ತಾವು ಅಧಿಕಾರ ಸ್ವೀಕರಿಸಿದ ನಂತರ ಈಗಾಗಲೇ ೨೦ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು, ೨೧ ಜಿಲ್ಲೆಯಾಗಿ ಹಾಸನಕ್ಕೆ ಬಂದಿರುವುದಾಗಿ ತಿಳಿಸಿದ ಅವರು ಬಂದಂತಹ ಅರ್ಜಿಗಳನ್ನು ಸವಿಸ್ತಾರವಾಗಿ ಅವಲೋಕಿಸಿದಾಗ ೪೮೯೬ ಅರ್ಜಿಗಳಲ್ಲಿ ೧೮೫೦ ಅರ್ಜಿಗಳು ಜಮೀನಿನ ಸಮಸ್ಯೆಗೆ ಸೇರಿವೆ ಎಂದು ತಿಳಿಸಿದರು. ಪಿ.ಟಿ.ಸಿ.ಎಲ್ ಪ್ರಕರಣಗಳನ್ನು ಇತ್ಯರ್ಥ ಮಾಡುವುದು ಉಪವಿಭಾಗಾಧಿಕಾರಿ ಅವರು ಜವಾಬ್ದಾರಿ ಆಗಿರುತ್ತಾರೆ. ಅಲ್ಲಿ ತೀರ್ಮಾನ ಆಗದಿದ್ದರೆ ಜಿಲ್ಲಾಧಿಕಾರಿ ಅವರಿಗೆ ಹೋಗುತ್ತದೆ. ಇಂತಹ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕಂದಾಯ ಸಚಿವರು ಹಾಗೂ ಇಲಾಖೆಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದಲ್ಲಿ ೪೮೯೬ ದೂರು ಅರ್ಜಿಗಳು ಆಯೋಗಕ್ಕೆ ಬಂದಿದ್ದು, ೧೪೮೨ ಪ್ರಕರಣಗಳು ನ್ಯಾಯಾಲಯದ ಮೂಲಕ ವಿಚಾರಣೆ ನಡೆಯುತ್ತಿವೆ. ಅದೇ ರೀತಿ ದೂರುಗಳ ಸಲ್ಲಿಕೆ ಸಂಖ್ಯೆಯೂ ಕೂಡ ಹೆಚ್ಚುತ್ತಿವೆ. ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ 82 ಅರ್ಜಿಗಳು ಆಯೋಗದಲ್ಲಿವೆ. ಅವುಗಳಿಗೆ ಪರಿಹಾರ ಕಲ್ಪಿಸಲು ವಿವಿಧ ಇಲಾಖೆಗಳ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಮೂರ್ತಿ ಎಲ್ ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಕುಂದು ಕೊರತೆಗಳ ಅಹವಾಲು ಸ್ವೀಕರಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಅಧಿಕಾರ ಸ್ವೀಕರಿಸಿದ ನಂತರ ಈಗಾಗಲೇ ೨೦ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು, ೨೧ ಜಿಲ್ಲೆಯಾಗಿ ಹಾಸನಕ್ಕೆ ಬಂದಿರುವುದಾಗಿ ತಿಳಿಸಿದ ಅವರು ಬಂದಂತಹ ಅರ್ಜಿಗಳನ್ನು ಸವಿಸ್ತಾರವಾಗಿ ಅವಲೋಕಿಸಿದಾಗ ೪೮೯೬ ಅರ್ಜಿಗಳಲ್ಲಿ ೧೮೫೦ ಅರ್ಜಿಗಳು ಜಮೀನಿನ ಸಮಸ್ಯೆಗೆ ಸೇರಿವೆ ಎಂದು ತಿಳಿಸಿದರು. ಪಿ.ಟಿ.ಸಿ.ಎಲ್ ಪ್ರಕರಣಗಳನ್ನು ಇತ್ಯರ್ಥ ಮಾಡುವುದು ಉಪವಿಭಾಗಾಧಿಕಾರಿ ಅವರು ಜವಾಬ್ದಾರಿ ಆಗಿರುತ್ತಾರೆ. ಅಲ್ಲಿ ತೀರ್ಮಾನ ಆಗದಿದ್ದರೆ ಜಿಲ್ಲಾಧಿಕಾರಿ ಅವರಿಗೆ ಹೋಗುತ್ತದೆ. ಇಂತಹ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕಂದಾಯ ಸಚಿವರು ಹಾಗೂ ಇಲಾಖೆಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಇಂದಿನ ಸಭೆಯಲ್ಲಿ ೨೮೦ ಜನರು ಭಾಗವಹಿಸಿ ದ್ದರು.೧೮೨ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ವಿಲೇವಾರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರಲ್ಲದೆ, ಯಾವ ವಿ?ಯಗಳು ಗಂಭೀರವಾಗಿವೆ ಅವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಚಾಟಿ ಬಿಸ ಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಭಾಗದ ನೊಂದವರ ಸಮಸ್ಯೆಗಳನ್ನು ಆಲಿಸಿ ಶೀಘ್ರ ವಿಲೇವಾರಿ ಮಾಡದೆ ಇರುವ ಕಾರಣ ಸಮಸ್ಯೆಗಳು ಹೆಚ್ಚುತ್ತಿವೆ ಎಂದ ಅವರು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಮಲೆನಾಡಿನಲ್ಲಿ ೧೦೫ ಪೋಕೋಸ್ ಪ್ರಕರಣಗಳಿವೆ ಇದು ಗಂಭೀರವಾದ ಸಮಸ್ಯೆ ಕೃಷಿಕರು,ಕೂಲಿ ಕಾರ್ಮಿಕರು ಬಯಲು ಪ್ರದೇಶಕ್ಕೆ ಬಹಿರ್ದೆಸೆಗೆ ಹೊದಂತಹ ಸಂದರ್ಭದಲ್ಲಿ ನಡೆದ ಲೈಂಗಿಕ ದೌರ್ಜನ್ಯದಿಂದಲೂ ಪೋಕ್ಸೋ ಪ್ರಕರಣಗಳು ಕಂಡು ಬಂದಿವೆ.