ಆಟದಲ್ಲಿ ಸೋತವರು ನಮ್ಮವರೆ, ಗೆದ್ದವರೂ ನಮ್ಮವರೇ: ಮಂಜುನಾಥ್

| Published : Feb 10 2024, 01:47 AM IST

ಸಾರಾಂಶ

ಭಾರತದ ಸಂವಿಧಾನವು ನಾವೆಲ್ಲಾ ಒಂದೇ ಎಂಬುದನ್ನು ತಿಳಿಸಿದೆ. ಮೇಲು-ಕೀಳು ಎಂಬ ಭಾವನೆ ಇರದೇ ನಾವೆಲ್ಲಾ ಒಂದೇ ಎಂಬುದನ್ನು ನಾವೆಲ್ಲರೂ ಹರಿಯಲು ಇಂದು ಸಂವಿಧಾನ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ತಹಸೀಲ್ದಾರ್‌ ಕೆ. ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಭಾರತದ ಸಂವಿಧಾನವು ನಾವೆಲ್ಲಾ ಒಂದೇ ಎಂಬುದನ್ನು ತಿಳಿಸಿದೆ. ಮೇಲು-ಕೀಳು ಎಂಬ ಭಾವನೆ ಇರದೇ ನಾವೆಲ್ಲಾ ಒಂದೇ ಎಂಬುದನ್ನು ನಾವೆಲ್ಲರೂ ಹರಿಯಲು ಇಂದು ಸಂವಿಧಾನ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ತಹಸೀಲ್ದಾರ್‌ ಕೆ. ಮಂಜುನಾಥ್ ತಿಳಿಸಿದರು.

ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪೊಲೀಸ್ ಇಲಾಖೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಪ್ರಯುಕ್ತ ಏರ್ಪಡಿಸಲಾದ ಸಂವಿಧಾನ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕೆಲಸದಲ್ಲಿ ಮಾತ್ರವಲ್ಲದೇ ನಾವೆಲ್ಲರೂ ಕ್ರೀಡೆಯಲ್ಲೂ ಸಹ ಒಂದಾಗಿದ್ದೇವೆ ಎಂಬುದಕ್ಕೆ ಇಂದಿನ ಸ್ನೇಹ ಸಮ್ಮಿಲನ ಕ್ರೀಡಾಕೂಟವೇ ಸಾಕ್ಷಿ. ಆಟದಲ್ಲಿ ಸೋತವರು ನಮ್ಮವರೆ ಗೆದ್ದವರೆ ನಮ್ಮವರೇ ನಮ್ಮ ನಿಮ್ಮ ಸ್ನೇಹ ಸಮ್ಮಿಲನ ಶಾಶ್ವತವಾಗಿರಲಿ. ಕ್ಷೇತ್ರದ ಶಾಸಕರು ರಾಜ್ಯ ಸರ್ಕಾರದ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್‌ ಅವರ ಮಾರ್ಗದರ್ಶನ ಮೆರೆಗೆ ನಾವೆಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿ ಆಟಗಾರರಿಗೆ ಶುಭಕೋರಿದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಪೊಲೀಸ್ ಇಲಾಖೆ ತಂಡಕ್ಕೆ ಮತ್ತು ದ್ವೀತೀಯ ಸ್ಥಾನ ಪಡೆದ ತಾಲೂಕು ಆಡಳಿತ ತಂಡಕ್ಕೆ ಟ್ರೋಫಿ ನೀಡಲಾಯಿತು. ಇದರ ಜೊತೆಗೆ ಮಹಿಳಾ ಅಧಿಕಾರಿಗಳಿಗೆ ವಿವಿಧ ಆಟಗಳಲ್ಲಿ ಸ್ಪರ್ಧಿಸಿ ಬಹುಮಾನ ಪಡೆದರು. ಈ ಎಲ್ಲಾ ಆಟಗಾರರಿಗೆ ತಹಸೀಲ್ದಾರ್‌ ಮಂಜುನಾಥ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾ.ಪಂ ಇಒ ಅಪೂರ್ವ, ಸಿಪಿಐ ಅನಿಲ್, ಸಿಡಿಪಿಒ ಅಂಬಿಕಾ, ಆರಣ್ಯಾಧಿಕಾರಿಗಳಾದ ರವಿಕುಮಾರ್, ಶಿಲ್ಪಾ, ಕೀರ್ತಿನಾಯ್ಕ್, ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಕೆ.ವಿ. ಪುರುಷೋತ್ತಮ್, ಪೊಲೀಸ್ ಅಧಿಕಾರಿ ಎಎಸ್‌ಐ ಮಂಜುನಾಥ್, ಗ್ರೇಟ್ ೨ ತಹಸೀಲ್ದಾರ್‌ ನರಸಿಂಹಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.ಫೋಟೊ

ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾದ ಸಂವಿಧಾನ ಕಪ್ ಕ್ರಿಕೆಟ್ ಪಂದ್ಯಾವಳಿಗೆ ತಹಸೀಲ್ದಾರ್ ಮಂಜುನಾಥ್ ಚಾಲನೆ ನೀಡಿದರು.