ಒಂದೇ ಕುಟುಂಬದ ಮೂವರು ನಾಪತ್ತೆ

| Published : Mar 23 2025, 01:34 AM IST

ಸಾರಾಂಶ

ಮಾ.3 ರಂದು ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ ಎಂದು ಬಿಬಿ ಸಾರಾ ತಂದೆ ಅಲ್ತಾಫ್ ಅಹಮದ್ ದೂರು

ಕನ್ನಡಪ್ರಭ ವಾರ್ತೆ ಮೈಸೂರು

ಒಂದೇ ಕುಟುಂಬದ ಮೂವರು ನಾಪತ್ತೆಯಾಗಿರುವ ಸಂಬಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉದಯಗಿರಿ ನಿವಾಸಿ ಮೊಹಮ್ಮದ್ ಜಬೀವುಲ್ಲಾ(30), ಅವರ ಪತ್ನಿ ಬಿಬಿ ಸಾರಾ(27) ಮತ್ತು ಪುತ್ರ ಮೊಹಮ್ಮದ್ ಉಮ್ಮರ್(2) ಎಂಬವರೇ ಕಾಣೆಯಾದವರು.ನನ್ನ ಪುತ್ರಿ ಬಿಬಿ ಸಾರಾಳನ್ನು 7 ವರ್ಷಗಳ ಹಿಂದೆ ಬೆಂಗಳೂರಿನ ಮೊಹಮ್ಮದ್ ಜಬೀವುಲ್ಲಾ ಅವರೊಂದಿಗೆ ಮದುವೆ ಮಾಡಿದ್ದು, ಅವರಿಗೆ 1 ಗಂಡು ಮಗು ಇದೆ. ಮದುವೆ ನಂತರ ಬೆಂಗಳೂರಿನಲ್ಲಿದ್ದು, ಕಳೆದ 4 ತಿಂಗಳಿಂದ ತಮ್ಮ ಮನೆಯಲ್ಲಿದ್ದರು. ಹೀಗಿರುವಾಗ ಮಾ.3 ರಂದು ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ ಎಂದು ಬಿಬಿ ಸಾರಾ ತಂದೆ ಅಲ್ತಾಫ್ ಅಹಮದ್ ದೂರು ನೀಡಿದ್ದಾರೆ.ಮೊಹಮ್ಮದ್ ಜಬೀವುಲ್ಲಾ ಚಹರೆ- 5.7 ಅಡಿ ಎತ್ತರ, ದುಂಡು ಮುಖ, ದೃಢಕಾಯ ಶರೀರ, ಗೋದಿ ಮೈಬಣ್ಣ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮಾತನಾಡುತ್ತಾರೆ. ಕಾಣೆಯಾದ ದಿನ ಪಿಂಕ್ ಟೀ ಶರ್ಟ್, ಬ್ಲ್ಯೂ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಬಿಬಿ ಸಾರಾ ಚಹರೆ- 5.1 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮಾತನಾಡುತ್ತಾರೆ. ಕಾಣೆಯಾದ ದಿನ ಕಪ್ಪು ಬೂರ್ಖಾ, ಕ್ರೀಂ ವೇಲ್ ಧರಿಸಿದ್ದರು. ಮೊಹಮ್ಮದ್ ಉಮ್ಮರ್ ಚಹರೆ- 2 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕಾಣೆಯಾದ ದಿನ ಬ್ಲೂ ಟೀ ಶರ್ಟ್, ಗ್ರೇ ಜೀನ್ಸ್ ಪ್ಯಾಂಟ್ ಧರಿಸಿದ್ದರು.

ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418309 ಸಂಪರ್ಕಿಸಲು ಉದಯಗಿರಿ ಠಾಣೆಯ ಪೊಲೀಸರು ಕೋರಿದ್ದಾರೆ.