ಶೌಚಾಲಯ ಮುಕ್ತ ಪ್ರದೇಶ ಆಗಬೇಕು ಆದರೆ ಸಂಪೂರ್ಣವಾಗಿ ಆಗಿಲ್ಲಾ ಶೇಕಡ ೯೯ ರ? ಆಗಿರುವುದು ಸಾಧನೆ ಅಲ್ಲ ಶೇ. ೧ರಷ್ಟು ಆಗದೆ ಜನರು ತೊಂದರೆಗೆ ಸಿಲುಕುವುದನ್ನು ತಪ್ಪಿಸಬೇಕು ಅದು ಬಹುಮುಖ್ಯ ಇದೊಂದು ಸಮಾಜಕ್ಕೆ ಕಳಂಕ ತರುವ ವಿ?ಯವಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಬರುವವರಿಗೆ ಒಂದು ಸಾವಿರ ನೀಡುತ್ತಾರೆ ಬಿ.ಸಿ.ಎಂ. ಹಾಸ್ಟೆಲ್ ಗಳಲ್ಲಿ ತರಬೇತಿ ನೀಡಲು ಬರುವವರಿಗೆ ಮೂರು ಸಾವಿರ ರು. ನೀಡುತ್ತಾರೆ ಈ ರೀತಿ ತಾರತಮ್ಯ ಮಾಡುವಂತಿಲ್ಲ ಎಂದು ತಿಳಿಸಿದರು. ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದ ಅವರು ನೀಟ್, ಜೆಇಇ, ಸಿ.ಇ.ಟಿ. ಮೇಟಿರಿಯಲ್ ಚಾಚೂ ತಪ್ಪದೆ ನೀಡಿದರೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು. ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಎರಡು ಉಪ ವಿಭಾಗದ ಉಪ ವಿಭಾಗಾಧಿಕಾರಿಗಳು ತಂಡ ರಚಿಸಿ ಎರಡು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿ ಲೋಪಗಳನ್ನು ಸರಿಪಡಿಸಿ ಆಯೋಗಕ್ಕೆ ವರದಿ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ಖಾತೆ, ಪೌತಿ ಖಾತೆ ಜಂಟಿ ಸರ್ವೆ ಕುರಿತಂತೆ ೧೫ ಅರ್ಜಿಗಳು ಬಂದಿವೆ ಎಂದ ಅವರು ಯಾವುದೇ ವಿಳಂಬ ಮಾಡದೆ ಕಾನೂನು ತೊಡಕಿದ್ದರೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಲೋಪದೋ?ಗಳಿಗೆ ಅವಕಾಶ ನೀಡದೆ ಎರಡು ತಿಂಗಳಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು. ಅಲೆಮಾರಿ, ಹಕ್ಕಿಪಿಕ್ಕಿ ಸಮುದಾಯದವರು ಸಮಸ್ಯೆಗಳನ್ನು ಕುರಿತು ಆಯೋಗಕ್ಕೆ ದೂರು ನೀಡಿದ್ದಾರೆ. ಇನ್ನೂ ಒಂದುವರೆ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜನರು ೫೦೫೩, ೫೦೫೭ ನಲ್ಲಿ ಅರ್ಜಿ ಸಲ್ಲಿಸಿದ್ದು ಅಕ್ರಮ ಸಕ್ರಮ ಮಾಡುವುದು ವಿಳಂಬವಾಗಿದೆ. ಜನರು ಅಸ್ತಿತ್ವದಲ್ಲಿದ್ದು, ಆದರೆ ಅವರಿಗೆ ಹಕ್ಕು ಪತ್ರ ನೀಡಿಲ್ಲ ಎಂದು ತಿಳಿಸಿದರು. ಜನರನ್ನು ಒಕ್ಕಲೆಬ್ಬಿಸಬಾರದು, ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು. ಸ್ಮಶಾನ ಭೂಮಿ ಸಮರ್ಪಕವಾಗಿ ವಿತರಣೆ ಆಗಬೇಕು ಈ ನಿಟ್ಟಿನಲ್ಲಿ ಸ್ಮಶಾನ ಭೂಮಿ ನೀಡುವಂತೆ ಆಯೋಗದಿಂದ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಆಯೋಗದ ಸದಸ್ಯರಾದ ಎಂ ಕುಂಬಯ್ಯ, ಸುನೀಲ್ ಎಂ ಉಕ್ಕಲಿ, ಎನ್ ದಿವಾಕರ್, ಗೀತಾ ಥಾಂವಶಿ, ಕಾರ್ಯದರ್ಶಿ ಡಾ. ಎಚ್.ಎಸ್. ಶಿವರಾಮು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಇದ್ದರು.