ಪ್ರೇಯಸಿಯ ಕತ್ತು ಕೋಯ್ದು ಕೊಲೆ ಮಾಡಿದ ಪ್ರಿಯಕರ

| Published : Jan 31 2025, 12:48 AM IST

ಸಾರಾಂಶ

ಎಂಟು ವರ್ಷಗಳಿಂದ ಶಿಫಾ ಮತ್ತು ಮುಬಿನ್ ಪ್ರೀತಿ ಮಾಡುತ್ತಿದ್ದರು, ಈ ಇಬ್ಬರ ಪ್ರೀತಿಯನ್ನು ಒಪ್ಪದ ಯುವತಿ ಕುಟುಂಬಸ್ಥರು ಆಕೆಗೆ ಬೇರೆಯವರೊಂದಿಗೆ ಮದುವೆ ನಿಶ್ಚಯಿಸಿದ್ದರು ಇದರಿಂದಾಗಿ ಕುಪಿತಗೊಂಡ ಆರೋಪಿ ಕೃತ್ಯವೆಸಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಸಿಂಧನೂರು/ಲಿಂಗಸುಗೂರು

ಮದುವೆಗೆ ಒಪ್ಪದ ಪ್ರೇಯಸಿಯನ್ನು ಕತ್ತು ಕೋಯ್ದು ಕೊಲೆ ಮಾಡಿರುವ ಘಟನೆ ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ಲಿಂಗಸುಗೂರು ಪಟ್ಟಣದ ನಿವಾಸಿ ಶಿಫಾ ಅಬ್ದುಲ್ ವಾಹಿದ್ (24) ಕೊಲೆಗೀಡಾದ ವಿದ್ಯಾರ್ಥಿನಿಯಾಗಿದ್ದು, ಕೊಲೆ ಬಳಿಕ ಆರೋಪಿ ಶೇಕ್‌ ಮುಬಿನ್ ಲಿಂಗಸುಗೂರು ಠಾಣೆಗೆ ಹೋಗಿ ಶರಣಾಗಿದ್ದಾನೆ.ಎಂಟು ವರ್ಷಗಳಿಂದ ಶಿಫಾ ಮತ್ತು ಮುಬಿನ್ ಪ್ರೀತಿ ಮಾಡುತ್ತಿದ್ದರು, ಈ ಇಬ್ಬರ ಪ್ರೀತಿಯನ್ನು ಒಪ್ಪದ ಯುವತಿ ಕುಟುಂಬಸ್ಥರು ಆಕೆಗೆ ಬೇರೆಯವರೊಂದಿಗೆ ಮದುವೆ ನಿಶ್ಚಯಿಸಿದ್ದರು ಇದರಿಂದಾಗಿ ಕುಪಿತಗೊಂಡ ಆರೋಪಿ ಕೃತ್ಯವೆಸಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಸಿಂಧನೂರು ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂಎಸ್ಸಿ ಪ್ರಥಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿಫಾ ಎಂದಿನoತೆ ಗುರುವಾರ ಬೆಳಗ್ಗೆ ಕಾಲೇಜಿಗೆ ಬಂದಿದ್ದು, ಫಾಲೋ ಮಾಡಿದ ದುಷ್ಕರ್ಮಿ ಶೇಕ್‌ ಮುಬಿನ್ ಆಕೆಯನ್ನು ಪುಸಲಾಯಿಸಿ ಮಹಾವಿದ್ಯಾಲಯದ ಸಮೀಪದ ಖಾಸಗಿ ಲೇಔಟ್ ಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಕತ್ತಿಗೆ ಬಲವಾಗಿ ಇರಿದು ಹತ್ಯೆ ಮಾಡಿದ್ದಾನೆ. ತದನಂತರ ಸ್ಥಳದಿಂದ ಪರಾರಿಯಾಗಿ ನೇರವಾಗಿ ಲಿಂಗಸುಗೂರು ಪೊಲೀಸ್ ಠಾಣೆಗೆ ತೆರಳಿ ತಾನೆಯೇ ಶರಣಾಗಿದ್ದಾನೆ.