ಐದು ತಿಂಗಳಲ್ಲೇ ಈಶ್ವರನಗರದಲ್ಲಿ ಕಟ್ಟಿಸಿದ್ದ ಹೊಸ ಮನೆ ಖಾಲಿ!

| Published : Apr 22 2024, 02:05 AM IST

ಸಾರಾಂಶ

ಐದು ತಿಂಗಳ ಹಿಂದೆಯಷ್ಟೇ ಗೃಹಪ್ರವೇಶ ಮಾಡಿದ್ದರು. ನಮ್ಮನ್ನೆಲ್ಲ ಕರೆದಿದ್ದರು. ಆದರೆ, ಈಗ ನೋಡಿದರೆ ಇಡೀ ಮನೆ ಖಾಲಿ ಖಾಲಿ ಎನಿಸುತ್ತಿದೆ ಎಂದು ಪಕ್ಕದ ಮನೆಯ ರಫೀಕ್ ಹೇಳುತ್ತಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಐದು ತಿಂಗಳ ಹಿಂದೆಯಷ್ಟೇ ಕಟ್ಟಿಸಿದ್ದ ಮನೀಗ ಖಾಲಿ ಖಾಲಿ...!

ಇದು ದಾಂಡೇಲಿ ಕಾಳಿ‌ನದಿ ಹಿನ್ನೀರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹುಬ್ಬಳ್ಳಿ ಈಶ್ವರನಗರದ ನಿವಾಸಿ ನಜೀರ್ ಅಹ್ಮದ ಹೊಂಬಾಳ ಅವರ ಮನೆ ಪರಿಸ್ಥಿತಿ.

ನಜೀರ ಅಹ್ಮದ ಹಾಗೂ ಸಲ್ಮಾ ದಂಪತಿಗೆ ಇಬ್ಬರು ಮಕ್ಕಳು. ಅದರಲ್ಲಿ ಒಂದು ಮಗು ಅಂಗವಿಕಲವಿದೆ.

ಹಾಗೆ‌ ನೋಡಿದರೆ ನಜೀರ್ ಅಹ್ಮದ ಅಣ್ಣಿಗೇರಿ‌ ಮೂಲದವರು. ಬದುಕು ಕಟ್ಟಿಕೊಳ್ಳಬೇಕೆಂಬ

ಆಸೆಯಿಂದ ಕಳೆದ ಹತ್ತು ವರ್ಷದ ಹಿಂದೆ‌ ಹುಬ್ಬಳ್ಳಿಗೆ ಬಂದು‌ ನೆಲೆಸಿದವರು. ಇಲ್ಲಿನ

ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಲಸೋಲ‌ ಮಾಡಿ ಈಶ್ವರನಗರದಲ್ಲಿ ಮನೆ ಕಟ್ಟಿಸಿಕೊಂಡಿದ್ದರು. ಕಳೆದ ಐದು ತಿಂಗಳ ಹಿಂದೆಯಷ್ಟೇ ಅತಿ

ಸಂಭ್ರಮದಿಂದ ಗೃಹಪ್ರವೇಶ ಮಾಡಿ‌ ವಾಸಿಸುತ್ರಿದ್ದರು.

ಪತ್ನಿ ಸಲ್ಮಾ ಸಹೋದರಿ ರೇಷ್ಮಾ ಹಾಗೂ ಯೂನಿಸ್ ತೌಸೀಪ್ ತಮ್ಮಿಬ್ಬರು ಮಕ್ಕಳೊಂದಿಗೆ

ಬೆಂಗಳೂರಲ್ಲಿ‌ ನೆಲೆಸಿದವರು. ಹಾಗೆ‌ ನೋಡಿದರೆ ಈ ದಂಪತಿಯ ಮೂಲವೂ ಅಣ್ಣಿಗೇರಿಯೇ. ಆದರೆ

ಯುನೀಸ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ‌ ಮಾಡುತ್ತಾರಂತೆ. ಈ‌ ಕುಟುಂಬ

