ಶಿಗ್ಗಾಂವಿ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಶರನ್ನವರಾತ್ರಿ ಕಾರ್ಯಕ್ರಮದ ಅಂಗವಾಗಿ ದೇವಿ ಮಹಾ ಪುರಾಣ ಪ್ರವಚನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಶಿಗ್ಗಾಂವಿ: ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಭಕ್ತರಲ್ಲಿ ಭಕ್ತಿ -ಭಾವ ತುಂಬಿ ಧಾರ್ಮಿಕ ಜಾಗೃತಿ ಮೂಡಿಸುವುದೇ ಪುರಾಣ ಪ್ರವಚನದ ಮುಖ್ಯ ಉದ್ದೇಶವಾಗಿದೆ ಎಂದು ಮಾಜಿ ಸಂಸದ ಎಂ.ಸಿ. ಕುನ್ನೂರ ಹೇಳಿದರು.
ಪಟ್ಟಣದ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಶರನ್ನವರಾತ್ರಿ ಕಾರ್ಯಕ್ರಮದ ಅಂಗವಾಗಿ ದೇವಿ ಮಹಾ ಪುರಾಣ ಪ್ರವಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬದುಕನ್ನು ಉತ್ತಮವಾಗಿ ನಿರ್ವಹಿಸಲು ಹಾಗೂ ನಮ್ಮ ದಿನನಿತ್ಯದ ನೋವು -ನಲಿವುಗಳಿಗೆ ಸ್ಪಂದಿಸಲು ಮತ್ತು ಅಂಕು ಡೊಂಕುಗಳನ್ನು ತಿದ್ದಿಕೊಳ್ಳಲು ಇಂತಹ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಅವಶ್ಯಕತೆ ಬಹಳ ಇದೆ ಎಂದರು.ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಆ ದೇವಿಗೆ ನಿರಂತರವಾಗಿ ಪೂಜ್ಯ ಭಾವನೆಯಿಂದ ಪ್ರಾರ್ಥನೆ ಮಾಡಿದರೆ ನಮಗೆ ಆ ದೇವಿ ರಕ್ಷಿಸುತ್ತಾಳೆ. ಆದರೆ ಈ ಬಾರಿ ದೇವಿ ಮುನಿಸಿಕೊಂಡ ಕಾರಣ ರಾಜ್ಯಾದ್ಯಂತ ಭೀಕರ ಬರಗಾಲ ಆವರಿಸಿದೆ. ಅದನ್ನು ತಾಯಿ ಪರಿಹರಿಸಲು ಇಂದು ನಾವು ಶರನ್ನವರಾತ್ರಿಯ ಪುರಾಣ ಪ್ರವಚನ ಮೂಲಕ ಸಂಸ್ಕಾರವನ್ನು ಕಲಿಸಿ ನಮ್ಮ ಆತ್ಮ ಸುದ್ದಿಯನ್ನು ಮಾಡಿಕೊಳ್ಳಬೇಕು ಎಂದರು.ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು ಹಾಗೂ ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಮ್ಮುಖವಹಿಸಿ ಆರ್ಶಿರ್ವಚನ ನೀಡಿದರು.ದೇವಿ ಪುರಾಣ ಪ್ರವಚನವನ್ನು ಪಂ.ಪುಟ್ಟರಾಜ ಕವಿಗವಾಯಿಗಳ ಶಿಷ್ಯ ಪ್ರಭಯ್ಯಶಾಸ್ತ್ರೀ ಹಿರೇಮಠ, ಸಂಗೀತ ಸೇವೆ ಶಿವಾನಂದ ವಂದೇವಾಲ, ತಬಲಾ ಸೇವೆ ಬಸವರಾಜ ಚಳಗೇರಿ ಅವರಿಂದ ಜರುಗಿತು. ಮಾಜಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಜಯಣ್ಣಾ ಹೆಸರೂರ, ದತ್ತಣ್ಣಾ ವೇರ್ಣೇಕರ, ಟಿ.ವ್ಹಿ. ಸುರಗೀಮಠ, ಸಿದ್ದಣ್ಣಾ ಮೊರಬದ, ಶ್ರೀಕಾಂತ ಬುಳ್ಳಕ್ಕನವರ, ರಮೇಶ ವನಹಳ್ಳಿ, ಪಕ್ಕೀರಪ್ಪ ಕುಂದೂರ, ಈರಣ್ಣಾ ಬಡ್ಡಿ, ಪಕ್ಕೀರಪ್ಪ ಯಲಿಗಾರ, ಭರಮಜ್ಜ ನವಲಗುಂದ, ಶಂಕರಗೌಡ ಪಾಟೀಲ, ಶಿವಪ್ಪ ಗಂಜೀಗಟ್ಟಿ, ಮಲ್ಲಯ್ಯ ಹಿರೇಮಠ, ಮಾಲತೇಶ ಯಲಿಗಾರ ಸೇರಿದಂತೆ ಭಕ್ತಾದಿಗಳು ಇದ್ದರು.