ಸಾರಾಂಶ
ಶ್ರಾವಣ ಮಾಸ ನಮ್ಮ ನಾಡಿನ ಅಧ್ಯಾತ್ಮ ಪರಂಪರೆಯ ಸಂಸ್ಕೃತಿ, ಸಂಸ್ಕಾರಗಳ ಇತಿಹಾಸ ಹೊಂದಿದೆ. ಕೆಲವು ಖಿನ್ನತೆಯ ಮನಸ್ಸುಗಳನ್ನು ಪುಳಕಿತೊಗಳಿಸುವ ಶಕ್ತಿಯೂ ಈ ಶ್ರಾವಣ ಸಂಭ್ರಮಕ್ಕೆ ಇದೆ ಎಂದು ಕಲಾಕುಂಚ ಸಂಸ್ಥೆಯ ಎಂಸಿಸಿ ಶಾಖೆ ಅಧ್ಯಕ್ಷೆ ಪ್ರಭಾ ರವೀಂದ್ರ ದಾವಣಗೆರೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
- ಶ್ರಾವಣ ಗೃಹ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ - - - ದಾವಣಗೆರೆ: ಶ್ರಾವಣ ಮಾಸ ನಮ್ಮ ನಾಡಿನ ಅಧ್ಯಾತ್ಮ ಪರಂಪರೆಯ ಸಂಸ್ಕೃತಿ, ಸಂಸ್ಕಾರಗಳ ಇತಿಹಾಸ ಹೊಂದಿದೆ. ಕೆಲವು ಖಿನ್ನತೆಯ ಮನಸ್ಸುಗಳನ್ನು ಪುಳಕಿತೊಗಳಿಸುವ ಶಕ್ತಿಯೂ ಈ ಶ್ರಾವಣ ಸಂಭ್ರಮಕ್ಕೆ ಇದೆ ಎಂದು ಕಲಾಕುಂಚ ಸಂಸ್ಥೆಯ ಎಂಸಿಸಿ ಶಾಖೆ ಅಧ್ಯಕ್ಷೆ ಪ್ರಭಾ ರವೀಂದ್ರ ಅಭಿಪ್ರಾಯಪಟ್ಟರು.
ನಗರದ ಸಿದ್ದವೀರಪ್ಪ ಬಡಾವಣೆಯ ಯಗಟಿ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಇತ್ತೀಚಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಶ್ರಾವಣ ಗೃಹ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷೆ ಲಲಿತಾ ಕಲ್ಲೇಶ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಿಮ್ಮೆಲ್ಲರ ಈ ಪೂಜಾ ವಿಧಿವಿಧಾನಗಳು ಕೇವಲ ಶ್ರಾವಣ ಮಾಸಕ್ಕೆ ಸೀಮಿತವಾಗದೇ ವರ್ಷಪೂರ್ತಿ ನಡೆದುಕೊಂಡು ಬರಬೇಕು. ಆಗ ನಮ್ಮ ಜೀವನಕ್ಕೂ ಸಾರ್ಥಕತೆ ಬರುತ್ತದೆ ಎಂದರು.
ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್, ಮಂಗಳಗೌರಿ, ರೇಣುಕಾ ರಾಮಣ್ಣ, ಸುಮಾ ಏಕಾಂತಪ್ಪ, ಲೀಲಾ ಸುಭಾಷ್, ಮಮತಾ ಕೊಟ್ರೇಶ ಇತರರು ಇದ್ದರು. ಕಾರ್ಯಕ್ರಮದಲ್ಲಿ ಸಾಮೂಹಿಕ ಭಜನೆ, ರಕ್ಷಾಬಂಧನ ನಡೆಯಿತು.- - - -26ಕೆಡಿವಿಜಿ32ಃ:
ದಾವಣಗೆರೆಯ ಕಲಾಕುಂಚ ಸಂಸ್ಥೆಯಿಂದ ನಡೆದ ಶ್ರಾವಣ ಗೃಹ ಸಂಭ್ರಮ ಕಾರ್ಯಕ್ರಮವನ್ನು ಪ್ರಭಾ ರವೀಂದ್ರ ಉದ್ಘಾಟಿಸಿದರು.