ಸಾರಾಂಶ
ತನ್ನ ಪತ್ನಿ ಜೊತೆ ಎದುರು ಮನೆ ಯುವಕ ಮಾತನಾಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪತಿರಾಯ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ಸಾಗರ ಪಟ್ಟಣಕ್ಕೆ ಸಮೀಪದ ಬೆಳಲಮಕ್ಕಿಯಲ್ಲಿ ನಡೆದಿದೆ. ನೀರಿನ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯಲಕುಂದ್ಲಿಯ ನವೀನ್ ಹಾಗೂ ಆತನ ಸ್ನೇಹಿತ ಧರೇಶ್ ಹಲ್ಲೆಗೊಳಗಾದವರು.
ಸಾಗರ: ತನ್ನ ಪತ್ನಿ ಜೊತೆ ಎದುರು ಮನೆ ಯುವಕ ಮಾತನಾಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪತಿರಾಯ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ಪಟ್ಟಣಕ್ಕೆ ಸಮೀಪದ ಬೆಳಲಮಕ್ಕಿಯಲ್ಲಿ ನಡೆದಿದೆ.
ನೀರಿನ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯಲಕುಂದ್ಲಿಯ ನವೀನ್ ಹಾಗೂ ಆತನ ಸ್ನೇಹಿತ ಧರೇಶ್ ಹಲ್ಲೆಗೊಳಗಾದವರು.ನವೀನ್ ತನ್ನ ಪತ್ನಿ ಜೊತೆ ಮಾತನಾಡುತ್ತಿದ್ದ ಎಂಬ ವಿಚಾರಕ್ಕೆ ಪತಿ ರವಿ ರೊಚ್ಚಿಗೆದ್ದು, ಕತ್ತಿ ಹಾಗೂ ರಾಡ್‌ನಿಂದ ನವೀನ್ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಕಾರಿನ ಗಾಜು ಒಡೆಯುತ್ತಿರುವ ಶಬ್ದ ಕೇಳಿ ನವೀನ್ ಮನೆಯಿಂದ ಹೊರಗೆ ಬಂದಿದ್ದಾನೆ. ಕಾರಿನ ಗಾಜು ಏಕೆ ಒಡೆಯುತ್ತಿರುವೆ ಎಂದು ನವೀನ್ ಕೋಪದಿಂದ ರವಿ ಬಳಿ ಕೇಳಿದ್ದಾನೆ. ಆಗ ರವಿ ಕತ್ತಿಯಿಂದ ನವೀನ್ ಮೇಲೆ ದಾಳಿ ಮಾಡಿದ್ದಾನೆ. ಬಿಡಿಸಲು ಬಂದ ಸ್ನೇಹಿತ ಧರೇಶ್ ಮೇಲೂ ರವಿ ಹಲ್ಲೆ ಮಾಡಿದ್ದಾನೆ.
ಘಟನೆಯಲ್ಲಿ ನವೀನ್ ಬೆರಳು ತುಂಡಾಗಿದ್ದು. ಎದೆಭಾಗಕ್ಕೆ ತೀವ್ರತರವಾದ ಗಾಯವಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಧರೇಶ್ ಅವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೇಟೆ ಠಾಣೆ ಪೊಲೀಸರು ರವಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.