ಕೊಲೆ ಘಟನೆ ಕಾಡ್ಗಿಚ್ಚಿನಂತೆ ಸಿಂಧನೂರು-ಲಿಂಗಸುಗೂರು ತಾಲೂಕುಗಳ ಸೇರಿದಂತೆ ಎಲ್ಲೆಡೆ ಹಬ್ಬಿ ಆತಂಕ ಸೃಷ್ಠಿಸಿದ್ದು, ವಿದ್ಯಾರ್ಥಿಗಳು, ಪಾಲಕರು, ಕಾಲೇಜಿನವರು ತೀವ್ರವಾಗಿ ಭೀತಿಗೊಳ್ಳುವಂತೆ ಮಾಡಿದೆ.ಘಟನೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿ,ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.ಮುಗಿಲು ಮುಟ್ಟಿದ ಆಕ್ರಂದನ: ತಮ್ಮ ಮಗಳು ಕೊಲೆಗೀಡಾಗಿದ್ದಾಳೆಂದು ತಿಳಿದು ಘಟನಾ ಸ್ಥಳಕ್ಕೆ ಲಿಂಗಸುಗೂರಿನಿoದ ಆಗಮಿಸಿದ ಪಾಲಕರು, ಕುಟುಂಬದ ಸಂಬoಧಿಗಳ ಆಕ್ರಂದನ ಮುಗಿಲು ಮುಟ್ಟಿತು. ಮಗಳ ದಾರುಣ ಸಾವು ನೆನೆದು ಕಣ್ಣೀರಾದರು.ಎಸ್ಪಿ ಪುಟ್ಟಮಾದಯ್ಯ ಭೇಟಿ : ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಶಿಫಾ ದಾರುಣವಾಗಿ ಕೊಲೆಗೀಡಾದ ಘಟನೆ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ .ಎಂ ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.9 ಜನರ ವಿರುದ್ಧ ಪ್ರಕರಣ ದಾಖಲು: ಕೊಲೆ ಆರೋಪಿ ಶೇಖ್ ಮುಬಿನ್ ಸೇರಿದಂತೆ ಶೇಖ್ ಜಮೀರ್, ಶೇಖ್ ಮುನೀರ್, ಶೇಖ್ ಹಕೀಂ, ಶೇಖ್ ಅಕ್ರಂಪಾಶಾ, ಶೇಖ್ ಅಹ್ಮದ್ರಾಜ್, ಶೇಖ್ ಅಬ್ದುಲ್ಲಾ, ಶೇಖ್ ಆರೀಫ್, ಶೇಖ್ ಅರಬ್ಜಾ ವಿರುದ್ಧ ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ವೇಳೆ ಡಿವೈಎಸ್ಪಿ ಎಸ್.ಬಿ.ತಳವಾರ, ಸಿಪಿಐ ವೀರಾರೆಡ್ಡಿ, ಗ್ರಾಮೀಣ ಪಿಎಸ್ಐ ಇಸಾಕ್ ಅಹ್ಮದ್, ಶಹರ ಠಾಣೆಯ ಸಬ್ಇನ್ಸ್ಪೆಕ್ಟರ್ ಬಸವರಾಜ ಎಚ್,ಟ್ರಾಫಿಕ್ ಪಿಎಸ್ಐ ವೆಂಕಟೇಶ್ ಚೌಹಾಣ್, ತುರ್ವಿಹಾಳ ಠಾಣೆ ಪಿಎಸ್ಐ ಯರಿಯಪ್ಪ ಸೇರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದರು.----------------------30ಕೆಪಿಎಸ್ಎನ್ಡಿ01: ಶಿಫಾ30ಕೆಪಿಎಸ್ಎನ್ಡಿ02: ಶೇಕ್‌ ಮುಬಿನ್