ಸಿದ್ದಸಿರಿಗೆ ನೋಟಿಸ್‌ ರಾಜಕೀಯ ಪ್ರೇರಿತ

| Published : Jan 30 2024, 02:05 AM IST

ಸಾರಾಂಶ

ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖರೀದಿಸಿ ಎರಡು ವರ್ಷಗಳಿಂದ ಪ್ರಾರಂಭಿಸಿ ಬಡವರ ಬದುಕಿಗೆ ಆಸರೆ ಆಗುತ್ತಿದ್ದ ಸಿದ್ದಸಿರಿ ಇಥೆನಾಲ್ ಪವರ ಘಟಕಕ್ಕೆ ರಾಜ್ಯ ಮಾಲಿನ್ಯ ಮತ್ತು ಪರಿಸರ ನಿಯಂತ್ರಣ ಮಂಡಳಿಯು ರಾಜಕೀಯ ಪ್ರೇರಿತವಾಗಿ ನೋಟಿಸ್‌ ಜಾರಿಯ ಹಿಂದೆ ರಾಜಕೀಯ ದುರುದ್ದೇಶವಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಟ್ಟಣದ ಹೊರವಲಯದಲ್ಲಿ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖರೀದಿಸಿ ಎರಡು ವರ್ಷಗಳಿಂದ ಪ್ರಾರಂಭಿಸಿ ರೈತರಿಗೆ, ಯುವಕರಿಗೆ ಉದ್ಯೋಗ ನೀಡಿ ಆರ್ಥಿಕ ಅಭಿವೃದ್ಧಿ ಆಗುತ್ತಿರುವ ಬಡವರ ಬದುಕಿಗೆ ಆಸರೆ ಆಗುತ್ತಿದ್ದ ಸಿದ್ದಸಿರಿ ಇಥೆನಾಲ್ ಪವರ ಘಟಕಕ್ಕೆ ರಾಜ್ಯ ಮಾಲಿನ್ಯ ಮತ್ತು ಪರಿಸರ ನಿಯಂತ್ರಣ ಮಂಡಳಿಯು ರಾಜಕೀಯ ಪ್ರೇರಿತವಾಗಿ ನೋಟಿಸ್‌ ಜಾರಿ ಮಾಡಿರುವುದು ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಹಿರಿಯ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ನಿರುದ್ಯೋಗ ಬಡತನ, ಶೈಕ್ಷಣಿಕ ಮತ್ತುಆರ್ಥಿಕವಾಗಿ ತೀರಾ ಹಿಂದುಳಿದ ಪ್ರದೇಶದಲ್ಲಿ ಸಿದ್ದಸಿರಿ ಇಥೆನಾಲ್ ಪವರ ಘಟಕ ಪ್ರಾರಂಭಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರೈತರ ಬದುಕಿಗೆ ಬೆಳಕಾಗಿದ್ದಾರೆ. ಕಂಪನಿಯೂ ರೈತರು ಬೆಳೆದ ಕಬ್ಬಿನ ದರವನ್ನು ಬಿಲ್‌ ತಕ್ಷಣ ಕೊಡುತ್ತಿದ್ದಾರೆ. ಕಂಪನಿಯ ಮೇಲೆ ಅವಲಂಬಿತರಾಗಿ ರೈತರು ಹೆಚ್ಚುಕಬ್ಬು ಬೆಳೆದಿದ್ದಾರೆ. ಏಕಾಏಕಿ ರಾಜಕೀಯ ದುರದ್ದೇಶದಿಂದ ನೋಟಿಸು ಜಾರಿ ಮಾಡಿರುವುದು ರೈತರಿಗೆ ಸಂಕಷ್ಟಕ್ಕೆ ತಳ್ಳುವಂತಾಗಿದೆ. ಇಗಾಗಲೇ ಕಬ್ಬು ಕಟಾವು ಮಾಡಿ ಲಾರಿ, ಟ್ರ್ಯಾಕ್ಟರ್‌ ತುಂಬಿದ್ದಾರೆ. ಆದರೆ ಬಾಗಿಲು ಬಂದ್ ಮಾಡಿರುವುದರಿಂದ ಕಬ್ಬು ಒಣಗಿ ಹೋಗುವಂತಾಗಿದೆ. ಕೂಡಲೇ ಸರಕಾರ ಕಂಪನಿ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ. ಕೆ.ಎಮ.ಬಾರಿ ಉಪಸ್ಥಿತರಿದ್ದರು.