ಸಾರಾಂಶ
ಆಟೋ ಚಾಲಕರು ಮತ್ತು ಮಾಲೀಕರ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಎಚ್. ಆರ್. ಉಮೇಶ್ ಆಯ್ಕೆಯಾದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದು ಅಧ್ಯಕ್ಷರಾಗಿ ಎಚ್.ಆರ್. ಉಮೇಶ್ , ಉಪಾಧ್ಯಕ್ಷರಾಗಿ ಎಂ.ವೈ. ಜೀವನ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಶಫಿ, ಸಹ ಕಾರ್ಯದರ್ಶಿಯಾಗಿ ಜೀವನ್ ಹಾಗೂ ಖಜಾಂಚಿಯಾಗಿ ಶಶಿಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾದರು.ಕೊಡವ ಸಮಾಜದ ಸಭಾಂಗಣದಲ್ಲಿ ಭಾನುವಾರ ಸಂಘದ ಅಧ್ಯಕ್ಷ ಎಚ್.ಕೆ. ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ನಂತರ ಸಭೆಯಲ್ಲಿ ಅಧ್ಯಕ್ಷ ಮಾತನಾಡಿ, ಮುಂದಿನ ದಿನಗಳಲ್ಲಿ ಸದಸ್ಯರೆಲ್ಲರಿಗೂ ವಿಮಾ ಯೋಜನೆ ಮಾಡುವ ಯೋಜನೆಯಿದ್ದು, ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಹೇಳಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಟಿ.ಎಂ. ಅಬ್ದುಲ್ ಕರೀಂ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಉಪ ಕಾರ್ಯದರ್ಶಿ ಪಿ.ಎನ್. ರಮೇಶ್, ಖಜಾಂಚಿ ಸುದೀಪ್ ಆಲ್ಬರ್ಟ್ ಸೇರಿದಂತೆ ಗೌರವಾಧ್ಯಕ್ಷರು, ಗೌರವ ಸಲಹೆಗಾರರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.