ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಕೂಡಿ ಬಾಳುವುದರಲ್ಲಿ ಮನುಷ್ಯನ ಬದುಕಿನ ಸಾರ್ಥಕತೆ ಅಡಗಿದೆ. ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದತೆ, ಭಾವೈಕ್ಯತೆ, ಸಾಮರಸ್ಯ ಉತ್ತಮ ಸಮಾಜದ ಆಧಾರ ಸ್ಥಂಭಗಳಾಗಿವೆ ಎಂದು ದತ್ತ ಆಶ್ರಮದ ಸುಭೋದಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿವಾಲ ಗ್ರಾಮದ ಮುಸ್ಲಿಂ ಸಮಾಜದವರು ನೂತನವಾಗಿ ನಿರ್ಮಿಸಿರುವ ಜಾಮಿಯಾ ಮಸೀದಿಯ ಉದ್ಘಾಟನೆ ಹಾಗೂ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜ ಜೀವಿಯಾದ ಮನುಷ್ಯ ಸಾಮಾಜಿಕ ಪರೋಪಕಾರ ಪ್ರಜ್ಞೆಯೊಂದಿಗೆ ಬದುಕಿದಾಗ ಮಾತ್ರ ಒಂದು ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು.ಅಸಂಷನ್ ಚರ್ಚ್ ಫಾದರ್ ರೋನಾಲ್ಡ್ ಡಿಕುನ್ನ ಮಾತನಾಡಿ, ಪರಸ್ಪರ ಸೌಹಾರ್ದ, ಸಹಬಾಳ್ವೆ, ಸಹನೆಯಿಂದ ಬಾಳಬೇಕು. ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜ ಹಾಗೂ ದೇಶದ ಸೌಹಾರ್ದ ಸಾಧ್ಯವಿದೆ.
ತಿಳುವಳಿಕೆಯ ಕೊರತೆಯು ಧರ್ಮ ಧರ್ಮಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದರು.ವಿಶೇಷ ಪ್ರಾರ್ಥನೆ ಮಾಡಿ ಪ್ರವಚನ ನೀಡಿದ ಮೌಲಾನ ತಲಾಹ ಖಾಸ್ಮಿ ಸಾಹೇಬ್ ಮಾತನಾಡಿ, ಶಾಂತಿ ನೆಮ್ಮದಿ ಸಮಾನತೆಯನ್ನು ಪ್ರಾಯೋಗಿಕವಾಗಿ ತೋರಿಸಿಕೊಡುವಲ್ಲಿ ಮಸೀದಿಗಳು ಪ್ರಮುಖ ಪಾತ್ರವಹಿಸಿವೆ. ಇಸ್ಲಾಂ ಯಾರ ಮೇಲೂ ರೀತಿ ರಿವಾಜುಗಳನ್ನು ಹೇರುವುದಿಲ್ಲ. ಕುರಾನ್ ಒಳಿತು ಕೆಡುಕುಗಳ ಬಗ್ಗೆ ಸ್ವಷ್ಟವಾಗಿ ತಿಳಿಸಿಕೊಟ್ಟಿದೆ. ಅಲ್ಲಾಹುನ ಮುಂದೆ ಎಲ್ಲರೂ ಸಮಾನರು. ಸಮಾನತೆ, ಸಹಿಷ್ಣುತೆ, ಸಮಾನ ಮನಸ್ಥಿತಿ ಮತ್ತು ಮಾನವ ಬಂಧುತ್ವದ ತಳಹದಿ ಮಸೀದಿಯಾಗಿದೆ ಎಂದರು
ಈ ಸಂದರ್ಭದಲ್ಲಿ ವೈದ್ಯರಾದ ಎಸ್ ಆರ್ ಮಹಲಿಂಗಪ್ಪ, ಟಿ ವೆಂಕಟೇಶ್, ರೈತ ಸಂಘದ ಕಸವನಹಳ್ಳಿ ರಮೇಶ್, ಪಿಟ್ಲಾಲಿ ಶ್ರೀನಿವಾಸ್, ಸಿದ್ದರಾಮಪ್ಪ, ಆರನಕಟ್ಟೆ ಶಿವಕುಮಾರ್, ಮಾಳಿಗೆ ಮಂಜುನಾಥ್, ಜೆಡಿಎಸ್ ಮುಖಂಡರಾದ ರವೀಂದ್ರಪ್ಪ, ಜಯಣ್ಣ, ಬಿಜೆಪಿಯ ಎನ್ ಆರ್ ಲಕ್ಮಿಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ನಾಗೇಂದ್ರ ನಾಯ್ಕ, ಸಿ ಎನ್ ಸುಂದರ್, ಮುಸ್ಲಿಂ ಸಮಾಜದ ಮುಖಂಡರಾದ ಬರ್ಕತ್ ಅಲಿ, ಆಸಿಫ್ ಅಲಿ, ಫಿರ್ಧೋಸ್,ಜೈನುಲ್ಲಾಬ್ದೀನ್, ಸೈಫುದ್ದೀನ್, ಫಕ್ರುದ್ದೀನ್, ಬಾಬು, ಷಾನವಾಜ್, ಸ್ವಾಲೇಹ, ಮಹಮದ್ ಅಲಿ, ಚಮನ್ ಷರೀಫ್ ಮುಂತಾದವರು ಹಾಜರಿದ್ದರು.
ಬೆಂಗಳೂರಿನ ರಹಮತ್ ತಂಡದವರು ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.;Resize=(128,128))
;Resize=(128,128))
;Resize=(128,128))
;Resize=(128,128))