ಸಾರಾಂಶ
ಕೆಲವರು ಈ ಕಾನೂನನ್ನು ಹೊಸ ಬಾಟಲಿಗೆ, ಹಳೇ ಮಧ್ಯೆ ಎನ್ನುತ್ತಾರೆ. ಆದರೆ ಇದು ಹಾಗಲ್ಲ ಹೊಸ ವಿಷಯದ ಬಾಟಲಿಗೆ ಹಳೆಯ ಮಧ್ಯೆ ಸೇರಿಸಿದಂತೆ ಇದೆ. ಒಂದೇ ಅಪರಾಧಕ್ಕೆ 18 ಬಾರಿ ಜೀವಾವಧಿ ಶಿಕ್ಷೆ ನೀಡಬಹುದಾದ ಅಧಿಕಾರವನ್ನು ಕೋರ್ಟ್ ಮತ್ತು ಮತ್ತು ಪೋಲೀಸರಿಗೆ ನೀಡಿರುವ ಹೊಸ ಕಾನೂನು ಅಪಾಯಕಾರಿ. ಇದರಲ್ಲಿ ಶೇ. 92ರಷ್ಟು ಬ್ರಿಟೀಷರ ಕಾನೂನೇ ಆಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ನೂತನ ಕ್ರಿಮಿನಲ್ ಕಾನೂನುಗಳು- 2023 ಮೈಸೂರು ಸಿಲ್ಕ್ ಸೀರೆಯ್ನು ಹಂದಿಗೆ ಉಡಿಸಿ, ಲಿಫ್ ಸ್ಟಿಕ್ಹಾಕಿ ವಿಶ್ವ ಸುಂದರಿ ಎಂದ ಹಾಗೆ ಇದೆ ಎಂದು ವಕೀಲ ಬಾಲನ್ ಕಳವಳ ವ್ಯಕ್ತಪಡಿಸಿದರು.ನಗರದ ರಾಣಿಬಹದ್ದೂರ್ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ನೂತನ ಭಾರತೀಯ ಕ್ರಿಮಿನಲ್ ಕಾನೂನು ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಲವರು ಈ ಕಾನೂನನ್ನು ಹೊಸ ಬಾಟಲಿಗೆ, ಹಳೇ ಮಧ್ಯೆ ಎನ್ನುತ್ತಾರೆ. ಆದರೆ ಇದು ಹಾಗಲ್ಲ ಹೊಸ ವಿಷಯದ ಬಾಟಲಿಗೆ ಹಳೆಯ ಮಧ್ಯೆ ಸೇರಿಸಿದಂತೆ ಇದೆ. ಒಂದೇ ಅಪರಾಧಕ್ಕೆ 18 ಬಾರಿ ಜೀವಾವಧಿ ಶಿಕ್ಷೆ ನೀಡಬಹುದಾದ ಅಧಿಕಾರವನ್ನು ಕೋರ್ಟ್ ಮತ್ತು ಮತ್ತು ಪೋಲೀಸರಿಗೆ ನೀಡಿರುವ ಹೊಸ ಕಾನೂನು ಅಪಾಯಕಾರಿ. ಇದರಲ್ಲಿ ಶೇ. 92ರಷ್ಟು ಬ್ರಿಟೀಷರ ಕಾನೂನೇ ಆಗಿದೆ. ಶೇ. 7ರಷ್ಟು ಬೆನಿಟೋ, ಮುಸಲೋನಿ ಮತ್ತು ಹಿಟ್ಲರ್ ನ ಕಾನೂನು ಸೇರಿಸಿ ಹೊಸ ಕಾನೂನು ಎಂದು ಹೇಳುತ್ತಿರುವುದಾಗಿ ಅವರು ತಿಳಿಸಿದರು.ಹೈದರಾಬಾದಿನಲ್ಲಿ ನಡೆದ ಬಾಂಬ್ ಸ್ಪೋಟ್ ಸಂಬಂಧ ಆರೋಪಿಗಳು ಮುಸಲ್ಮಾನರು ಎಂದರು.
