ಕನ್ನಡಪ್ರಭ ವಾರ್ತೆ ವಿಜಯಪುರ ಬಾಗಲಕೋಟೆಯಲ್ಲಿ ಡಿ.ಕೆ.ಶಿವಕುಮಾರ ಸೋಲಿಸಬೇಕು ಅಂತಾರೆ, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸೋಲಿಸಬೇಕು ಅಂತಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ ನಾಯಕರೇ ಮುಂದಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದ್ದಾರೆ. 20ಕ್ಕೂ ಅಧಿಕ ಕಾಂಗ್ರೆಸ್ ಶಾಸಕರ ದೆಹಲಿ ಪ್ರಯಾಣ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಯಾವಾಗ ಶುರುವಾಯಿತು ಆಗಿನಿಂದ ಸರ್ಕಾರದ ಯಾವುದೆ ಕೆಲಸ ಮಾಡುತ್ತಿಲ್ಲ,

ಕನ್ನಡಪ್ರಭ ವಾರ್ತೆ ವಿಜಯಪುರ

ಬಾಗಲಕೋಟೆಯಲ್ಲಿ ಡಿ.ಕೆ.ಶಿವಕುಮಾರ ಸೋಲಿಸಬೇಕು ಅಂತಾರೆ, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸೋಲಿಸಬೇಕು ಅಂತಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ ನಾಯಕರೇ ಮುಂದಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು.

20ಕ್ಕೂ ಅಧಿಕ ಕಾಂಗ್ರೆಸ್ ಶಾಸಕರ ದೆಹಲಿ ಪ್ರಯಾಣ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಯಾವಾಗ ಶುರುವಾಯಿತು ಆಗಿನಿಂದ ಸರ್ಕಾರದ ಯಾವುದೆ ಕೆಲಸ ಮಾಡುತ್ತಿಲ್ಲ, ಸರಿಯಾಗಿ ಆಡಳಿತ ನಡೆಸುವ ಪರಸ್ಥಿತಿ ಉಳಿದಿಲ್ಲ, ಇದೆಲ್ಲದರ ಕಾರಣ ದೆಹಲಿ ಪ್ರಯಾಣ ನಡೆದಿದೆ. ಅರ್ಹತೆ ಇದ್ದವರನ್ನು ಮಾಡಲಿ, ಅದನ್ನೆಲ್ಲ ಬಿಟ್ಟು ಇವರು ಲಾಬಿ ಮಾಡೋದು ಸರಿಯಲ್ಲ. ನನ್ನ ಮಂತ್ರಿ ಮಾಡಿದ್ರೇ ಇಷ್ಟು ಕೋಟಿ ಕೊಡುವೆ, ಸೋನಿಯಾ ಗಾಂಧಿಗೆ ದೆಹಲಿಯಲ್ಲಿ ಒಂದು ಮನೆ ಕೊಡಿಸುವೆ ಎಂಬ ವ್ಯವಸ್ಥೆ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಇದೊಂದು ಕೆಟ್ಟ ಸ್ವಭಾವ ಬೆಳೆದು ಬಿಟ್ಟಿದೆ. ಯಾರು ರಾಜ್ಯಾಧ್ಯಕ್ಷರು ಆಗಿರ್ತಾರೆ ಅವರು ಮೇಲಿನವರನ್ನು ಮ್ಯಾನೇಜ್ ಮಾಡಿ ಬಿಟ್ಟಿರ್ತಾರೆ. ಅವರು ಅಧ್ಯಕ್ಷರು ಸೂರ್ಯ, ಚಂದ್ರರು ಅಂತಾ ಹೇಳುತ್ತಾರೆ, ರಾಜಕಾರಣದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ ಅನ್ನು ಪರಿಸ್ಥಿತಿ ಈಗ ಎದುರಾಗಿದೆ ಎಂದರು. ವಿಜಯಪುರದಲ್ಲಿ ನಡೆಯುವ ನವರಸಪೂರ ಉತ್ಸವ ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಲ್ಲ, ಉತ್ಸವಕ್ಕೆ ಯತ್ನಾಳ ಬರಲಿ ಬಿಡಲಿ ಎಂದ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ, ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ನವರಸಪೂರ ಹೆಸರು ಬದಲಾವಣೆ ಮಾಡಬೇಕೆಂದು ನಾನು ಹೇಳಿಲ್ಲ. ನಾನು ಬರಲಿ ಬಿಡಲಿ ಎಂದು ಅಧಿಕಾರ ಇರೋ ಎಂ.ಬಿ.ಪಾಟೀಲ ಮಾತನಾಡಬಾರದು. ಇತರೇ ಕಾರ್ಯಕ್ರಮಗಳು ನಡೆಯಬೇಕು. ಆದಿಲ್ ಶಾಹಿ ರಾಜ ಹಿಂದೂ ದೇವರುಗಳ ಆರಾಧಕನಾಗಿದ್ದ, ನರಸಿಂಹ ದೇವರ ಕೃಪೆಯಿಂದ ಆದಿಲ್ ಶಾಹಿ ಮಗಳಿಗೆ ದೃಷ್ಟಿ ಬಂದಿತ್ತು, ಇದು ಇತಿಹಾಸದಲ್ಲೇ ದಾಖಲಾಗಿರೋ ವಿಚಾರ. ನವರಸಪೂರ ಎಂಬುದು ಸಕಲ ಕಲೆಗಳ ಸಾರವಾಗಿದೆ. ಎಂ.ಬಿ.ಪಾಟೀಲ ನನಗೆ ಹೇಳಿದ್ದಕ್ಕೆ ದುಃಖವಾಗಿದೆ ಆದರೆ ಕಣ್ಣೀರು ಹಾಕಲ್ಲ ಎಂದರು.

