ಭರವಸೆ ಸಿಗುವವರೆಗೂ ಅಸಹಕಾರ ಚಳವಳಿ ಮುಂದುವರಿಕೆ- ಡಂಬಳ

| Published : Jul 09 2025, 12:27 AM IST

ಭರವಸೆ ಸಿಗುವವರೆಗೂ ಅಸಹಕಾರ ಚಳವಳಿ ಮುಂದುವರಿಕೆ- ಡಂಬಳ
Share this Article
  • FB
  • TW
  • Linkdin
  • Email

ಸಾರಾಂಶ

ತಾಪಂ ಕಚೇರಿಯಲ್ಲಿ 13 ಜನ ನರೇಗಾ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ನಮಗೆ ಕಳೆದ 6 ತಿಂಗಳಿಂದ ವೇತನ ಬರದೆ ತೀವ್ರ ತೊಂದರೆಗೆ ಸಿಲುಕಿದ್ದೇವೆ. ನಮಗೆ ವೇತನ ಪಾವತಿ ಮಾಡುವ ಭರವಸೆ ಸಿಗುವರೆಗೂ ಅಸಹಕಾರ ಚಳವಳಿ ಮುಂದುವರೆಸುತ್ತೇವೆ ಎಂದು ತಾಲೂಕು ನರೇಗಾ ನೌಕರರ ಸಂಘದ ಸದಸ್ಯ ಹನಮಂತ ಡಂಬಳ ಹೇಳಿದರು.

ನರಗುಂದ: ತಾಪಂ ಕಚೇರಿಯಲ್ಲಿ 13 ಜನ ನರೇಗಾ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ನಮಗೆ ಕಳೆದ 6 ತಿಂಗಳಿಂದ ವೇತನ ಬರದೆ ತೀವ್ರ ತೊಂದರೆಗೆ ಸಿಲುಕಿದ್ದೇವೆ. ನಮಗೆ ವೇತನ ಪಾವತಿ ಮಾಡುವ ಭರವಸೆ ಸಿಗುವರೆಗೂ ಅಸಹಕಾರ ಚಳವಳಿ ಮುಂದುವರೆಸುತ್ತೇವೆ ಎಂದು ತಾಲೂಕು ನರೇಗಾ ನೌಕರರ ಸಂಘದ ಸದಸ್ಯ ಹನಮಂತ ಡಂಬಳ ಹೇಳಿದರು.

ಅವರು ಮಂಗಳವಾರ ತಾಪಂ ಕಚೇರಿ ಮುಂದೆ ಎರಡನೇ ದಿನದ ಚಳವಳಿಯಲ್ಲಿ ಮಾತನಾಡಿದರು. ವೇತನ ಪಾವತಿ, ಸೇವಾ ಭದ್ರತೆ, ಆರೋಗ್ಯ ವಿಮೆ, ಕೆಲಸದ ಸ್ಥಳದಲ್ಲಿ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟಕೊಂಡು ಹೋರಾಟ ಮಾಡುತ್ತಿದ್ದೇವೆ. ವೇತನ ವಿಚಾರವಾಗಿ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಸಿಗದ ಕಾರಣ ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಅಸಹಕಾರ ಚಳವಳಿ ಮಾಡುತ್ತಿದ್ದೇವೆ ಎಂದು ಆರೋಪಿಸಿದರು.ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಬಿಎಫ್ಟಿ ಸೇರಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನರೇಗಾ ಯೋಜನೆಯ ಸಿಬ್ಬಂದಿಗಳಿಗೆ ವೇತನವಾಗಿಲ್ಲ. ಈ ಹಿಂದೆ ಸರ್ಕಾರದ ಗಮನಕ್ಕೆ ತರಲು ಜಿಲ್ಲಾ ಮಟ್ಟದಲ್ಲಿ ಒಂದು ದಿನ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಗಮನ ಸೆಳೆದಿದ್ದೇವೆ. ಆದರೂ ಸರ್ಕಾರ ನರೇಗಾ ನೌಕರರಿಗೆ ವೇತನ ಪಾವತಿ ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದರು.

ಸರ್ಕಾರ ಕೂಡಲೇ ವೇತನ ಪಾವತಿ, ಸೇವಾ ಭದ್ರತೆ, ಕೆಲಸದ ಸ್ಥಳದಲ್ಲಿ ಭದ್ರತೆ ಸೇರಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವರೆಗೂ ಈ ಅಸಹಕಾರ ಚಳವಳಿ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.

6 ತಿಂಗಳ ವೇತನ ಬಾಕಿ ನೀಡಬೇಕು, ಆರೋಗ್ಯ ವಿಮೆ ಜಾರಿಯಾಗಬೇಕು, ಸೇವಾ ಭದ್ರತೆ ಒದಗಿಸಬೇಕು, ಪ್ರತಿ ತಿಂಗಳ ವೇತನ ನೀಡಬೇಕು, ಕೆಲಸದ ಸ್ಥಳದಲ್ಲಿ ಭದ್ರತೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ನರೇಗಾ ನೌಕರರಾದ ಮಹೇಶ ಚಿತವಾಡಗಿ, ಮಂಜುನಾಥ ಹಳ್ಳದ, ಲಿಂಗರಾಜ ಮುದಿಗೌಡ್ರ, ಈರಯ್ಯ ಶಹಪೂರಮಠ, ಬಸವರಾಜ ಚಿಮ್ಮನಕಟ್ಟಿ, ಮಂಜುನಾಥ ನಾಡಗೌಡ್ರ, ಪೂರ್ಣಾನಂದ ಸುಂಕದ, ರವಿ ಭರಮಪ್ಪನವರ, ಸೇರಿದಂತೆ ಮುಂತಾದವರು ಇದ್ದರು.