ಸಾರಾಂಶ
ಕನ್ನಡ ಪ್ರಭ ವಾರ್ತೆ, ಕಡೂರು
ಗ್ರಾಮೀಣ ಪ್ರದೇಶದ ಹಿಂದುಳಿದ ಯುವಜನರಿಗೆ ಔಷಧಿ ಸಸ್ಯಗಳು ಮತ್ತು ಪ್ಲಾಂಟೇಶನ್ ಬೆಳೆಗಳ ಬಗ್ಗೆ ತರಬೇತಿ ನೀಡಿ ಅರಣ್ಯೀಕರಣದ ಜೊತೆ ಯುವ ಸಮೂಹವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಸಂಘದ ಪ್ರಮುಖ ಉದ್ದೇಶ ಎಂದು ಕರುಣಾ ಸಾಯಿ ಹರಿಜನ ಗಿರಿಜನ ಅಭಿವೃದ್ಧಿ ವಿವಿಧೋದ್ದೇಶ ಸಹಕಾರಿ ಸಂಘದ ರಾಜ್ಯಾಧ್ಯಕ್ಷ ಈಶ್ವರ್ ಹೇಳಿದರು.ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಘ ಕಳೆದ 28 ವರ್ಷ ಗಳಿಂದ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸಂಘದ ಪ್ರಧಾನ ಕಚೇರಿ ಕಾರವಾರದಲ್ಲಿದ್ದು, ಉಡುಪಿಯಲ್ಲಿ ಶಾಖೆ ಇದೆ. ಇದರ ಅಂಗಸಂಸ್ಥೆ ಕರುಣಾಸಾಯಿ ಪ್ರತಿಷ್ಠಾನ ಕಾರವಾರ, ಬೀರೂರು ಮತ್ತು ಉಡುಪಿಯಲ್ಲಿದೆ.
ಗ್ರಾಮೀಣ ಪ್ರದೇಶದ ಹಿಂದುಳಿದ ಯುವಜನರಿಗೆ ಔಷಧಿ ಸಸ್ಯಗಳು ಮತ್ತು ಪ್ಲಾಂಟೇಶನ್ ಬೆಳೆಗಳ ಬಗ್ಗೆ ತರಬೇತಿ ನೀಡಿ ನಿರುದ್ಯೋಗಿ ಯುವಕರು ಆರ್ಥಿಕ ಸ್ವಾವಲಂಬಿಗಳಾಗುವಂತೆ ಮಾಡುವುದು ಪ್ರಮುಖ ಉದ್ದೇಶ ಎಂದರು.ಈ ನಿಟ್ಟಿನಲ್ಲಿ ಈಗಾಗಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 250 ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲಾಗಿದೆ. ಕಂದಾಯ, ಅರಣ್ಯ , ತೋಟಗಾರಿಕೆ, ಶಿಕ್ಷಣ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ನಮ್ಮ ವಿವಿದೋದ್ದೇಶ ಸಂಘದ ಉದ್ದೇಶಿತ ಯೋಜನೆ ಅನುಷ್ಟಾನಕ್ಕೆ ಭೂಮಿ ಹಾಗು ಸವಲತ್ತು ನೀಡುವಂತೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಆದೇಶದ ಮೇರೆಗೆ ಈ ಸಸ್ಯ ಯೋಜನೆಗೆ ಸೆ.1ರಿಂದ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾದ ಭೂಮಿಯಲ್ಲಿ ಔಷಧೀಯ ಸಸ್ಯ ಬೆಳೆಯಲು 1,400 ಎಕರೆ ಭೂಮಿ ಸರ್ಕಾರ ಗುರುತಿಸಿದೆ. ಅದರಲ್ಲಿ ಹೆಚ್ಚಿನ ಪಾಲು ಕಡೂರು ಮತ್ತು ತರೀಕೆರೆ, ಮೂಡಿಗೆರೆ ತಾಲೂಕುಗಳಲ್ಲಿರುವ ಭೂಮಿಯಲ್ಲಿ ನೆಟ್ಟು ಅಭಿವೃದ್ಧಿಪಡಿಸಲಾಗುವುದು. ಇನ್ನು ಬೆಳೆದ ಔಷಧಿ ಸಸ್ಯಗಳಿಂದ ಬರುವ ಎಲೆ, ಬೇರು, ಹುಲ್ಲುಗಳಿಂದ ಬರುವ ಆದಾಯವನ್ನು ಯುವಕರು ಪಡೆಯಬಹುದು.ಗ್ರಾಮೀಣ ಯುವಕರು ಪರಿಸರ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಇದೆ ಎಂದರು.
ನ್ಯಾಯಾಲಯವು ಕಾಲೇಜು ಶಿಕ್ಷಣ ಇಲಾಖೆ,ಆರೋಗ್ಯಕ್ಕೆ ಇಲಾಖೆಗಳಿಗೆ ಮಾಡಿರುವ ಆದೇಶದ ಪ್ರಕಾರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಸ್ಯ ತೋಟವನ್ನು ನಿರ್ಮಿಸಿ ಪರಿಸರ, ಮನೆ ಮದ್ದು ಪರಿಚಯ ಕುರಿತು ಪರಿಸರ ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸಲಾಗುವುದು.ಇದರಲ್ಲಿ ವಿವಿಧ ರೀತಿ ತುಳಸಿ ಗಿಡಗಳು, ಲೆಮನ್ ಗ್ರಾಸ್, ಶ್ರೀಗಂಧ, ಔಷಧೀಯ ಗುಣಗಳ ಸಸ್ಯಗಳು ಸೇರಿದಂತೆ 120 ಸಸ್ಯ ಪ್ರಭೇದಗಳನ್ನು ಬೆಳೆಸಿ ಅವುಗಳ ಪ್ರಯೋಜನದ ಮನವರಿಕೆ ಮಾಡಲಾಗುವುದು ಎಂದರು.
ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ 250 ರೈತ ಕುಟುಂಬಗಳ ಯುವಜನರ ತಂಡ ಯೋಜನೆಯಲ್ಲಿ ಪಾಲ್ಗೊಳ್ಳಲು ಸಿದ್ದವಾಗಿದೆ ಎಂದರು.-- ಬಾಕ್ಸ್--
ಇದರಲ್ಲಿ ವಿವಿಧ ರೀತಿ ತುಳಸಿ ಗಿಡಗಳು, ಲೆಮನ್ ಗ್ರಾಸ್, ಶ್ರೀಗಂಧ, ಔಷಧೀ ಗುಣಗಳ ಸಸ್ಯಗಳು ಸೇರಿದಂತೆ 120 ಸಸ್ಯ ಪ್ರಭೇದಗಳನ್ನು ಬೆಳೆಸಿ ಅವುಗಳ ಪ್ರಯೋಜನದ ಮನವರಿಕೆ ಮಾಡಲಾಗುವುದು. ಸದರಿ ಯೋಜನೆ ಚಾಲನೆಗೆ ರಾಜ್ಯ ಸರ್ಕಾರದ ಜಿಲ್ಲಾ ಪಂಚಾಯಿತಿ ಸಂಭಂಧಿಸಿದ ಇಲಾಖೆಗಳಿಗೆ ಆದೇಶ ಮಾಡಿದೆ.29ಕೆಕೆಡಿಯು1. ಈಶ್ವರ್.