. ಈ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಬಹಳ ಅರ್ಥ ಗರ್ಭಿತವಾಗಿದೆ ಎಂದು ಅವರು ಶ್ಲಾಘಿಸಿದರು.ಪ್ರಶಸ್ತಿ ಪ್ರದಾನ: ಸಾಧಕರಾದ ಡಾ. ಲತಾ ರಾಜಶೇಖರ್, ಚಂದ್ರಗುಪ್ತ ವಿ. ಜೈನ್, ಟಿ.ಪಿ. ರಮೇಶ್, ರಾಮನಾಥ ಗುಪ್ತ, ಕೆ. ಓಬಯ್ಯ ಮತ್ತು ಪ್ರಕಾಶ್ ರಾಜೇ ಅರಸ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಅವರು ಸಂಪಾದಿಸಿರುವ ಅರಸು ಚುಟುಕು ಸ್ಪರ್ಶಗಳು ಕೃತಿಯನ್ನು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ಬಿಡುಗಡೆಗೊಳಿಸಿದರು.ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಮೊದಲಾದವರು ಇದ್ದರು.