ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ಜನಗಣತಿ ನಡೆಯಲಿದ್ದು, ಇದರ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯು ರಾಜ್ಯದಲ್ಲಿಯೂ ಏಪ್ರಿಲ್ ೧ರಿಂದ ೧೫ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ನಗರದಲ್ಲಿ ಜನಗಣತಿ ನಡೆಸಲು ಶಾಸಕಿ ರೂಪಕಲಾ ಶಶಿಧರ್ ಅವರು ಮೊದಲು ತಮ್ಮ ಮನೆಯಿಂದ ಜನಗಣತಿಗೆ ಚಾಲನೆ ನೀಡಿದರು.ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ಜನಗಣತಿ ನಡೆಯಲಿದ್ದು, ಇದರ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯು ರಾಜ್ಯದಲ್ಲಿಯೂ ಏಪ್ರಿಲ್ ೧ರಿಂದ ೧೫ರವರೆಗೆ ನಡೆಯಲಿದ್ದು, ಅದರಂತೆ ಕೆಜಿಎಫ್ ನಗರದಲ್ಲಿ ಕೂಡ ಚಾಲನೆ ನೀಡಲಾಗಿಗು, ಪ್ರತಿಯೊಬ್ಬರು ಜನಗಣತಿ ಮಾಹಿತಿಯನ್ನು ನೀಡಬೇಕು, ನಿಮ್ಮ ಮನೆಯಿಂದಲೇ ಸ್ವಯಂ ಡಿಜಿಟಲ್ ರೂಪದಲ್ಲಿ ಸಹ ನಿಮ್ಮ ಮಾಹಿತಿಯನ್ನು ನೀಡಬಬುದಾಗಿದೆ ಎಂದರು. ಸಂಫೂರ್ಣ ಡಿಜಿಟಲ್ ಗಣತಿ:

ಇದು ಸಂಪೂರ್ಣ ಡಿಜಿಟಲ್ ರೂಪದಲ್ಲಿದ್ದು, ಸಾಂಪ್ರದಾಯಿಕ ಕಾಗದ-ಪೆನ್ನು ಪದ್ಧತಿಯನ್ನು ಕೈಬಿಡಲಾಗಿದೆ. ನಾಗರಿಕರು ವೆಬ್ ಪೋರ್ಟಲ್‌ನಲ್ಲಿ ತಮ್ಮ ಮನೆಯ ಸದಸ್ಯರ ವಿವರಗಳನ್ನು ೧೫ ನಿಮಿಷಗಳಲ್ಲಿ ದಾಖಲಿಸಬಹುದು. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಗಣತಿ, ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ, ಕುಟುಂಬದ ಸದಸ್ಯರು ಸ್ವಯಂ ನೋಂದಣಿ ಮಾಡಿದ ನಂತರ, ಮೊಬೈಲ್, ಇಮೇಲ್ ಮೂಲಕ ಐಡಿ ಪಡೆಯಬಹುದು, ಇದು ಗಣತಿದಾರರಿಗೆ ಮಾಹಿತಿ ನೀಡಲು ಸುಲಭವಾಗುತ್ತದೆ ಎಂದು ಪೌರಾಯುಕ್ತ ಶ್ರೀಧರ್ ತಿಳಿಸಿದರು.೧ಕೆಜಿಎಫ್೨ಕೆಜಿಎಫ್ ತಾಲೂಕಿನ ಜನಗಣತಿಯನ್ನು ಶಾಸಕಿ ರೂಪಕಲಾಶಶಿಧರ್ ಅವರ ಮನೆಯಿಂದ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಚ್.ಜೆ.ಭರತ್, ಪೌರಾಯುಕ್ತ ಶ್ರೀಧರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.