ಲೋಕ್‌ ಅದಾಲತ್‌ ಉದ್ದೇಶ ಶೀಘ್ರ ನ್ಯಾಯದಾನ: ನ್ಯಾ. ಎಚ್.ದೇವದಾಸ್

| Published : Dec 15 2024, 02:01 AM IST

ಲೋಕ್‌ ಅದಾಲತ್‌ ಉದ್ದೇಶ ಶೀಘ್ರ ನ್ಯಾಯದಾನ: ನ್ಯಾ. ಎಚ್.ದೇವದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಲೋಕ್‌ ಅದಾಲತ್‌ಗಳಲ್ಲಿ ರಾಜಿ ಸಂಧಾನಗಳ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಿಕೊಂಡಲ್ಲಿ ಕಕ್ಷಿದಾರರ ಅಮೂಲ್ಯ ಸಮಯ, ಹಣ ಉಳಿತಾಯ ಆಗುವುದು. ಜೊತೆಗೆ ಶೀಘ್ರ ನ್ಯಾಯದಿಂದ ನೆಮ್ಮದಿ ಜೀವನ ಕಾಣಲು ಸಾಧ್ಯ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ದೇವದಾಸ್ ಹೇಳಿದ್ದಾರೆ.

ಹೊನ್ನಾಳಿ: ಲೋಕ್‌ ಅದಾಲತ್‌ಗಳಲ್ಲಿ ರಾಜಿ ಸಂಧಾನಗಳ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಿಕೊಂಡಲ್ಲಿ ಕಕ್ಷಿದಾರರ ಅಮೂಲ್ಯ ಸಮಯ, ಹಣ ಉಳಿತಾಯ ಆಗುವುದು. ಜೊತೆಗೆ ಶೀಘ್ರ ನ್ಯಾಯದಿಂದ ನೆಮ್ಮದಿ ಜೀವನ ಕಾಣಲು ಸಾಧ್ಯ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ದೇವದಾಸ್ ಹೇಳಿದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಠ್ರೀಯ ಲೋಕ್‌ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಹುಪಾಲು ಜನರು ಸಣ್ಣಪುಟ್ಟ ವಿಚಾರಗಳಿಗೂ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದಾರೆ. ಈ ಹಿನ್ನೆಲೆ ಶೀಘ್ರ ನ್ಯಾಯ ಕಲ್ಪಿಸಲು ರಾಷ್ಠ್ರೀಯ ಲೋಕ್‌ ಅದಾಲತ್ ಕಾರ್ಯಕ್ರಮದ ಮೂಲಕ ಪರಸ್ಪರ ರಾಜಿ ಸಂಧಾನಗಳ ನಡೆಸಲಾಗುತ್ತದೆ ಎಂದರು.

ಶನಿವಾರ ನಡೆದ ಲೋಕ್‌ ಅದಾಲತ್‌ನಲ್ಲಿ ಒಟ್ಟು 567 ಪ್ರಕರಣ ರಾಜಿ ಸಂಧಾನ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 520 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿ, ₹37.93 ಲಕ್ಷಗಳ ಪರಿಹಾರ/ ವ್ಯವಹರಣೆ ನಡೆಸಲಾಗಿದೆ ಎಂದು ನ್ಯಾಯಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾದ ಪುಣ್ಯಕೋಟಿ, ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಪಿ. ಜಯಪ್ಪ, ಕಾರ್ಯದರ್ಶಿ ಪುರುಷೋತ್ತಮ್ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು, ವಕೀಲರು, ಕಕ್ಷಿದಾರರು ಭಾಗವಹಿಸಿದ್ದರು.

- - - -14ಎಚ್.ಎಲ್.ಐ3.ಜೆಪಿಜಿ:

ಹೊನ್ನಾಳಿ ನ್ಯಾಯಾಲಯದ ಲೋಕ್‌ ಅದಾಲತ್‌ನಲ್ಲಿ ನ್ಯಾಯಾಧೀಶ ದೇವದಾಸ್ ಹಾಗೂ ಹೆಚ್ಚುವರಿ ನ್ಯಾಯಾಧೀಶರ ಪುಣ್ಯಕೋಟಿ ರಾಜಿ ಸಂಧಾನ ಮೂಲಕ ಪ್ರಕರಣಗಳ ಇತ್ಯರ್ಥಪಡಿಸಿದರು.