ಆಸ್ಪತ್ರೆಗೆ ಬಂದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಹೃದಯಾಘಾತಕ್ಕೆ ಬಲಿ

| Published : Jul 02 2025, 11:49 PM IST

ಸಾರಾಂಶ

ಹೊಸಕೋಟೆ: ಎದೆನೋವು ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ನಡೆದುಕೊಂಡು ಬಂದ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಮೆದುಳು ನಿಷ್ಕ್ರಿಯೆಗೊಂಡು ಸಾವನ್ನಪ್ಪಿರುವ ಘಟನೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.

ಹೊಸಕೋಟೆ: ಎದೆನೋವು ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ನಡೆದುಕೊಂಡು ಬಂದ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಮೆದುಳು ನಿಷ್ಕ್ರಿಯೆಗೊಂಡು ಸಾವನ್ನಪ್ಪಿರುವ ಘಟನೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ. ನಗರದ ಕೋನಪ್ಪ(52) ಮೃತ ವ್ಯಕ್ತಿ. ಕೋನಪ್ಪ ಬುಧವಾರ ಬೆಳಿಗ್ಗೆ ಎದೆನೋವು ಎಂದು ಸಿಲಿಕಾನ್ ಆಸ್ಪತ್ರೆಗೆ ತಾನೇ ನಡೆದುಕೊಂಡು ಬಂದಿದ್ದು, ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಂತೆ ಕೋನಪ್ಪ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ. ಕೂಡಲೆ ಆತನನ್ನು ಬೇರೆ ಆಸ್ಪತ್ರೆಗೆ ವೈದ್ಯರು ಸಾಗಿಸಲು ಮುಂದಾದಾಗ ಮೆದುಳು ನಿಷ್ಕ್ರಿಯೆಗೊಂಡಿದೆ. ಬೆಳಿಗ್ಗೆಯಿಂದ ಲವಲವಿಕೆಯಿಂದ ಇದ್ದ ಕೋನಪ್ಪ, ಎದೆನೋವು ಎಂದು ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ನಡೆದುಕೊಂಡು ಬಂದಿದ್ದಾರೆ. ಈತ ನಡೆದುಕೊಂಡು ಬರುವ ದೃಶ್ಯಗಳು ಸಿಸಿಟಿವಿಯಲ್ಲಿ ಸಹ ಸೆರೆಯಾಗಿದೆ.ಫೋಟೋ: 2 ಹೆಚ್‌ಎಸ್‌ಕೆ 4 ಮತ್ತು 5

4: ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ನಡೆದುಕೊಂಡು ಮೃತ ವ್ಯಕ್ತಿ ಕೋನಪ್ಪನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು.5: ಮೃತ ಕೋನಪ್ಪ.