ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬಡವರ, ವಿದ್ಯಾವಂತರ ಬಾಳಿಗೆ ಬೆಳಕಾಗಿ ಕಷ್ಟದಲ್ಲಿದ್ದವರಿಗೆ ಕಾವಲಾಗಿ ನಿಂತಿದ್ದು ಮೆಟಗುಡ್ಡ ಕುಟುಂಬ ಎಂದು ಹೊಸೂರ ಗುರು ಮಡಿವಾಳೇಶ್ವಮಠದ ಗಂಗಾಧರ ಸ್ವಾಮೀಜಿ ನುಡಿದರು.ಪಟ್ಟಣದ ನಡೆದ ಉದ್ಯಮಿ, ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಅವರ 48ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸೇವೆಯೆ ಜನಾರ್ಧನ ಸೇವೆ ಎಂಬ ನಾಣ್ಣುಡಿಯಂತೆ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುವುದು ಮೆಟಗುಡ್ಡ ಮನೆತನದ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಅದು ಈಗಲೂ ಮುಂದುವರೆದಿದೆ ಎಂದು ಬಣ್ಣಿಸಿದರು. ಹಿರಿಯರ ಸನ್ಮಾರ್ಗದಲ್ಲಿ ಅವರು ಹಾಕಿಕೊಟ್ಟ ಕಾರ್ಯವನ್ನು ಇಂದಿನ ಯುವ ಪೀಳಿಗೆ ಕಟ್ಟುನಿಟ್ಟಾಗಿ ಮುಂದುವರೆಸಿಕೊಂಡು ಹಲವಾರು ಸಂಘ-ಸಂಸ್ಥೆಗಳನ್ನು ಹುಟ್ಟು ಹಾಕಿ ಮತಕ್ಷೇತ್ರದ ಜನತೆಗೆ ಉದ್ಯೋಗ ಕಲ್ಪಿಸಿ ಅವರ ಅಭಿಮಾನಿಗಳ ಮೂಲಕ ಜನತೆಯೆ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಜನಸೇವೆ ಮಾಡುತ್ತೇವೆಂದು ರಾಜಕೀಯಕ್ಕೆ ಬಂದು ಅದೆಷ್ಟೋ ಜನ ಸ್ವಾರ್ಥ ಸಾಧನೆಗೆ ಶ್ರಮಿಸಿದ್ದೆ ಹೆಚ್ಚು. ಆದರೆ, ಮಾಜಿ ಶಾಸಕ ಜಗದೀಶ ಮೆಟಗುಡ್ಡರವರು ಮಾತ್ರ ರಾಜಕೀಯೊಂದಿಗೆ ಸಮಾಜಸೇವೆ ಮಾಡುತ್ತ ಜನರ ಮನಸ್ಸಿನಲ್ಲಿ ನಿತ್ಯ ಹಸಿರಾಗಿದ್ದಾರೆ. ವಿವಿಧ ಉದ್ಯಮಗಳನ್ನು ಸ್ಥಾಪಿಸಿ ಬಡ ಮತ್ತು ಮಧ್ಯಮ ವರ್ಗದ ಸಾವಿರಾರು ನಿರುದ್ಯೋಗ ವಿದ್ಯಾವಂತರ ಬಾಳಿನ ಆಶಾ ಕಿರಣ, ಸವ್ಯಸಾಚಿ ವಿಜಯ ಮೆಟಗುಡ್ಡ ಅವರು ಉದಯೋನ್ಮುಖ ನಾಯಕರಾಗಿ ಹೊರಹೊಮ್ಮಲಿ ಎಂದು ಆಶಿಸಿ ಜನ್ಮದಿನದ ಶುಭಕೋರಿದರು. ಉದ್ಯಮಿ, ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಮಾತನಾಡಿ, ನನ್ನ ಮೇಲೆ ಪ್ರೀತಿ, ವಿಶ್ವಾಸ, ವಾತ್ಸಲ್ಯವಿಟ್ಟು ಶುಭಕೋರಿದ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಸದಾ ಚಿರರುಣಿ. ನಮ್ಮ ಪೂರ್ವಜರ ಕಾಲದಿಂದಲೂ ಸಾಮಾಜಿಕ ಕಾರ್ಯ ಮಾಡಿಕೊಂಡು ನಿರಂತರವಾಗಿ ಬಂದಿದ್ದು, ಅವರ ಸನ್ಮಾರ್ಗದಲ್ಲಿ ಇಂದಿಗೂ ಕಾರ್ಯನಿರ್ವಹಿಸಲು ಸದಾ ಸಿದ್ಧ ಎಂದು ಭರವಸೆ ನೀಡಿದರು.