ಸಾರಾಂಶ
ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಬೆಂಕಿ ನಂದಿಸಲು ಹೋದ ವೃದ್ಧನೊಬ್ಬ ಕಾಲುಜಾರಿಬಿದ್ದು ಬೆಂಕಿಯಲ್ಲಿ ಸಜೀವ ದಹನಗೊಂಡ ಘಟನೆ ಬಾಗಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬಾದಾಮಿ
ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಬೆಂಕಿ ನಂದಿಸಲು ಹೋದ ವೃದ್ಧನೊಬ್ಬ ಕಾಲುಜಾರಿಬಿದ್ದು ಬೆಂಕಿಯಲ್ಲಿ ಸಜೀವ ದಹನಗೊಂಡ ಘಟನೆ ಬಾಗಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.ಭೀಮಪ್ಪ ಹಳ್ಳಿ(75) ಮೃತ ವೃದ್ಧ. ಕಬ್ಬಿಗೆ ಬೆಂಕಿ ಬಿದ್ದಿರುವುದನ್ನು ಕಂಡು ನಂದಿಸಲು ಹೋಗಿದ್ದು, ಈ ವೇಳೆ ಕಾಲು ಜಾರಿ ಬೆಂಕಿಗೆ ಬಿದ್ದು ಸಜೀವ ದಹನಗೊಂಡಿದ್ದಾನೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿ ಮೃತ ಭೀಮಪ್ಪ ಹಳ್ಳಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.