ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶ್ರಮ ಸಂಸ್ಕೃತಿಯ ತಾಯಿ ಬೇರು ಶರಣ ಸಂಸ್ಕೃತಿ. ಅದು ಬಹುತ್ವದ ಪ್ರತೀಕವಾಗಿತ್ತು. ಅಂತಹ ಹಿನ್ನೆಲೆಯ ಸಂಘ ಸಂಸ್ಥೆಗಳು ರೂಪಗೊಂಡು ದುಡಿಮೆಗೆ ಆದ್ಯತೆ ನೀಡುವ ಸಂಕಲ್ಪ ತೊಡಬೇಕು. ಕಾಯಕ ಸಂಸ್ಕೃತಿ ವಿಶ್ವಮಾನ್ಯತೆ ಪಡೆದಿದೆ ಎಂದು ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕರ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾರ್ಮಿಕರದು ಮಾನವೀಯ ಹಿನ್ನೆಲೆಯ ದುಡಿಮೆ. ಅದು ಇನ್ನೊಬ್ಬರಿಗೆ ಪ್ರೇರಕ ಶಕ್ತಿಯಾಗಿದೆ. ಅಂತಹ ಕೆಲಸಕ್ಕೆ ತಕ್ಕ ಪ್ರತಿಫಲವೂ ಸಿಗಬೇಕಾಗಿದೆ. 12ನೇ ಶತಮಾನದ ಬಸವಾದಿ ಶರಣರ ಆಶಯವು ಕೌಶಲ್ಯಾಧಾರಿತ ದುಡಿಮೆ ಆಗಿತ್ತು. ಅಲ್ಲಿ ನೀತಿ ಪ್ರಧಾನ ಕಾಯಕಕ್ಕೆ ಆದ್ಯತೆ ಇತ್ತು. ಆ ಸಂಸ್ಕೃತಿಯ ಹಾದಿಯಲ್ಲಿ ನಾವು ಇಂದು ಸಾಗಬೇಕಾಗಿದೆ. ನಿಮ್ಮ ಈ ಸಂಘಟನೆಗೆ ಶ್ರೀಮಠದ ಬೆಂಬಲ ಸದಾ ಇದ್ದೇ ಇರುತ್ತದೆಂಬ ಆಶಯ ವ್ಯಕ್ತಪಡಿಸಿದರು.ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿಗಳು, ನಿಮ್ಮ ಕೆಲಸಕ್ಕೆ ಇಂತಹ ಸಂಘಟನೆಯ ಮೂಲಕ ನ್ಯಾಯ ದೊರಕಿಸಿಕೊಳ್ಳುವ ಅವಕಾಶವಿರುತ್ತದೆ. ಸಂಘದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ್ ಪಾರ್ಥ, ಕಾರ್ಯದರ್ಶಿ ಶಿವಕುಮಾರ್ ಹಾಗೂ ರಾಜ್ಯ ಪದಾಧಿಕಾರಿಗಳಾದ ಸೋಮಣ್ಣ, ರಂಗಸ್ವಾಮಿ, ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ರವಿಕುಮಾರ್ ಬ್ಯಾಲಹಾಳ್, ನಾಗರಾಜ್ ಸಿ., ಬರಹಗಾರರಾದ ಆನಂದ್, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾಗಿ ರವಿಚಂದ್ರ, ತಾಲೂಕ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಸೇರಿ ಇನ್ನು ಹಲವು ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.---------------ಚಿತ್ರದುರ್ಗದ ಅಲ್ಲಮ ಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸಂಘದ ಪದಗ್ರಹಣ ಸಮಾರಂಭವನ್ನು ಡಾ. ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು.
3ಸಿಟಿಡಿ 2-