ಮಾಧ್ಯಮ ಕ್ಷೇತ್ರ ಮಹತ್ತರ ಬದಲಾವಣೆ ಕಾಣಲಿದೆ

| Published : Jan 20 2025, 01:30 AM IST

ಸಾರಾಂಶ

ಮಾಧ್ಯಮ ಕ್ಷೇತ್ರ ಹಲವು ಮಹತ್ತರ ಬದಲಾವಣೆ ಕಾಣಲಿದೆ ಎಂದು ಸುವರ್ಣ ವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುಮಾಧ್ಯಮ ಕ್ಷೇತ್ರ ಹಲವು ಮಹತ್ತರ ಬದಲಾವಣೆ ಕಾಣಲಿದೆ ಎಂದು ಸುವರ್ಣ ವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ ಅಭಿಪ್ರಾಯಪಟ್ಟರು.ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ಸಮ್ಮೇಳನದಲ್ಲಿ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಎಂಬ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಮಾಧ್ಯಮದ ವೇಗ ಹೆಚ್ಚಲಿದ್ದು ಹಲವು ಬದಲಾವಣೆಗಳನ್ನು ಕಾಣಬಹುದು. ಇಂದಿನ ಯುವ ಸಮೂಹ ರೀಲ್ಸ್ ಹುಚ್ಚಿಗೆ ಬಿದ್ದು ಅವರದ್ದೇ ಮಾಧ್ಯಮ ಸೃಷ್ಟಿಸಲು ಹೊರಟಿದೆ. ಹೀಗಾಗಿ ಮಾಧ್ಯಮ ಕವಲು ದಾರಿಯಲಿದ್ದು ಬದಲಾವಣೆ ಅತ್ಯಗತ್ಯವಾಗಿದೆ ಎಂದರು.

ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ ಮಾತನಾಡಿ, ಪತ್ರಿಕೋದ್ಯಮ ಇಂದು ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿ ಹೊಂದಿದ್ದು ಪತ್ರಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿನ ಅನುಕೂಲಗಳಿಗಿಂತ ಸವಾಲುಗಳು ಹೆಚ್ಚಾಗಿವೆ ಎಂದರು. ನಮ್ಮ ಮೊಬೈಲ್ ಗಳಲ್ಲಿ ಒಂದು ಆಪ್ ಹೇಗೆ ಅಪ್ಡೇಟ್‌ ಆಗುತ್ತದೆಯೋ ಅದೇ ರೀತಿಯಾಗಿ ತಾಂತ್ರಿಕವಾಗಿ ಇಂದಿನ ಪತ್ರಕರ್ತರು ಬದಲಾವಣೆ ಕಾಣಬೇಕಿದೆ. ಪೆನ್ನಿನಲ್ಲಿ ಬರೆಯುವ ಅನೇಕ ಪತ್ರಕರ್ತರು ಇಂದಿನ ಡಿಜಿಟಲ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಹೊಂದಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸರ್ಕಾರಿ ಕಚೇರಿಯಲ್ಲಿ ತಾಂತ್ರಿಕ ವ್ಯವಸ್ಥೆಗಳು ಜಾರಿಯಲ್ಲಿವೆ. ಹಾಗೆಯೇ ಇಂದಿನ ಪತ್ರಕರ್ತರು ನವಮಾಧ್ಯಮದ ಅಂತರ್ಯಗಳನ್ನು ಅರಿತುಕೊಂಡು ಪತ್ರಿಕೋದ್ಯಮವನ್ನು ಮುನ್ನಡೆಸಬೇಕು ಎಂದು ತಿಳಿಸಿದರು.

ಇಂದು ಐ ಏ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ) ನಮ್ಮ ಪತ್ರಕರ್ತರ ಕಾರ್ಯವೈಖರಿಗಳನ್ನು ಕಸಿದುಕೊಂಡಿದ್ದು ಅನ್ಯ ಭಾಷೆಗಳ ಅಕ್ಷರಗಳನ್ನು ಲೀಲಾಜಾಲವಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಸರಳವಾದ ವಿಧಾನವನ್ನು ಕಂಡುಕೊಂಡಿದೆ. ಆದರೆ ಇದರಲ್ಲಿನ ಕೆಲ ತಾಂತ್ರಿಕ ದೋಷಗಳನ್ನು ಬದಲಾಯಿಸಿಕೊಳ್ಳಬೇಕು ಎಂದರು.ಗೌರಿಶ್‌ ಅಕ್ಕಿ ಮಾತನಾಡಿ ಪತ್ರಿಕೋದ್ಯಮ ಸಾಮಾಜಿಕ ಜಾಲತಾಣ ಸಂಕ್ರಮಣ ಸ್ಥಿತಿಯಲ್ಲಿದೆ. ಕಾಲದಿಂದ ಕಾಲಕ್ಕೆ ಹೊಸದಾದ ಬದಲಾವಣೆ ಕಾಣುವ ಹಾಗೆ ಮಾಧ್ಯಮ ಕ್ಷೇತ್ರದಲ್ಲಿ ಹಲವು ಬದಲಾವಣೆಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನಕೇಂದ್ರ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಮಾತನಾಡಿ ಪತ್ರಿಕೋದ್ಯಮ ಕವಲು ದಾರಿಯಲ್ಲಿದೆ. ಇದಕ್ಕೆ ಪರಿಹಾರಗಳು ಬೇಕಿದೆ. ಇಂತಹ ಸಮಾವೇಶ ಅವಶ್ಯಕವಾಗಿದ್ದು ಚರ್ಚೆಗಳು ನಡೆಯಬೇಕಿದೆ ಎಂದರು. ಹರೀಶ್ ಆಚಾರ್ಯ ಮತ್ತಿತರರು ಇದ್ದರು.ಫೋಟೋ : ತುಮಕೂರಿನಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಸಮ್ಮೇಳನದಲ್ಲಿ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಎಂಬ ವಿಚಾರಗೋಷ್ಠಿ ನಡೆಯಿತು.

.