ಪಂಚಾಕ್ಷರ-ಪುಟ್ಟರಾಜ ಗವಾಯಿಗಳಿಂದ ಸಂಗೀತ ಲೋಕ ಉದ್ಧಾರ-ಡಾ. ಅನ್ನದಾನೀಶ್ವರ ಶ್ರೀ

| Published : Mar 09 2025, 01:48 AM IST

ಪಂಚಾಕ್ಷರ-ಪುಟ್ಟರಾಜ ಗವಾಯಿಗಳಿಂದ ಸಂಗೀತ ಲೋಕ ಉದ್ಧಾರ-ಡಾ. ಅನ್ನದಾನೀಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪಂ. ಪಂಚಾಕ್ಷರ ಗವಾಯಿಗಳವರು ಸಂಗೀತ ಲೋಕವನ್ನು ಉದ್ಧಾರ ಮಾಡಿದ ಮಹಾನ್ ಪುಣ್ಯಾತ್ಮರು. ಇವರ ಶಿಷ್ಯರಾದ ಪಂ.ಡಾ.ಪುಟ್ಟರಾಜ ಕವಿ ಗವಾಯಿಗಳವರೂ ಸಹ ಅಭೂತಪೂರ್ವ ಸಂಗೀತ ತಜ್ಞರಾಗಿದ್ದರು ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.

ಗದಗ: ಪಂ. ಪಂಚಾಕ್ಷರ ಗವಾಯಿಗಳವರು ಸಂಗೀತ ಲೋಕವನ್ನು ಉದ್ಧಾರ ಮಾಡಿದ ಮಹಾನ್ ಪುಣ್ಯಾತ್ಮರು. ಇವರ ಶಿಷ್ಯರಾದ ಪಂ.ಡಾ.ಪುಟ್ಟರಾಜ ಕವಿ ಗವಾಯಿಗಳವರೂ ಸಹ ಅಭೂತಪೂರ್ವ ಸಂಗೀತ ತಜ್ಞರಾಗಿದ್ದರು ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಶ್ರೀಗುರು ಪಂಚಾಕ್ಷರಿ ಸೇವಾ ಸಮಿತಿ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ 333ನೇ ಶಿವಾನುಭವ, ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಸಮ್ಮೇಳನ, ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ನೇತೃತ್ವ ವಹಿಸಿದ್ದ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಮಾತನಾಡಿ, ಗದಗ ಪರಿಸರದಲ್ಲಿ ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಸಮ್ಮೇಳನ ನಡೆಸಿದ್ದು ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳನ್ನು ಅಜರಾಮರಗೊಳಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ ಎಂದರು. ಸಮ್ಮುಖವನ್ನು ಅಡವೀಂದ್ರ ಮಠದ ಧರ್ಮದರ್ಶಿ ಮಹೇಶ್ವರಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಪಂ.ಡಾ.ರಾಜಗುರು ಗುರುಸ್ವಾಮಿ ಕಲಿಕೇರಿ ವಹಿಸಿದ್ದರು. ಸಂಗೀತ ಪ್ರಾಧ್ಯಾಪಕ ಡಾ. ಸಿದ್ಧರಾಮಯ್ಯ ಮಠಪತಿ ಮಾತನಾಡಿದರು. ಖ್ಯಾತ ಗಾಯಕ ಪದ್ಮಶ್ರೀ ಎಂ.ವೆಂಕಟೇಶಕುಮಾರ ಅವರಿಗೆ ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ಅವರಿಂದ ಜರುಗಿದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು. ಅತಿಥಿಗಳಾಗಿ ಬಸವರಾಜ ಪಲ್ಲೇದ, ಲೀಲಾವತಿ ಬಿಳೇಯಲಿ, ನಾಗರಾಜ ಹೊಸೂರ ಆಗಮಿಸಿದ್ದರು. ಸಮಾರಂಭದಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ರಾಜ್ಯ ಪ್ರಶಸ್ತಿ ವಿಜೇತ ಡಾ.ವ್ಹಿ.ಬಿ. ಹಿರೇಮಠ ಹಾಗೂ ಪ್ರಾಚಾರ್ಯ ವ್ಹಿ.ಎಂ. ಗುರುಮಠ ಅವರನ್ನು ಸನ್ಮಾನಿಸಲಾಯಿತು. ಡಾ.ಸಿದ್ಧರಾಮಯ್ಯ ಮಠಪತಿ, ಡಾ.ನಾರಾಯಣ ಹಿರೇಕೊಳಚಿ, ಡಾ. ಗುರುಬಸವ ಮಹಾಮನಿ, ಡಾ.ಹನುಮಂತ ಕೊಡಗಾನೂರ, ಡಾ.ಶಿವಬಸಯ್ಯ ಗಡ್ಡದಮಠ, ಪ್ರೊ. ಎಂ.ಎಸ್. ಮಠದ, ಸುಕ್ರುಸಾಬ ಮುಲ್ಲಾ, ರೇಶ್ಮಾ ಭಟ್, ಶರಣಕುಮಾರ ಗುತ್ತರಗಿ, ಬಸವರಾಜ ಹಿರೇಮಠ, ಕೃತಿಕಾ ಜಂಗಿನಮಠ, ಭೀಮಾಶಂಕರ ಬಿದನೂರ ಅವರಿಂದ ಜರುಗಿದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು. ಸಿದ್ಧಲಿಂಗಯ್ಯಶಾಸ್ತ್ರಿ ಗಡ್ಡದಮಠ ಸ್ವಾಗತಿಸಿದರು. ಯು.ಆರ್. ಭೂಸನೂರಮಠ ಪರಿಚಯಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಮಲ್ಲಯ್ಯ ಶಿರೋಳಮಠ ವಂದಿಸಿದರು.