ಸಾರಾಂಶ
ಗುಂಡ್ಲುಪೇಟೆ ಫುಡ್ ಜೋನ್ ಬಳಿ ಕೊಳಚೆ ನೀರು ನಿಂತಲ್ಲಿ ಜೆಸಿಬಿ ಕೆಲಸ ಮಾಡುತ್ತಿರುವುದು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಉದ್ಘಾಟನೆಗೊಳ್ಳದ ಫುಡ್ ಜೋನ್ ಬಳಿ ಕೊಳಚೆ ಎಂದು ಕನ್ನಡಪ್ರಭ ಫೆ.೧ ರಂದು ವರದಿ ಪ್ರಕಟಗೊಂಡ ಬೆನ್ನಲ್ಲೆ ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕೊಳಚೆ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ.ಫೆ.೧ ರ ಕನ್ನಡಪ್ರಭದಲ್ಲಿ ಫುಡ್ ಜೋನ್ ಬಳಿ ಕೊಳಚೆ, ದುರ್ವಾಸನೆಗೆ ಜನರ ಆಕ್ರೋಶ, ಉದ್ಘಾಟನೆ ತೋರದ ಪುರಸಭೆ, ನಿರ್ಮಾಣಗೊಂಡು ನಾಲ್ಕು ವರ್ಷ, ಹರಾಜಿಗೆ ಜಿಲ್ಲಾಧಿಕಾರಿಗೆ ಪತ್ರ ಎಂದು ವರದಿ ಪ್ರಕಟಿಸಿ ಪುರಸಭೆ ಹಾಗೂ ಶಾಸಕರ ಗಮನ ಸೆಳೆದಿತ್ತು. ಬುಧವಾರ ಮಧ್ಯಾಹ್ನ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಜೆಸಿಬಿ ಯಂತ್ರದ ಮೂಲಕ ಕ್ಲೀನ್ ಮಾಡಿಸಿದ ಬಳಿಕ ಯುಜಿಡಿಯಲ್ಲಿ ಫ್ಲೋ ಆಗುತ್ತಿದ್ದ ಕೊಳಚೆ ನೀರು ನಿಲ್ಲಿಸಿದ್ದಾರೆ.ಫುಡ್ ಜೋನ್ ಪೂರ್ವ ದಿಕ್ಕಿನಲ್ಲಿದ್ದ ಕೊಳಚೆ ನೀರಿಗೆ ಮಣ್ಣು ಹಾಕುವ ಮೂಲಕ ಕೊಳಚೆ ನೀರಿಗೆ ತಾತ್ಕಾಲಿಕವಾಗಿ ಮುಕ್ತಿ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಹೇಳಿದರು. ಫುಡ್ ಜೋನ್ ಮುಂದಿನ ಗಿಡ ಗಂಟಿಗಳ ತೆರವು ಸಹ ಮಾಡಲಾಗುತ್ತದೆ ಎಂದರು.
ಜನರ ಮೆಚ್ಚುಗೆ:ಕನ್ನಡಪ್ರಭ ಪತ್ರಿಕೆಯ ವರದಿ ಬಳಿಕ ಎಚ್ಚೆತ್ತಾದರೂ ಪುರಸಭೆ ಅಧಿಕಾರಿಗಳು ಕೊಳಚೆ ನೀರಿಗೆ ಬ್ರೇಕ್ ಹಾಕಿದ್ದಾರೆ. ಅಲ್ಲದೆ ಸ್ವಚ್ಛತೆಗೆ ಮುಂದಾಗಿದ್ದಕ್ಕೆ ಈ ಭಾಗದ ನಾಗರಿಕರು ಕನ್ನಡಪ್ರಭಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.