ಸಾರಾಂಶ
ಚಿಕ್ಕಮರಳಿ ವ್ಯಾಪ್ತಿ ಇದುವರೆಗೂ ಐದು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಸೆರೆಸಿಕ್ಕಿವೆ. ಗ್ರಾಮದ ಸುತ್ತಮುತ್ತ ಬೆಟ್ಟಗುಡ್ಡ, ಕಬ್ಬಿನ ಗದ್ದೆ ಇರುವುದರಿಂದ ಚಿರತೆಗಳ ಹಾವಳಿ ಹೆಚ್ಚಾಗಿದೆ. ಬೆಟ್ಟಗುಡ್ಡ, ಕಬ್ಬಿನ ಗದ್ದೆಯಲ್ಲಿ ಪದೇಪದೇ ಚಿರತೆಗಳು ಪ್ರತ್ಯಕ್ಷಗೊಳ್ಳುವ ಮೂಲಕ ರೈತರಲ್ಲಿ ಆತಂಕ ಮೂಡಿಸುತ್ತಿವೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರ ಸಾಕು ಪ್ರಾಣಿಗಳನ್ನು ತಿಂದು ಆತಂಕ ಮೂಡಿಸಿದ್ದ ಗಂಡು ಚಿರತೆ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಚಿಕ್ಕಮರಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ನಡೆದಿದೆ.ಮಂಗಳವಾರ ಬೆಳಗ್ಗೆ ಗ್ರಾಮದ ಹೆಡಬೆಟ್ಟದಲ್ಲಿ ಎರಡು ಚಿರತೆಗಳು ಪ್ರತ್ಯೇಕಗೊಂಡ ಹಿನ್ನೆಲೆಯಲ್ಲಿ ಬೆಟ್ಟದ ಪಕ್ಕದ ಜಮೀನಿನ ಮಾಲೀಕ ಗಾಣದ ಹೊಸೂರು ಗ್ರಾಮದ ಮಂಜುನಾಥ್ ಅವರು ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಕಳುಹಿಸಿದ್ದರು. ಇದರಿಂದ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಸೆರೆಗಾಗಿ ಅರಣ್ಯಾಧಿಕಾರಿ ಮಂಗಳವಾರ ಸಂಜೆ ಬೋನ್ ಇರಿಸಿ, ಬೋನ್ ನಲ್ಲಿ ನಾಯಿ ಇಟ್ಟಿದ್ದರು. ನಾಯಿ ತಿನ್ನುಲು ಬಂದ ಚಿರತೆ ಬುಧವಾರ ಮುಂಜಾನೆ ಬೋನ್ ಗೆ ಬಿದ್ದಿದೆ.
ಬೋನ್‌ನಲ್ಲಿ ಸೆರೆಸಿಕ್ಕ ಚಿರತೆಯ ಕಿರುಚಾಟ ಕೇಳಿ ಅಕ್ಕಪಕ್ಕದ ರೈತರು ಸ್ಥಳಕ್ಕೆ ಬಂದು ನೋಡಿದಾಗ ಸೆರೆಸಿಕ್ಕಿರುವ ಘಟನೆ ಬೆಳಕಿಗೆ ಬಂದಿದೆ. ಚಿರತೆ ಸೆರೆಸಿಕ್ಕಿರುವ ವಿಷಯ ತಿಳಿದ ಚಿಕ್ಕಮರಳಿ, ಗಾಣದ ಹೊಸೂರು ಗ್ರಾಮಸ್ಥರು, ಯುವಕರು, ಮಹಿಳೆಯರು ಮಕ್ಕಳೊಂದಿಗೆ ಆಗಮಿಸಿ ಚಿರತೆ ವೀಕ್ಷಣೆ ಮಾಡಿದರು.ಐದು ಚಿರತೆ ಸೆರೆ:
ಚಿಕ್ಕಮರಳಿ ವ್ಯಾಪ್ತಿ ಇದುವರೆಗೂ ಐದು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಸೆರೆಸಿಕ್ಕಿವೆ. ಗ್ರಾಮದ ಸುತ್ತಮುತ್ತ ಬೆಟ್ಟಗುಡ್ಡ, ಕಬ್ಬಿನ ಗದ್ದೆ ಇರುವುದರಿಂದ ಚಿರತೆಗಳ ಹಾವಳಿ ಹೆಚ್ಚಾಗಿದೆ. ಬೆಟ್ಟಗುಡ್ಡ, ಕಬ್ಬಿನ ಗದ್ದೆಯಲ್ಲಿ ಪದೇಪದೇ ಚಿರತೆಗಳು ಪ್ರತ್ಯಕ್ಷಗೊಳ್ಳುವ ಮೂಲಕ ರೈತರಲ್ಲಿ ಆತಂಕ ಮೂಡಿಸುತ್ತಿವೆ.ರೈತರು ಬೆಳಗ್ಗೆ, ರಾತ್ರಿ ವೇಳೆಯಲ್ಲಿ ಒಬ್ಬರೇ ಜಮೀನಿನ ಬಳಿ ಹೋಗುವುದಕ್ಕೂ ಭಯಪಡುವಂತಹ ಆತಂಕದ ಸ್ಥಿತಿ ಎದುರಾಗಿದೆ. ಅಲ್ಲದೇ, ಹಸು, ಆಡು, ಕುರಿ ಮೇಯಿಸಲು ಹೋದ ವೇಳೆ ಹಲವು ಬಾರಿ ಹಸು, ಕುರಿ, ಮೇಕೆಗಳನ್ನು ಎತ್ತಕೊಂಡು ಹೋಗಿ ತಿಂದಿರುವ ಸಾಕಷ್ಟು ಉದಾಹರಣೆಗಳಿವೆ.
ಹಾಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪ್ರದೇಶದ ವಿವಿಧ ಹೆಚ್ಚಿಮಟ್ಟದಲ್ಲಿ ಬೋನ್ ಹಿರಿಸಿ ಚಿರೆತೆ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಅರಣ್ಯಾಧಿಕಾರಿಗಳು ಸೆರೆಸಿಕ್ಕ ಚಿರತೆಯನ್ನು ಹಿಡಿದು ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ಗೌಡ ತಿಳಿಸಿದರು.