ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಸಹಯೋಗದೊಂದಿಗೆ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ಪತ್ರಿಕಾ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವನ್ನು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬುಧವಾರ ಉದ್ಘಾಟಿಸಿದರು. ಬಳಿಕ ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಮೈಸೂರಿನ ವಿವಿಧ ಪತ್ರಿಕೆಗಳ ಛಾಯಾಗ್ರಾಹಕರು ತೆಗೆದಿರುವ ಅತ್ಯುತ್ತಮ ಸುದ್ದಿ ಛಾಯಾಚಿತ್ರ, ದಸರಾ ಗಜಪಡೆ, ಅಂಬಾರಿ ಆನೆಗಳಾದ ಅರ್ಜುನ, ಬಲರಾಮ, ಅಭಿಮನ್ಯು, ವಯನಾಡಿ ಭೂಕುಸಿತದ ಚಿತ್ರ, ವನ್ಯಜೀವಿ ಛಾಯಾಚಿತ್ರ, ದಸರಾ ಮಹೋತ್ಸವ, ಜಂಬೂಸವಾರಿ, ಖಾಸಗಿ ದರ್ಬಾರ್, ಚಾಮುಂಡೇಶ್ವರಿ ರಥೋತ್ಸವ, ಮೈಸೂರಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಹಿರಿಯ ರಾಜಕಾರಣಿಗಳು ಚಿತ್ರಗಳು, ಮಾನವೀಯತೆ ಛಾಯಾಚಿತ್ರ ಸೇರಿದಂತೆ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಪ್ರದರ್ಶನವು ಅ.12 ರವರೆಗೆ ನಡೆಯಲಿದ್ದು, 150 ಹೆಚ್ಚು ಕಣ್ಮನ ಸೆಳೆಯುವ ಛಾಯಾಚಿತ್ರಗಳಿವೆ.ಶಾಸಕರಾದ ಜಿ.ಟಿ. ದೇವೇಗೌಡ, ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ,ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ, ಉಪಾಧ್ಯಕ್ಷ ಎಸ್.ಆರ್. ಮಧುಸೂದನ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಯಾದವ್, ಖಜಾಂಜಿ ಎ. ನಂದನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎ. ಶ್ರೀರಾಮ್, ಕೆ.ಎಚ್. ಚಂದ್ರು, ಅನುರಾಗ್ ಬಸವರಾಜ್, ಹಂಪಾ ನಾಗರಾಜ್, ಎಸ್. ಉದಯಶಂಕರ್, ಕೃಷ್ಣೋಜಿರಾವ್, ನಾಗೇಶ್ ಪಾಣತ್ತಲೆ, ರವಿ ಗವಿಮಠ, ನಿಶಾಂತ್ ಪಾಲ್, ಟಿ. ಅನೂಪ್ ರಾಘ ಮೊದಲಾದವರು ಇದ್ದರು.