ಸಾರಾಂಶ
ಗುಳೇದಗುಡ್ಡ ಪಟ್ಟಣದ ಶ್ರೀ ಮರಡಿಮಠದ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೂತನ ರಥೋತ್ಸವ ಭಾನುವಾರ ಅತ್ಯಂತ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಶ್ರೀ ಮರಡಿಮಠದ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೂತನ ರಥೋತ್ಸವ ಭಾನುವಾರ ಅತ್ಯಂತ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.ಮರಡಿಮಠದ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮ, ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ನಡೆದವು.
ಬೆಳಗಿನ ಜಾವ 5ಗಂಟೆಗೆ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳಿಗೆ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಮಂಗಲ ಸ್ನಾನ, ನಂತರ ಪೀಠಾರೋಹಣ ನಡೆಯಿತು. ಬೆಳಗ್ಗೆ 11 ಗಂಟೆಗೆ ಅಪಾರ ಭಕ್ತ ಸಮೂಹದ ನಡುವೆ ಶ್ರೀಗಳ ಪಲ್ಲಕ್ಕಿ ಉತ್ಸವ ನಡೆಯಿತು. ಅಯ್ಯಾಚಾರ, ಶಿವದೀಕ್ಷೆ ಕಾರ್ಯಕ್ರಮ ನೆರವೇರಿತು.ಸಂಜೆ 5 ಗಂಟೆಗೆ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ನೂತನ ರಥೋತ್ಸವ ಜರುಗಿತು. ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ವಿಜಯಪುರದ ಚರಮೂರ್ತಿ ದೇವರು, ಬುದಿಗುಪ್ಪ ಸಿದ್ದೇಶ್ವರ ಮಹಾಸ್ವಾಮಿಗಳು, ಕೋಳುರ ಮೃತ್ಯುಂಜಯ ದೇವರು, ಅಮರೇಶ್ವರ ದೇವರು, ನಿರುಪಾದಿ ದೇವರು, ಗಣೇಶ ಶಾಸ್ತ್ರೀಗಳು ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಹನುಮಂತ ಮಾವಿನಮರದ, ಹಾಲಯ್ಯ ಹಿರೇಮಠ, ಸಂಗಪ್ಪ ಜವಳಿ, ಪ್ರಕಾಶ ಮುರಗೋಡ, ಮುತ್ತಣ್ಣ ಕಾಳನ್ನವರಗೌಡರ, ಮುತ್ತಣ್ಣ ದೇವರಮನಿ, ಪ್ರಶಾಂತ ಜವಳಿ, ಭುವನೇಶ ಪೂಜಾರ, ಬಸವರಾಜ ಸಿಂದಗಿಮಠ, ವೀರಯ್ಯ ಹಿರೇಮಠ, ಪ್ರಭುಸ್ವಾಮಿ ಹಿರೇಮಠ, ಶಿವಾನಂದ ಮಳ್ಳಿಮಠ, ಮಲ್ಲಿಕಾರ್ಜುನ ಶಿಲವಂತ, ಮಲ್ಲಿಕಾರ್ಜುನ ಮುದೇನೂರ, ಸಚಿನ ತೊಗರಿ, ಶಿವು ಜವಳಿ, ಪ್ರಭು ಕುಂಬಾರ, ಮಹೇಶ ಸೂಳಿಭಾವಿ ಹಾಗೂ ಪಟ್ಟಣ ಸೇರಿದಂತೆ ಬೇರೆ ಬೇರೆ ಊರುಗಳ ಶಾಖಾಮಠದ ಭಕ್ತರು ಪಾಲ್ಗೊಂಡಿದ್ದರು.