ಮೈತ್ರಿ ಧರ್ಮ ಮೀರದೇ ಲೋಕಸಭೆ ಚುನಾವಣೆ ಎದುರಿಸಬೇಕು: ಮಂಜುನಾಥ ಗೌಡಶಿವಣ್ಣನವರ

| Published : Mar 09 2024, 01:35 AM IST

ಮೈತ್ರಿ ಧರ್ಮ ಮೀರದೇ ಲೋಕಸಭೆ ಚುನಾವಣೆ ಎದುರಿಸಬೇಕು: ಮಂಜುನಾಥ ಗೌಡಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜೆಡಿಎಸ್ ಜಿಲ್ಲಾಮಟ್ಟದ ಸಭೆಯಲ್ಲಿ ಪಕ್ಷದ ತಾಲೂಕಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಹಾವೇರಿ: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜೆಡಿಎಸ್ ಜಿಲ್ಲಾಮಟ್ಟದ ಸಭೆಯಲ್ಲಿ ಪಕ್ಷದ ತಾಲೂಕಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧವಾಗಿ ನಡೆದುಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟಿಸಬೇಕು. ಮುಂಬರುವ ದಿನಗಳಲ್ಲಿ ಪಕ್ಷಕ್ಕಾಗಿ ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯ. ಪಕ್ಷಕ್ಕಿಂತಲೂ ಯಾರೂ ದೊಡ್ಡವರಲ್ಲ. ಪಕ್ಷ ಇದ್ದರೆ ನಾಯಕತ್ವ ಹಾಗೂ ಪಕ್ಷ ತಾಯಿ ಇದ್ದಂತೆ. ಹಾಗಾಗಿ ಪಕ್ಷಕ್ಕೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಎಲ್ಲರೂ ಒಟ್ಟಾಗಿ ಗೆಲ್ಲಿಸುವುದೇ ಗುರಿಯಾಗಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೈತ್ರಿ ಧರ್ಮವನ್ನು ಮೀರಬಾರದು. ಶೀಘ್ರದಲ್ಲಿಯೇ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಹಾವೇರಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಅರಳಿ, ಹಾನಗಲ್ಲ ತಾಲೂಕಾಧ್ಯಕ್ಷರಾಗಿ ರಾಮನಗೌಡ ಪಾಟೀಲ, ರಾಣಿಬೆನ್ನೂರು ತಾಲೂಕಾಧ್ಯಕ್ಷರಾಗಿ ಚಂದ್ರಗೌಡ್ರ ಭರಮಗೌಡ್ರ, ಶಿಗ್ಗಾಂವಿ ತಾಲೂಕಾಧ್ಯಕ್ಷರಾಗಿ ಈರಣ್ಣ ನವಲಗುಂದ, ಸವಣೂರು ತಾಲೂಕಾಧ್ಯಕ್ಷರಾಗಿ ಎಂ.ಎಸ್. ಹಣಗಿ ಹಾಗೂ ಜಿಲ್ಲಾ ಸಮಿತಿ ಜಿಲ್ಲಾ ಕಾಯಾಧ್ಯಕ್ಷರನ್ನಾಗಿ ರಾಜಅಹ್ಮದಖಾನ ಜೆಎಪಿ ಪಠಾಣ, ಉಪಾಧ್ಯಕ್ಷರಾಗಿ ಕೆಂಚನಗೌಡ ಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉಜ್ಜಪ್ಪ ಹಲಗೇರಿ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.

ಮುಖಂಡರಾದ ಖತಲ್‌ಸಾಬ ಬಣಗಾರ, ಎಸ್.ಎಲ್. ಕಾಡದೇವರಮಠ, ಅಮೀರಜಾನ್ ಬೇಪಾರಿ, ಹೇಮಣ್ಣ ಕೋಡಿಹಳ್ಳಿ, ರೀಟಾ ಹಾವೇರಿ, ಲಲಿತಾ, ಸದಾನಂದ ಯಲಿಗಾರ, ಬಶೆಟೆಪ್ಪ ಗುದ್ಲಿಶೆಟ್ಟರ್, ಫಿರೋಜಖಾನ್‌ ಪಠಾಣ, ಭರಮಪ್ಪ ಕೊಳಚಿ, ಅಲ್ತಾಫ್ ನದಾಫ್, ಭರಮಪ್ಪ ಲಮಾಣಿ, ಮಂಜುನಾಥ ಕನ್ನನಾಯ್ಕನವರ, ಈರಪ್ಪ ಇಚ್ಚಂಗಿ, ಮಹಾಂತೇಶ ಬೇವಿನಹಿಂಡಿ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.