ಸಾರಾಂಶ
ಭಿಕ್ಷಾಟನೆಗೆ ಹೋಗಿಲ್ಲವೆಂದು ಊಟ ಮಾಡುತ್ತಿದ್ದ ಬಾಲಕಿ ಮೇಲೆ ಹೆತ್ತ ತಾಯಿಯೇ ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆ ನಗರದಲ್ಲಿ ವರದಿಯಾಗಿದೆ.
- ಕೈಗೆ ಸಿಕ್ಕಿದ ವಸ್ತುಗಳಿಂದ ಬಾಲಕಿ ಮೇಲೆ ಹಲ್ಲೆ, ವಿಡಿಯೋ ವೈರಲ್
- - - ದಾವಣಗೆರೆ: ಭಿಕ್ಷಾಟನೆಗೆ ಹೋಗಿಲ್ಲವೆಂದು ಊಟ ಮಾಡುತ್ತಿದ್ದ ಬಾಲಕಿ ಮೇಲೆ ಹೆತ್ತ ತಾಯಿಯೇ ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆ ನಗರದಲ್ಲಿ ವರದಿಯಾಗಿದೆ.ನಗರದ ದೇವರಾಜ ಅರಸು ಬಡಾವಣೆಯ ಪೆಟ್ರೋಲ್ ಬಂಕ್ ಪಕ್ಕದ ಶೆಡ್‌ಗಳಲ್ಲಿ ಅಲೆಮಾರಿ ಕುಟುಂಬಗಳು ತಾತ್ಕಾಲಿಕವಾಗಿ ನೆಲೆಸಿವೆ. ಈ ಕುಟುಂಬದ ಓರ್ವ ಬಾಲಕಿ ಹಸಿದು ಊಟಕ್ಕೆ ಕುಳಿತಿದ್ದಳು. ಈ ವೇಳೆ ಆಕೆಯ ತಾಯಿಯು ಹಿಗ್ಗಾಮುಗ್ಗಾ ಥಳಿಸಿ, ಭಿಕ್ಷೆ ಬೇಡಲು ಏಕೆ ಹೋಗಿಲ್ಲವೆಂದು ಆಕ್ರೋಶಗೊಂಡಿದ್ದಾಳೆ.
ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು, ಮಾತೃವಾತ್ಸಲ್ಯ ಎಂಬುದನ್ನೇ ಮರೆತು, ಬಾಲಕಿಗೆ ಹೊಡೆಯುತ್ತಿದ್ದಳು. ತಾಯಿಯ ಪೈಶಾಚಿಕ ಕೃತ್ಯವನ್ನು ಕಂಡ ಸ್ಥಳೀಯರು, ದಾರಿಹೋಕರು ತಕ್ಷಣವೇ ಮಗುವಿನ ನೆರವಿಗೆ ಧಾವಿಸಿದರು. ತಾಯಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಹೀಗೆ ಮನುಷ್ಯತ್ವವನ್ನೇ ಮರೆತು, ಕೈಗೆ ಸಿಕ್ಕಿದ್ದೆಲ್ಲದರಿಂದಲೂ ಮಗುವಿಗೆ ಬಡಿಯುತ್ತಿದ್ದ ತಾಯಿಗೆ ಪಾಲಕರು ಚನ್ನಾಗಿ ತರಾಟೆಗೆ ತೆಗೆದುಕೊಂಡರು. ಇನ್ನೊಂದು ಹೊಡೆತ ಹೊಡೆದರೂ ಪೊಲೀಸರಿಗೆ ಕರೆಸಿ, ಜೈಲಿಗೆ ಹಾಕಿಸುವುದಾಗಿ ಎಚ್ಚರಿಸಿದ್ದೂ ಆಯಿತು.
ಭಿಕ್ಷೆ ಬೇಡಲು ಒತ್ತಾಯಿಸಿ, ಮಗುವಿಗೆ ತಾಯಿಯೇ ಹೊಡೆಯುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ಗಳಲ್ಲಿ ವೀಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ.- - - (-ಸಾಂದರ್ಭಿಕ ಚಿತ್ರ)