ಸಾರಾಂಶ
ಅಖಂಡ ಭಾರತಕ್ಕಾಗಿ ಒಂದು ದೀಪ ಬೆಳಗುವುದಾದರೆ ಅದು ಸರ್ವ ಧರ್ಮ ಸಮನ್ವಯ ದೀಪ ಎಂದು ಹಾರಕೂಡಿನ ಡಾ.ಚೆನ್ನವೀರ ಶಿವಚಾರ್ಯರು ನುಡಿದರು. ಕುರಾನ್ ಪ್ರವಚನದ 3ನೇ ದಿನದ ದಿವ್ಯ ಸಾನ್ನಿಧ್ಯ ವಹಿಸಿದ ಮಾತನಾಡಿದ ಅವರು, ಸನಾತನ ಸಾತ್ವಿಕ ಮೌಲ್ಯಗಳ ಆದಿಯಾಗಿ ಇಂದಿನ ವರೆಗೆ ಮನೂಕೂಲದ ಕಲ್ಯಾಣಕ್ಕಾಗಿ ಶ್ರಮಿಸಿದ ಎಲ್ಲ ಮತ, ಪಂತಗಳ ಮೂಲ ತೆರಳು ಸತ್ಯ ಮತ್ತು ದಯೆ ಹೃದಯ ವೈಶಾಲ್ಯದ ತಳಹದಿ ಮೇಲೆ ಮೌಢ್ಯ ರಹಿತವಾದ ದಿಗ್ ದರ್ಶನ ನೀಡುವದೆ ಧರ್ಮ ಎಂದು ತಿಳಿಸಿದರು. ರಾಮ ರಹೀಂ, ಬುದ್ಧ, ಬಸವೇಶ್ವರ, ಎಲ್ಲಾ ದಾರ್ಶನಿಕರು ತೋರಿದ ಮಾರ್ಗ ನಾವು ನಡೆದರೆ ಇಡಿ ವಿಶ್ವವೇ ಒಂದು ಪರಮಧಾಮವಾಗುವುದು ಎಂದರು
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅಖಂಡ ಭಾರತಕ್ಕಾಗಿ ಒಂದು ದೀಪ ಬೆಳಗುವುದಾದರೆ ಅದು ಸರ್ವ ಧರ್ಮ ಸಮನ್ವಯ ದೀಪ ಎಂದು ಹಾರಕೂಡಿನ ಡಾ.ಚೆನ್ನವೀರ ಶಿವಚಾರ್ಯರು ನುಡಿದರು. ಕುರಾನ್ ಪ್ರವಚನದ 3ನೇ ದಿನದ ದಿವ್ಯ ಸಾನ್ನಿಧ್ಯ ವಹಿಸಿದ ಮಾತನಾಡಿದ ಅವರು, ಸನಾತನ ಸಾತ್ವಿಕ ಮೌಲ್ಯಗಳ ಆದಿಯಾಗಿ ಇಂದಿನ ವರೆಗೆ ಮನೂಕೂಲದ ಕಲ್ಯಾಣಕ್ಕಾಗಿ ಶ್ರಮಿಸಿದ ಎಲ್ಲ ಮತ, ಪಂತಗಳ ಮೂಲ ತೆರಳು ಸತ್ಯ ಮತ್ತು ದಯೆ ಹೃದಯ ವೈಶಾಲ್ಯದ ತಳಹದಿ ಮೇಲೆ ಮೌಢ್ಯ ರಹಿತವಾದ ದಿಗ್ ದರ್ಶನ ನೀಡುವದೆ ಧರ್ಮ ಎಂದು ತಿಳಿಸಿದರು. ರಾಮ ರಹೀಂ, ಬುದ್ಧ, ಬಸವೇಶ್ವರ, ಎಲ್ಲಾ ದಾರ್ಶನಿಕರು ತೋರಿದ ಮಾರ್ಗ ನಾವು ನಡೆದರೆ ಇಡಿ ವಿಶ್ವವೇ ಒಂದು ಪರಮಧಾಮವಾಗುವುದು ಎಂದರು.ಖ್ಯಾತ ಪ್ರವಚನಕಾರ ಮಹ್ಮದ ಕುಂಞ ಅವರು ಯಶಸ್ವಿ ಜೀವನ ಕುರಿತು ಪ್ರವಾದಿ ಮೊಹ್ಮದ ಪೈಗಂಬರ ನೀಡಿದ ಸಂದೇಶ ಬಗ್ಗೆ ಮಾತನಾಡಿದರು. ದೊಡ್ಡ ದೊಡ್ಡ ಕಾರಿನಲ್ಲಿ ಕುಳಿತು ಒಡಾಡಿದರೆ ಅದು ಸಮೃದ್ಧಿ ಅಲ್ಲಾ ಸಂತೃಪ್ತಿಯು ಅಲ್ಲಾ, ನಮಗೆ ಸಿಕ್ಕಿರುವುದರಲ್ಲಿಯೇ ಸಂತೃಪ್ತಿಯಾಗಿರುವುದೇ ನಿಜವಾದ ಜೀವನ ಎಂದರು. ಪ್ರತಿಯೊಬ್ಬರಿಗೂ ಮರಣ ಬರುತ್ತದೆ ಅದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ ಹೀಗಾಗಿ ಸಾಮ್ರಾಟಗಾರನಾಗಿ ಜಗತ್ತೆ ಜಯಸಿದರು ಹೋಗುವುದು ಮಾತ್ರ ಬರಿಗೈಯಲ್ಲಿ. ಹೀಗಾಗಿ ಇರುವಷ್ಟು ಜೀವನ ಸಮಾಧಾನ ಸಂತೃಪ್ತಿಯಿಂದ ಇರಬೇಕೆಂದು ಕುರಾನ್ ಹೇಳುತ್ತದೆ ಎಂದರು.
ಜಮಾತೆ ಇಸ್ಲಾಮಿ ಹಿಂದ್ ಬೀದರ್ ಜಿಲ್ಲಾ ಸಂಚಾಲಕ ಇಕ್ಬಾಲ್ ಗಾಝಿ, ಅಬ್ದುಲ್ ಫೂರ್ಕನ್ ಜಹೀರಾಬಾದ ಮತ್ತು ಮೊಹಮ್ಮದ್ ನಯಿಮೋದ್ದಿನ್ ಮಾತನಾಡಿದರು. ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಚಾರ್ಯರು, ಮಾಜಿ ಎಂಎಲ್‌ಸಿ ವಿಜಯಸಿಂಗ, ಸಿಪಿಐ ಅಲಿಸಾಬ, ಅರ್ಜುನ ಕನಕ, ನೀಲಕಂಠ ರಾಠೋಡ, ಯಶೋಧಾ ರಾಠೋಡ, ಸಾವಿತ್ರಿ ಸಲಗರ, ಲತಾ ಹಾರಕೂಡೆ, ಸತೀಶ ಮೂಳೆ, ಮುಜಾಹೀದ ಪಾಶಾ ಖುರೇಶಿ, ಜಮಾತೆ ಇಸ್ಲಾಂ ಹಿಂದ ಬಸವಕಲ್ಯಾಣ ಅದ್ಯಕ್ಷ ಮೋಹಮ್ಮದ್ ಅಸ್ಲಮ ಜನಾಬ, ಧನರಾಜ ತಾಳಂಪಳ್ಳಿ, ಮುಂತಾದವರಿದ್ದರು.