ಸಂತ್ರಸ್ತರು ರಾಜ್ಯ ಎಂದರು, ಸತ್ತವರು, ಗಾಯಗೊಂಡವರು ಮುಸಲ್ಮಾನರು. 250 ಆರೋಪಿಗಳನ್ನು ಬಂಧಿಸಿದರು. ಅವರೂ ಎಲ್ಲಾ ರೀತಿಯ ಹಿಂಸೆ ಕೊಟ್ಟರು. ಇದನ್ನು ತನಿಖೆ ಮಾಡಿದ ಎಲ್ಲಾ ಅಧಿಕಾರಿಗಳಿಗೆ ಬಡ್ತಿ ನೀಡಲಾಯಿತು. ಆ ಮೇಲೆ ಗೊತ್ತಾಗಿದ್ದು, ಇದನ್ನು ಮಾಡಿದ್ದು ಹಸೀಮಾನಂದ, ಪ್ರಜ್ಞಾ ಠಾಕೂರ್ಎಂದು ವ್ಯಂಗ್ಯವಾಡಿದರು.ಸ್ಮಶಾನಕ್ಕೆ ಹೋದ ಹೆಣ ಹೇಗೆ ಬರೋದಿಲ್ಲವೋ ಹಾಗಯೇ ಈ ಕಾಯ್ದೆಯಡಿ ಜೈಲಿಗೆ ಹೋದ ವ್ಯಕ್ತಿ ವಾಪಾಸ್ ಬರುವುದಿಲ್ಲ . ಗುಂಡಾರಾಜ್ಯ ಅಥವಾ ಪೋಲೀಸ್ ರಾಜ್ಯವಾಗಿ ತಯಾರಾಗುತ್ತದೆ. ಸಿಆರ್ಪಿಸಿ 167 ಉಪ ಕಲಂ 1 ಮತ್ತು 2 ರಲ್ಲಿ ಆರೋಪಿಯನ್ನು ಮೊದಲ ಹದಿನೈದು ದಿನ ನ್ಯಾಯಾಂಗ ಬಂಧನವಾಗಿತ್ತು. ಹೊಸ ಕಾನೂನಿನಲ್ಲಿ 90 ದಿನಗಳ ಪೋಲೀಸ್ ಠಾಣೆಯಲ್ಲಿ ಇಡಬಹುದಾಗಿದೆ . ಇದು ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ಕಾನೂನು..? ಇದು ಮನುಷ್ಯ ವಿರೋಧಿ ಎಂದರು.
ಬಾಂಬು , ಬಂದೂಕು ಇಟ್ಟುಕೊಂಡವನು ಹೆಸರು ವರ್ಮ, ಶರ್ಮ ಎಂದಿದ್ದರೆ ಅವರಿಗೆ ಬೇಲ್ ಸಿಗುತ್ತದೆ. ಆದರೆ ರಫೀಕ್ , ಅಬ್ದುಲ್ಲಾ ಅನ್ನುವ ಹೆಸರಿದ್ದರೇ ಆತ ಕಲ್ಲು ಎಸೆದರೂ ಆತನಿಗೆ ಜೈಲು. ಹೊಸ ಕಾನೂನು ಹೊಸದಲ್ಲ ಅಪಾಯಕಾರಿ. ಈ ಕಾನೂನಿನ ಬಗ್ಗೆ ಯಾಕೆ ವಕೀಲರು ಪ್ರಶ್ನೆ ಕೇಳುತ್ತಿಲ್ಲ ಎಂದರೆ, ವಕೀಲರು ಹಣಕ್ಕಾಗಿ ಅಷ್ಟೇ ದುಡಿಯುತ್ತಿದ್ದಾರೆ. ಅವರಿಗೆ ಕೇಸ್ ಬಂದರೆ ಸಾಕು, ಹಣ ಬಂದಂತೆ ಈ ಹಿಟ್ಲರ್ ಕಾನೂನಿನ ವಿರುದ್ಧ ತಮಿಳುನಾಡು ಮಾತ್ರ ಹೋರಾಟ ಮಾಡಿದೆ. ಕ್ರಿಯಾಶೀಲ ವಕೀಲಿಕೆ ಭಾರತದಲ್ಲಿಲ್ಲ ಎಂದರು.ಕಾರ್ಯಕ್ರಮದಲ್ಲಿ ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ ಮೊದಲಾದವರು ಇದ್ದರು.