ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗ್ರಂಥಾಲಯಗಳು ವಿಶ್ವವಿದ್ಯಾಲಯದ ಹೃದಯವಾಗಿವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿವಿಯು) ಕುಲಸಚಿವರು ಡಾ.ಬಿ.ಇ.ರಂಗಸ್ವಾಮಿ ಹೇಳಿದರು.ನಗರದ ಶ್ರೀ ಎಸ್.ಜಿ.ಬಾಳೆಕುಂದ್ರಿ ಕೇಂದ್ರೀಯ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಭಾರತದ ಗ್ರಂಥಾಲಯದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂಶೋಧನಾ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳು ತುಂಬಾ ಉಪಯುಕ್ತವಾಗಿದ್ದು, ಸಂಶೋಧನೆಗಳಲ್ಲಿ ಗ್ರಂಥಾಲಯಗಳ ಬಳಕೆಯನ್ನು ಚೆನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐಇಇಇ ಪ್ರಕಟಣೆಗಳಿಗಾಗಿ ತಾಂತ್ರಿಕ ಬರವಣಿಗೆ ಕೌಶಲ್ಯ ವೃದ್ಧಿ ಕುರಿತು ಪ್ರತ್ಯಕ್ಷ ಕಾರ್ಯಾಗಾರವನ್ನು ಐಇಇಇ ಹಿರಿಯ ಗ್ರಾಹಕ ಸೇವಾ ನಿರ್ವಾಹಕ ಹಾಗೂ ವಿಶ್ವವಿದ್ಯಾಲಯ ಪಾಲುದಾರಿಕೆ ಕಾರ್ಯಕ್ರಮ ಸಂಯೋಜಕ ಡಾ.ಧನುಕುಮಾರ್ ಪಟ್ಟಣಶೆಟ್ಟಿ ನಡೆಸಿಕೊಟ್ಟರು. ವಿದ್ಯಾರ್ಥಿಗಳೊಂದಿಗೆ ಪರಸ್ಪರ ಪೇಪರ್‌ಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ತದನಂತರ ಎಂಬಿಎ ವಿದ್ಯಾರ್ಥಿ ಚಂದನ್ ಬೋರ ಮತ್ತು ಬಿಟೆಕ್ ವಿದ್ಯಾರ್ಥಿ ಕಾರ್ತಿಕ್ ತಮ್ಮ ಕೇಂದ್ರ ಗ್ರಂಥಾಲಯದಲ್ಲಿರುವ ತಮ್ಮ ಮೆಚ್ಚಿನ ಪುಸ್ತಕಗಳ ಬಗ್ಗೆ ವಿವರಣೆ ನೀಡಿದರು.ಕಾರ್ಯಕ್ರಮಕ್ಕೆ ಕುಲಸಚಿವರು (ಮೌಲ್ಯಮಾಪನ) ಡಾ.ಟಿ.ಎನ್.ಶ್ರೀನಿವಾಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಂಥಪಾಲಕರಾದ ಡಾ.ಸೋಮರಾಯ ತಳ್ಳೊಳ್ಳಿ ಸ್ವಾಗತಿಸಿ, ಕಾರ್ಯಕ್ರಮದ ಹಿನ್ನೆಲೆ ವಿವರಿಸಿದರು. ಸಹಾಯಕ ಗ್ರಂಥಪಾಲಕರಾದ ಸಮೀನಾ ಆಫ್ರಿನ್‌ಖಾನ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸುಮಾರು ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.