ಸಾರಾಂಶ
ಕಳೆದ ಒಂದು ವರ್ಷದ ಹಿಂದೆ ಆಂದ್ರಪ್ರದೇಶದ ಮದನಪಲ್ಲಿಯಲ್ಲಿ ನಾಪತ್ತೆಯಾಗಿದ್ದ ವೃದ್ಧೆ ಚಿಕ್ಕಮಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ ಒಂದು ವರ್ಷದ ಹಿಂದೆ ಆಂದ್ರಪ್ರದೇಶದ ಮದನಪಲ್ಲಿಯಲ್ಲಿ ನಾಪತ್ತೆಯಾಗಿದ್ದ ವೃದ್ಧೆ ಚಿಕ್ಕಮಗಳೂರಿನಲ್ಲಿ ಪತ್ತೆಯಾಗಿದ್ದಾರೆ.ವೃದ್ಧೆ ಅಚ್ಚಮ್ಮ (72) ಅವರನ್ನು ಅವರ ಮಕ್ಕಳಿಗೆ ಒಪ್ಪಿಸಲಾಗಿದೆ. ಅಚ್ಚಮ್ಮ ಅವರು ಕಳೆದ ಒಂದು ವರ್ಷದ ಹಿಂದೆ ಮದನಪಲ್ಲಿಯಲ್ಲಿರುವ ತಮ್ಮ ಗ್ರಾಮದಿಂದ ನಾಮಪತ್ತೆಯಾಗಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಚ್ಚಮ್ಮ ಅವರು ಚಿಕ್ಕಮಗಳೂರು ನಗರದಲ್ಲಿ ಬೀದಿ ಬದಿಯಲ್ಲಿ ವಾಸವಾಗಿದ್ದರು. ಕೆಲವು ದಿನಗಳಿಂದ ತಾಲೂಕು ಕಚೇರಿ ಆವರಣದಲ್ಲಿ ಇದ್ದರು. ಕಚೇರಿಯ ಸುತ್ತಮುತ್ತ ಕಸ ಕಂಡು ಬಂದರೆ ಅದನ್ನು ಒಟ್ಟು ಮಾಡುತ್ತಿದ್ದರು. ಇದನ್ನು ಗಮನಿಸಿದ ಜನರು ಈ ವಿಷಯವನ್ನು ಸಹನಾ ಜೆ ರೂಬಿನ್ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರೂಬಿನ್ ಮೊಸಸ್ ಅವರ ಗಮನಕ್ಕೆ ತಂದಾಗ ಏ. 3 ರಂದು ವೃದ್ಧೆಯನ್ನು ಭೇಟಿ ಮಾಡಿದರು. ಸಂಸ್ಥೆಯ ಮಹಿಳೆಯರ ಸಹಾಯದಿಂದ ಸ್ನಾನ ಮಾಡಿಸಿ ಬಟ್ಟೆ ಬದಲಿಸಿ ಅವರನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿತ್ತು.ಆಂಧ್ರ ಪ್ರದೇಶದ ಮದನಪಲ್ಲಿ ಜಿಲ್ಲೆಯವರೆಂದು ಅಚ್ಚಮ್ಮ ಅವರು ಹೇಳಿದ್ದು, ಸ್ಥಳೀಯ ಪೊಲೀಸರು ಮದನಪಲ್ಲಿಯ ಪೊಲೀಸರನ್ನು ಸಂಪರ್ಕಿಸಿ ವೃದ್ಧೆಯ ಸಂಬಂಧಿಕರ ಪತ್ತೆಯಲ್ಲಿ ನೆರವಾಗಿದ್ದಾರೆ. ಅಚ್ಚಮ್ಮ ಅವರ ಮಕ್ಕಳು ಚಿಕ್ಕಮಗಳೂರಿಗೆ ಆಗಮಿಸಿ ತಮ್ಮ ತಾಯಿಯನ್ನು ಕರೆದುಕೊಂಡು ಹೋದರು. ಪೋಟೋ ಫೈಲ್ ನೇಮ್ 5 ಕೆಸಿಕೆಎಂ 4 ಚಿಕ್ಕಮಗಳೂರಿನಲ್ಲಿ ನಿರ್ಗತಿಕಳಂತೆ ಅಲೆಯುತ್ತಿದ್ದ ವೃದ್ದೆ ಅಚ್ಚಮ್ಮ ಅವರನ್ನು ಅವರ ಮಕ್ಕಳಿಗೆ ಸಹನಾ ಜೆ ರೂಬಿನ್ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರೂಬಿನ್ ಮೊಸಸ್ ಅವರು ಒಪ್ಪಿಸಿದರು. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ. ಮೋಹನ್‌ಕುಮಾರ್ ಇದ್ದರು.