ಮನುಸ್ಮೃತಿ ಹರಿದು ದಸಂಸ ಆಕ್ರೋಶ

| Published : Dec 26 2024, 01:01 AM IST

ಸಾರಾಂಶ

ಮನುಸ್ಮೃತಿಯಲ್ಲಿ ಮಹಿಳೆಯರಿಗೂ ಸಾಮಾನತೆ ನೀಡದಿರುವುದು, ಸತಿ ಸಹಗಮನ ಪದ್ಧತಿ ಮುಂತಾದ ಆಚರಣೆಗಳ ಕುರಿತು ಖಂಡಿಸಿ

ಮೈಸೂರುಮನು ಸ್ಮೃತಿಯಲ್ಲಿ ಮೌಢ್ಯ, ಕಂದಾಚಾರ, ಅಸಮಾನತೆ ಇದೆ ಎಂದು ಆರೋಪಿಸಿ ಸ್ಮೃತಿಯ ಪ್ರತಿಯನ್ನು ಹರಿದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆಕ್ರೋಷ ವ್ಯಕ್ತಪಡಿಸಿದರು. ನಗರದ ಪುರಭವನ ಆವರಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ 36ನೇ ವಯಸ್ಸಿನಲ್ಲಿ ಡಿ. 25ರಂದು ಮನುಸ್ಮೃತಿ ಸುಟ್ಟ ಹಿನ್ನೆಲೆ ಕುರಿತು ವಿವರವಾಗಿ ಚರ್ಚಿಸಲಾಯಿತು.

ಮನುಸ್ಮೃತಿಯಲ್ಲಿ ಮಹಿಳೆಯರಿಗೂ ಸಾಮಾನತೆ ನೀಡದಿರುವುದು, ಸತಿ ಸಹಗಮನ ಪದ್ಧತಿ ಮುಂತಾದ ಆಚರಣೆಗಳ ಕುರಿತು ಖಂಡಿಸಿ ಅಸಾಮಾನತೆಗೆ ಬೆಂಬಲವಾಗಿದ್ದ ಮನುಸ್ಮೃತಿಯನ್ನು ಸುಟ್ಟುಹಾಕಿದ ಅಂಬೇಡ್ಕರ್ ಅವರಲ್ಲಿ ಇದ್ದ ಆಕ್ರೋಶದ ಕುರಿತು ಚರ್ಚೆ ಆಯಿತು. ಸಭೆಯಲ್ಲಿ ಚೋರನಹಳ್ಳಿ ಶಿವಣ್ಣ, ಹರಿಹರ ಆನಂದಸ್ವಾಮಿ, ಆರ್. ಮಹದೇವಪ್ಪ, ಹೊರಳವಾಡಿ ನಂಜುಂಡಸ್ವಾಮಿ, ಕೆ.ವಿ. ದೇವೇಂದ್ರ, ಕಿರಂಗೂರು ಸ್ವಾಮಿ ಮೊದಲಾದವರು ಇದ್ದರು.