ಈ ವೇಳೆ ಪ್ರಪುಲ ಪಾಟೀಲ, ಸುನೀಲ ಮರಕುಂಬಿ, ಗುರು ಮೆಟಗುಡ್ಡ, ಅನಿಲ ಮೆಟಗುಡ್ಡ, ಸುಭಾಸ ತುರಮರಿ, ಸಂಜು ಕುಪ್ಪಸಗೌಡರ, ಶಂಬೂ ಹೂಲಿ, ಸಂದೀಪ ಬೆಲ್ಲದ, ಶಿವಾನಂದ ಬಡ್ಡಿಮನಿ, ಆನಂದ ತುರಮರಿ, ರವಿ ತುರಮರಿ, ಜಗದೀಶ ಬೂದಿಹಾಳ, ನಾಗರಾಜ ಮರಕುಂಬಿ, ದಯಾನಂದ ಪರಾಳಶೆಟ್ಟರ, ಶಂಕರೆಪ್ಪ ಚೌಡನ್ನವರ, ಲಕ್ಕಪ್ಪ ಕಾರಗಿ, ಸಂತೋಷ ಹಡಪದ, ಸಚಿನ ಕಡಿ, ನಾಗಪ್ಪ ಸಂಗೊಳ್ಳಿ, ಮಂಜುನಾಥ ಜೋರಾಪುರ, ಬಸವರಾಜ ಶಿಂತ್ರಿ, ಪ್ರಕಾಶ ಕಾರಿಮನಿ, ರಾಚಪ್ಪ ಮಟ್ಟಿ, ಶಂಕರ ಬಾಗೇವಾಡಿ, ಶಿವಯೋಗಿ ಹಿರೇಮಠ, ಸುರೇಶ ಮ್ಯಾಕಲ, ಬಸವರಾಜ ಬಂಡಿವಡ್ಡರ ಹಾಗೂ ಸಾವಿರಾರು ನಾಗರೀಕರು ಇದ್ದರು.ವಿಶೇಷ ಪೂಜೆ, ಶುಭಕೋರಿದ ಗಣ್ಯರು
ಜನ್ಮದಿನದ ಅಂಗವಾಗಿ ವಿಜಯ ಮೆಟಗುಡ್ಡ ಅವರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ, ಯುವ ಮುಖಂಡ ವಿಕ್ರಂ ಇನಾಂದಾರ ಅನೇಕ ಗಣ್ಯಮಾನ್ಯರು, ಸಾವಿರಾರು ಕಾರ್ಯಕರ್ತರು ಅಗಮಿಸಿ ಶುಭಕೋರಿದರು.ಹಣ್ಣು ಹಂಪಲು, ಆರೋಗ್ಯ ಬಾಲಕಿಟ್ ವಿತರಣೆ, ರಕ್ತದಾನ ಶಿಬಿರ
ಜನ್ಮದಿನದ ಅಂಗವಾಗಿ ಉದ್ಯಮಿ ವಿಜಯ ಮೆಟಗುಡ್ಡ ಅವರ ಅಭಿಮಾನಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಡರೋಗಿಗಳಿಗೆ ಮತ್ತು ವೃದ್ಧಾಶ್ರಮಕ್ಕೆ ಹಣ್ಣು ಹಂಪಲು ವಿತರಿಸಿದರು. ಮತಕ್ಷೇತ್ರದ ಶಾಸಕರ ಮಾದರಿ ನಂ.4ರ ಶಾಲೆಗೆ 650 ಹಾಗೂ ಆನಿಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 350 ಮಕ್ಕಳಿಗೆ ಆರೋಗ್ಯ ಬಾಲಕಿಟ್ ವಿತರಿಸಿ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು. ಬೆಳಗಾವಿ ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯ ಮೆಟಗುಡ್ಡ ಅಭಿಮಾನಿ ಬಳಗದ ಆಶ್ರಯದಲ್ಲಿ ಪಟ್ಟಣದ ಹೊಸೂರ ರಸ್ತೆಯ ಬ್ಯಾಡ್ಮಿಂಟನ್ ಹಾಲನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 261ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. 850 ಯುವಕ, ಯುವತಿಯರಿಗೆ ಉಚಿತ ಕಲಿಕಾ ಚಾಲನಾ ಪರವಾನಿಗೆ(ಎಲ್‌ಎಲ್‌ಆರ್) ಮಾಡಿಕೊಡಲಾಯಿತು. ಮರಕುಂಬಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಸಿ ವಿತರಿಸಲಾಯಿತು.ನನ್ನ ಮೇಲೆ ಪ್ರೀತಿ, ವಿಶ್ವಾಸ, ವಾತ್ಸಲ್ಯವಿಟ್ಟು ಶುಭಕೋರಿದ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಸದಾ ಚಿರರುಣಿ. ನಮ್ಮ ಪೂರ್ವಜರ ಕಾಲದಿಂದಲೂ ಸಾಮಾಜಿಕ ಕಾರ್ಯ ಮಾಡಿಕೊಂಡು ನಿರಂತರವಾಗಿ ಬಂದಿದ್ದು ಅವರ ಸನ್ಮಾರ್ಗದಲ್ಲಿ ಇಂದಿಗೂ ಕಾರ್ಯನಿರ್ವಹಿಸಲು ಸದಾ ಸಿದ್ಧ.
-ವಿಜಯ ಮೆಟಗುಡ್ಡ, ಬಿಜೆಪಿ ಮುಖಂಡರು.