ನವಸರಪೂರ ಉತ್ಸವದಲ್ಲಿ ಆದಿಲ್ ಶಾಹಿ ಹಿಂದೂ ದೇವರ ಆರಾಧಕನಾಗಿದ್ದರ ಕುರಿತು ಮಾಹಿತಿ ನೀಡಲಿ. ಶಿವ, ಲಕ್ಷ್ಮೀ, ಸರಸ್ವತಿ, ಗಣಪತಿ ದೇವರ ಆರಾಧಕನಾಗಿದ್ದ, ತಮ್ಮ ಜನರಿಗೆ ಗೊತ್ತಾಗಬಾರದೆಂದು ಆದಿಲ್ ಶಾ ರಾತ್ರಿವೇಳೆ ಗವಿಮಾರ್ಗದಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ. ಆದಿಲ್ ಶಾಹಿ ಜ್ಯಾತ್ಯಾತೀತನಾಗಿದ್ದ, ಔರಂಗಜೇಬ್ ಅಕ್ಬರ್ ಹುಮಾಯುನ್ ಬಗ್ಗೆ ಮಾತ್ರ ಹೇಳುತ್ತಾರೆ. ಆದಿಲ್ ಶಾಹಿಗಳ ಕುರಿತು ಮಾತನಾಡಲಿ ಎಂದು ಯತ್ನಾಳ ಹೇಳಿದರು.ಮೊದಲ ಮಹಾ ದೊಡ್ಡ ಕುದುರೆ ವ್ಯಾಪಾರ ಅಂದ್ರೆ ಸಿಎಂ ಕುರ್ಚಿಯದ್ದು, ಅದಕ್ಕೀಗ ಅಂತಿಮ ಕ್ಷಣದ ಕ್ಷಣಗಣನೆ ಶುರುವಾಗಿದೆ. ಎಷ್ಟು ರೇಟು ಏನು?, ಸಿದ್ದರಾಮಯ್ಯ ಎಷ್ಟು ಕೊಡುತ್ತಾರೆ?, ಡಿಕೆಶಿ ಎಷ್ಟು ಕೊಡುತ್ತಾರೆ ಅನ್ನೊದು ನಡೆದಿದೆ. ಈ ಮಾಹಾಕುದುರೆ ವ್ಯಾಪಾರ ಆದ ಮೇಲೆ ಈ ಸಣ್ಣ ಕುದುರೆಗಳ ವ್ಯಾಪಾರ ಪ್ರಾರಂಭವಾಗಲಿದೆ. ಕೆಲ ಜನರು ಮಿನಿಸ್ಟರ್‌ ಆಗಲು ಕಣ್ಣಿರು ಹಾಕುತ್ತಾರೆ, ಕೈಕಾಲು ಹಿಡಿಯುತ್ತಾರೆ.

-ಬಸನಗೌಡ ಪಾಟೀಲ ಯತ್ನಾಳ,

ಶಾಸಕರು.