ಭಕ್ತರ ಪ್ರೀತಿ ಮರೆಯಲು ಸಾಧ್ಯವಿಲ್ಲ: ಮಹಾಂತ ಶ್ರೀ

| Published : Mar 09 2024, 01:30 AM IST

ಸಾರಾಂಶ

ಯಾವುದೇ ಮೋಹ, ಲೋಭಗಳಿಲ್ಲದೇ, ಶುದ್ಧ ಮನಸ್ಸಿನಿಂದ ಸೇವಾ ಮನೋಭಾವದಿಂದ ಮಾಡುವ ಕಾರ್ಯಗಳಿಂದ ಮತ್ತು ಮಠಗಳಿಗೆ ಭಕ್ತರು ತೋರಿಸುವ ಪ್ರೀತಿ, ವಾತ್ಸಲ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸೊರಬ ತಾಲೂಕು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಯಾವುದೇ ಮೋಹ, ಲೋಭಗಳಿಲ್ಲದೆ, ಶುದ್ಧ ಮನಸ್ಸಿನಿಂದ ಸೇವಾ ಮನೋಭಾವದಿಂದ ಮಾಡುವ ಕಾರ್ಯಗಳಿಂದ ಮತ್ತು ಮಠಗಳಿಗೆ ಭಕ್ತರು ತೋರಿಸುವ ಪ್ರೀತಿ, ವಾತ್ಸಲ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ನುಡಿದರು.

ಸೋಮವಾರ ಜಡೆ ಸಂಸ್ಥಾನ ಮಠದಲ್ಲಿ ಫೆ.೧೦ ರಿಂದ ೨೪ ರವರೆಗೆ ನಡೆದ ಸಿದ್ಧವೃಷಭೇಂದ್ರ ಶಿವಯೋಗಿಗಳ ಶಿಲಾಮಠದ ಲೋಕಾರ್ಪಣೆ, ಜಾತ್ರಾ ಮಹೋತ್ಸವ, ನಿರಂಜನ ರುದ್ರದೇವರ ಪಟ್ಟಾಧಿಕಾರ, ಮಹಾಂತ ಸ್ವಾಮೀಜಿ ಅವರ ರಜತ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡಿದ ಭಕ್ತರಿಗೆ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮಠದ ಯುವ ವೇದಿಕೆ ಮತ್ತು ಭಕ್ತರ ಸಹಕಾರದಿಂದ ಮಠದ ಅಭಿವೃದ್ಧಿ ಮತ್ತು ಕೀರ್ತಿ ಹೆಚ್ಚಿಸಲು ಕಾರಣವಾಗಿದೆ. ಒಳ್ಳೆಯ ಮನಸ್ಸು ಮತ್ತು ಭಾವನೆಗಳು ಸತ್ಕಾರ್ಯಗಳ ಯಶಸ್ವಿಗೆ ಕಾರಣವಾಗಿದೆ ಎಂದರು.

ಸಿದ್ಧವೃಷಬೇಂದ್ರ ಸ್ವಾಮೀಜಿ ಅವರು ಹೇಳಿರುವಂತೆ ಸಮಾಜದಲ್ಲಿ ಜನ್ಮತಾಳಿದ ಮೇಲೆ ಸಮಾಜಕ್ಕಾಗಿ ಜಾತ್ಯತೀತವಾಗಿ ಹಣ ಅಂತಸ್ತನ್ನು ನೋಡದೇ, ಉತ್ತಮ ಕೆಲಸ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಇಚ್ಚೆ ಹೊಂದಿದ್ದೇನೆ. ಇದರ ಫಲವಾಗಿ ಭಕ್ತರ ಸಹಕಾರದಿಂದ ಜಡೆ ಸಂಸ್ಥಾನ ಮಠದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮ ತೃಪ್ತಿಯಾದ ಬಗ್ಗೆ ಭಕ್ತರು ಹೇಳಿದ್ದಲ್ಲದೇ, ಸಿದ್ಧವೃಷಭೇಂದ್ರ ಶ್ರೀಗಳು ನನ್ನ ಕನಸಿನಲ್ಲಿ ಬಂದು ಸಂತೃಪ್ತ ಆಗಿರುವುದಾಗಿ ಹೇಳಿದ್ದಾರೆ. ಇದರಿಂದ ಮತ್ತಷ್ಟು ಸೇವೆ ಕಾರ್ಯಗಳನ್ನು ಮಾಡಲು ನಮಗೆ ಪ್ರೇರಣೆ ದೊರೆತಿದೆ. ಮಠದ ಸೇವಾ ಕಾರ್ಯಕ್ಕೆ ಸದಾ ಭಕ್ತರ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಭಕ್ತರು ಮಠದ ಸತ್ಕಾರ್ಯಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ, ಮಠದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಮತ್ತು ಸಾರ್ವಜನಿಕರು ಸಹಕಾರ ನೀಡಬೇಕಿದೆ ಎಂದರು.

ಮಠದ ಭಕ್ತರಾದ ಜೈಶೀಲಗೌಡ, ರುದ್ರಗೌಡ, ನಾಗರಾಜ ಆಲಹಳ್ಳಿ, ಯು.ಕುಮಾರ, ಸುರಭಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಜಿ. ರಾಮಚಂದ್ರ, ಮಲ್ಲನಗೌಡ, ಪುಟ್ಟಯ್ಯ ಶಾಸ್ತ್ರಿ, ರೇಣುಕಮ್ಮ ಗೌಳಿ, ಸುಧಾ ಶಿವಪ್ರಸಾದ್, ಮಾಲಾ, ಸುಮತಾ, ಮಮತಾ ಪಾಟೀಲ್ ಇದ್ದರು.

- - -

-೦೫ಕೆಪಿಸೊರಬ೦೧:

ಸೊರಬ ತಾಲೂಕಿನ ಜಡೆ ಮಠದಲ್ಲಿ ಭಕ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ. ಮಹಾಂತ ಸ್ವಾಮೀಜಿ ಮಾತನಾಡಿದರು.