ಕಂಪೌಂಡ್ ಗೋಡೆ ನಿರ್ಮಾಣದ ಅಡಿಗಲ್ಲು ಪೂಜೆ ನೆರವೇರಿಸಿ ಸಚಿವ

| Published : Mar 01 2024, 02:15 AM IST

ಕಂಪೌಂಡ್ ಗೋಡೆ ನಿರ್ಮಾಣದ ಅಡಿಗಲ್ಲು ಪೂಜೆ ನೆರವೇರಿಸಿ ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ: ಪಟ್ಟಣದ ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಭಾಗೀಯ ಕಚೇರಿಯ ಕಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಸಚಿವ ಶಿವಾನಂದ ಪಾಟೀಲ ಅಡಿಗಲ್ಲು ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಕಂಪೌಂಡ್ ಗೋಡೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು.ಮುಂದೆ ಯಾವುದೇ ತೊಂದರೆಯಾಗದಂತೆ ಗುತ್ತಿಗೆದಾರರು ಗಮನ ಹರಿಸುವಂತೆ ಸೂಚಿಸಿದರು.

ಬಸವನಬಾಗೇವಾಡಿ: ಪಟ್ಟಣದ ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಭಾಗೀಯ ಕಚೇರಿಯ ಕಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಸಚಿವ ಶಿವಾನಂದ ಪಾಟೀಲ ಅಡಿಗಲ್ಲು ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಕಂಪೌಂಡ್ ಗೋಡೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು.ಮುಂದೆ ಯಾವುದೇ ತೊಂದರೆಯಾಗದಂತೆ ಗುತ್ತಿಗೆದಾರರು ಗಮನ ಹರಿಸುವಂತೆ ಸೂಚಿಸಿದರು.ಎಇಇ ಜಿ.ಟಿ.ಬಡಿಗೇರ, ವಿಭಾಗೀಯ ಕಚೇರಿಗೆ 2.25 ಮೀಟರ ಉದ್ದದ ಕಂಪೌಂಡ್ ಗೋಡೆ ಕಾಮಗಾರಿ ₹ 38.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು. ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬೆಂಜಗೆರೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ಬಿ.ಸಂಪನ್ನವರ, ಸಿದ್ರಾಮ ಬಿರಾದಾರ, ಸಹಾಯಕ ಅಭಿಯಂತರರಾದ ಎಸ್.ಎಂ.ತಳವಾರ, ಎಸ್.ಎಂ.ಕೆಂಗನಾಳ, ಗುತ್ತಿಗೆದಾರ ರಾಜಶೇಖರ ಚೋರಗಿ, ಸುಭಾಸ ನಾಶಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ಪ್ರವೀಣ ಪೂಜಾರಿ, ಮುಖಂಡರಾದ ಶೇಖರ ಗೊಳಸಂಗಿ, ಬಸಣ್ಣ ದೇಸಾಯಿ,ಬಸವರಾಜ ಕೋಟಿ, ಬಸವರಾಜ ರಾಯಗೊಂಡ, ಸಿ.ಎಸ್.ಪಾಟೀಲ, ರವಿ ರಾಠೋಡ, ರವಿ ಚಿಕ್ಕೊಂಡ,ನಿಸಾರ ಚೌಧರಿ, ಎಂ.ಜಿ.ಆದಿಗೊಂಡ, ಸಂಕನಗೌಡ ಪಾಟೀಲ, ಪರಶುರಾಮ ಜಮಖಂಡಿ, ರಮಜಾನ ಹೆಬ್ಬಾಳ,ಕಾಶೀನಾಥ ರಾಠೋಡ, ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ, ಪುರಸಭೆ ಅಭಿಯಂತರ ಸಂತೋಷ ಗಿಡ್ಡಸಣ್ಣನವರ ಇದ್ದರು.