ಸಾರಾಂಶ
ಕನ್ನಡಪ್ರಭ ವಾರ್ತೆ ಚೇಳೂರು
ಭೂಮಿಯನ್ನು ನಂಬಿ ಬದುಕುತ್ತಿರುವ ರೈತರಿಗೆ ಗ್ರಾಮ ಮಟ್ಟದಲ್ಲಿ ಕೆಲಸಗಳನ್ನು ಸೃಷ್ಟಿ ಮಾಡುವುದು ಹಾಗೂ ಶಾಶ್ವತವಾದ ಆಸ್ತಿಗಳನ್ನು ಸೃಷ್ಟಿ ಮಾಡುವುದು ನರೇಗಾ ಯೋಜನೆಯ ಮುಖ್ಯ ಉದ್ದೇಶ ಎಂದು ಪಿಡಿಒ ಕೆ. ವೆಂಕಟಾಚಲಪತಿ ಅಭಿಪ್ರಾಯಪಟ್ಟರು.ಚೇಳೂರು ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಶನಿವಾರ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಖಾತರಿ ಯೋಜನೆಯಲ್ಲಿ ರೈತರು ಜಮೀನಿನಲ್ಲಿ ಬದು ನಿರ್ಮಾಣ, ಕೃಷಿಹೊಂಡ, ಗಿಡ ನೆಡುವುದು, ಇನ್ನು ಹಲವಾರು ಯೋಜನೆಗಳನ್ನು ರೈತರು ಪಡೆಯಬಹುದಾಗಿದೆ ಎಂದು ತಿಳಿಸಿದರು.ಸಮಸ್ಯೆ ಇದ್ದರೆ ಗ್ರಾಪಂ ಸಂಪರ್ಕಿಸಿಪ್ರತಿಯೊಂದು ಸರ್ಕಾರಿ ಕಚೇರಿಗೆ ಗ್ರಾಮ ಪಂಚಾಯತಿ ಕೊಂಡಿಯಾಗಿದ್ದು,ಯಾವುದೇ ರೀತಿಯ ಸಮಸ್ಯೆಗಳು ಇದ್ದಾರೆ ಗ್ರಾಪಂ ಗಮನಕ್ಕೆ ತರಬಹುದು ಒಂದು ವೇಳೆ ಗ್ರಾಂ ಪ ಯಿಂದ ಸಾಧ್ಯವಾಗದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಕ.ದ.ಸಂ.ಸ. ಜಿಲ್ಲಾ ಸಂಚಾಲಕರು ಕಡ್ಡಿಲು ವೆಂಕಟರವಣ ಮಾತನಾಡಿ, ಕೆಲ ಗುತ್ತಿಗೆದಾರರು ಕೂಲಿಕಾರರ ಖಾತೆಗೆ ಹಣ ಹಾಕಿ ಮತ್ತೆ ಅವರಿಗೆ ಒಂದಿಷ್ಟು ಹಣ ಕೊಟ್ಟು ಮರಳಿ ಪಡೆಯುವ ಕೆಲಸಗಳು ನಡೆಯುತ್ತಿವೆ, ಇದು ನಿಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸೌಲಭ್ಯಗಳ ಮಾಹಿತಿ ನೀಡುತ್ತಿಲ್ಲಹೊಸಹುಡ್ಯ ಗ್ರಾಮ ಪಂಚಾಯತಿ ಸದಸ್ಯೆ ನಾರಾಯಣ ಸ್ವಾಮಿ ಮಾತನಾಡಿ ಗ್ರಾಮ ಪಂಚಾಯತಿ ಯಲ್ಲಿ ಇರುವ ಸೌಲಭ್ಯಗಳ ಕುರಿತು ಹಾಗೂ ಸಭೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ, ಇದರಿಂದ ಸಾರ್ವಜನಿಕರು ಸಭೆಗಳಲ್ಲಿ ಬಾಗವಹಿಸುವಲ್ಲಿ ಆಸಕ್ತಿ ಕೂಡ ತೋರುತ್ತಿಲ್ಲ ಇದರಿಂದ ಸರ್ಕಾರದ ಸೌಲಭ್ಯಗಳು ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆ.ಎನ್ ಜಾಲಾರಿ,ಕ.ದ.ಸಂ.ಸ. ಜಿಲ್ಲಾ ಸಂಚಾಲಕರು ಕಡ್ಡಿಲು ವೆಂಕಟರವಣ,ಸುರೇಂದ್ರ,ನೋಡಲ್ ಅಧಿಕಾರಿಗಳು ಬಾಬು,ಗ್ರಾಂ.ಪ ಅದ್ಯಕ್ಷರು ಕೌಸ್ತರ್, ಉಪಾಧ್ಯಕ್ಷರು ಪೈಂಟರ್ ರಾಮು,ನರೇಗಾ ಜೆ ಈ ವೆಂಕಟೇಶ್,ಮೆಕಾನಿಕ್ ನಯಾಜ್, ಕಾಂಗ್ರೆಸ್‌ನ ಸುರೇಂದ್ರ ಮತ್ತಿತರರು ಹಾಜರಿದ್ದರು.