ಬೆಂಗಳೂರಲ್ಲೇ ನೆಲೆಸಿದೆ.‌

ರಜೆ ಕಳೆಯಲೆಂದು ರೇಷ್ಮಾ ಹಾಗೂ ತ಼ೌಷೀಫ್ ತಮ್ಮಿಬ್ಬರು ಮಕ್ಕಳೊಂದಿಗೆ ಹುಬ್ನಳ್ಳಿಯ‌ ನಜೀರ್

ಮನೆಗೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಆಗಮಿಸಿದ್ದರು. ಪತ್ನಿಯ ಸಹೋದರಿ ಹಾಗೂ ಆಕೆಯ‌

ಕುಟುಂಬ ಬಂದಿದೆ ಎಂದುಕೊಂಡು ಪ್ರವಾಸಕ್ಕೆ ನಜೀರ್ ಅಹ್ಮದ ದಾಂಡೇಲಿಗೆ ಕರೆದುಕೊಂಡು

ಹೋಗಿದ್ದಾರೆ.

ಮಕ್ಕಳು ಕಾಳಿ‌ನದಿ ಹಿನ್ನೀರಿನಲ್ಲಿ ಆಟ ವಾಡುತ್ತಿದ್ದಾಗ ಅಚಾನಕ್ಕಾಗಿ ಬಾಲಕಿ‌ ನದಿಯಲ್ಲಿ

ಬಿದ್ದು ಮುಳುಗುತ್ತಿದ್ದಾಳೆ. ಇದನ್ನು‌ ನೋಡಿದ ಮತ್ತಿಬ್ಬರು ಮಕ್ಕಳು‌, ಅವರನ್ನು ನೋಡಿ

ಮತ್ತೊಬ್ಬರು ಹೀಗೆ ಎಂಟು ಜನರಲ್ಲಿ ಆರು ಜನ ಮುಳುಗಿ ಮೃತಪಟ್ಟಿದ್ದಾರೆ.

ಈಗ ನಜೀರನ ಪತ್ನಿ ಸಲ್ಮಾ ಹಾಗೂ ಸಹೋದರಿ ರೇಷ್ಮಾಳ ಪತಿ ಯುನೀಸ್ ತೌಷೀಫ್ ಮಾತ್ರ

ಬದುಕಿಳಿದಿದ್ಸಾರೆ. ಸಲ್ಮಾಳ ಪತಿ ಹಾಗೂ ಇಬ್ಬರು ಮಕ್ಕಳು ಮತ್ತು ಸಹೋದರಿ ರೇಷ್ಮಾ ಹಾಗೂ

ಅವಳ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಸ್ಮಶಾನ ಮೌನ

ಈ ನಡುವೆ ಈಶ್ವರ ನಗರದ ನಜೀರ್ ಮನೆಯ ಸುತ್ತಮುತ್ತ ಸ್ಮಶಾನಮೌನ ಆವರಿಸಿದೆ. ಈ ಸುದ್ದಿ

ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಆಗಮಿಸಿ ಘಟನೆಯ ಬಗ್ಗೆ ಮಮ್ಮಲ ಮರಗುತ್ತಿದ್ದಾರೆ.

ಮನೆಗೆ ಬೀಗ ಹಾಕಿದೆ. ಐದು ತಿಂಗಳ ಹಿಂದೆಯಷ್ಟೇ ಗೃಹಪ್ರವೇಶ ಮಾಡಿದ್ದರು. ನಮ್ಮನ್ನೆಲ್ಲ

ಕರೆದಿದ್ದರು. ಆದರೆ, ಈಗ ನೋಡಿದರೆ ಇಡೀ ಮನೆ ಖಾಲಿ ಖಾಲಿ ಎನಿಸುತ್ತಿದೆ ಎಂದು ಪಕ್ಕದ

ಮನೆಯ ರಫೀಕ್ ಹೇಳುತ್ತಾರೆ.

ಇಂದು ಅಣ್ಣಿಗೇರಿಯಲ್ಲಿ ಅಂತ್ಯಸಂಸ್ಕಾರ:

ಮೃತಪಟ್ಟಿರುವ ಆರು ಜನರ ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಸೋಮವಾರ ಮೃತದೇಹಗಳು ಅಣ್ಣಿಗೇರಿಗೆ ಆಗಮಿಸಲಿದ್ದು, ಅಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.