ಸಾರಾಂಶ
ಗದಗ: ನಗರದ ಪಂ. ಪುಟ್ಟರಾಜ ಕವಿ ಗವಾಯಿಗಳವರ ಮಠದಲ್ಲಿ ಜಿಲ್ಲಾ ಬಿಜೆಪಿ ಹಾಗೂ ನಗರ ಮಂಡಲ ವತಿಯಿಂದ ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ೮೧ನೇ ಜನ್ಮ ದಿನವನ್ನು ಪಂ.ಪುಟ್ಟರಾಜ ಕವಿಗವಾಯಿಗಳ ಗದ್ದುಗೆಗಳಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಕ್ಕಳಿಗೆ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ಯಡಿಯೂರಪ್ಪನವರು ಕರ್ನಾಟಕದಲ್ಲಿ ಕೆಳಮಟ್ಟದಿಂದ ಬಿಜೆಪಿ ಸಂಘಟನೆಯನ್ನು ಮಾಡಿರುವ ಧೀಮಂತ ನಾಯಕ. ರೈತರ ಏಳಿಗೆಗೆ ಶ್ರಮಿಸಿದ ಏಕೈಕ ಮುಖ್ಯಮಂತ್ರಿ ಹಾಗೂ ಬಿಜೆಪಿ ೪ ವಿಧಾನಸಭಾ ಸದಸ್ಯರಿದ್ದ ಪಾರ್ಟಿಯನ್ನು ಸರ್ಕಾರ ರಚಿಸುವ ವರೆಗೂ ಶ್ರಮಿಸಿ ೪ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಸೇವೆ ಮಾಡಿ, ಸಾಕಷ್ಟು ಅಭಿವೃದ್ಧಿ ಯೋಜನೆಗಳ ರೂಪಿಸಿರುವ ಅಗ್ರಗಣ್ಯ ನಾಯಕ. ಅವರು ಪಕ್ಷಕ್ಕೆ ಮಾಡಿರುವ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರು ಬಿಜೆಪಿಯ ಯುವಕರಿಗೆ ಆದರ್ಶರಾಗಿದ್ದಾರೆ ಎಂದರು.ಹಿರಿಯರಾದ ಎಂ.ಎಸ್. ಕರೀಗೌಡ್ರ ಹಾಗೂ ಶೇಖರ ಸಜ್ಜನರ ಮಾತನಾಡಿ, ಬಿ.ಎಸ್. ಯಡಿಯೂರಪ್ಪನವರ ತಮ್ಮ ಹಳೆಯ ಒಡನಾಟವನ್ನು ಹಂಚಿಕೊಂಡು ಪಕ್ಷದ ಅವತ್ತಿನ ಕೆಲವು ವಿಚಾರಗಳನ್ನು ವ್ಯಕ್ತಪಡಿಸಿದರು.
ಈ ವೇಳೆ ನಗರಸಭೆಯ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಸುಧೀರ ಕಾಟಿಗರ, ಯೋಗೇಶ್ವರಿ ಸಂತೋಷ ಅಕ್ಕಿ, ಮಂಜುನಾಥ ಶಾಂತಗೇರಿ, ನಾಗರಾಜ ತಳವಾರ, ಅಶೋಕ ಸಂಕಣ್ಣವರ, ಕೆ.ಪಿ. ಕೋಟಿಗೌಡ್ರ, ಅಯ್ಯಪ್ಪ ಅಂಗಡಿ, ಶಶಿಧರ ದಿಂಡೂರ, ಮಾಂತೇಶ ಬಾತಾಖಾನಿ, ರಮೇಶ ಸಜ್ಜಗಾರ ಹಾಗೂ ಶ್ರೀಮಠದ ಮಕ್ಕಳು ಇದ್ದರು.ಲಕ್ಷ್ಮೇಶ್ವರ ಬಿಎಸ್‌ವೈ ಜನ್ಮದಿನ
ಮಂಗಳವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ೮೧ನೇ ಜನ್ಮದಿನಾಚರಣೆಯ ಅಂಗವಾಗಿ ಲಕ್ಷ್ಮೇಶ್ವರ ಪಟ್ಟಣದಲ್ಲಿನ ಶಾಂತಿಧಾಮ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು.ಈ ವೇಳೆ ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ದೇವರು ಅವರಿಗೆ ಇನ್ನಷ್ಟು ಆರೋಗ್ಯ ಕೊಟ್ಟು ಕಾಪಾಡಲಿ ಎಂದರು.ಯಡಿಯೂರಪ್ಪ ಅವರು ಕರ್ನಾಟಕದ ಅಭಿವೃದ್ಧಿಗೆ, ಸಾಮಾಜಿಕ ನ್ಯಾಯಕ್ಕಾಗಿ ದೀನ ದಲಿತರ ಉದ್ದಾರಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಕರ್ನಾಟಕ ಕಂಡ ಅದ್ವಿತೀಯ ನಾಯಕರಾಗಿದ್ದಾರೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಮೂಲಕ ತಮ್ಮ ಕೊಡುಗೆ ನೀಡಿದ್ದು ಅವಿಸ್ಮರಣೀಯ ಎಂದು ಹೇಳಿದರು.ಈ ವೇಳೆ ಬಿ.ಡಿ. ಪಲ್ಲೆದ, ನಿಂಗಪ್ಪ ಬನ್ನಿ, ರುದ್ರಪ್ಪ ಉಮಚಗಿ, ದುಂಡೇಶ ಕೊಟಗಿ, ನೀಲಪ್ಪ ಹತ್ತಿ, ನವೀನ ಬೆಳ್ಳಟ್ಟಿ, ಪ್ರಕಾಶ ಉಪನಾಳ, ಪ್ರವೀಣ ಬೊಮಲೆ, ಸಂತೋಷ ಜಾವೂರ, ಶಕ್ತಿ ಕತ್ತಿ, ಮಂಜುನಾಥ ಉಳ್ಳಾಗಡ್ಡಿ, ವಿಶಾಲ ಬಟಗುರ್ಕಿ, ಉಳವೇಶ ಪಾಟೀಲ, ಜಾಹೀರ್ ಮೋಮಿನ್, ಈರಣ್ಣ ಅಕ್ಕೂರ, ಮಲ್ಲಿಕಾರ್ಜುನ ನೀರಾಲೋಟಿ, ಬಸವರಾಜ ಚಕ್ರಸಾಲಿ ಇದ್ದರು. ಗಂಗಾಧರ ಮೆಣಸಿನಕಾಯಿ ಕಾರ್ಯಕ್ರಮ ನಿರ್ವಹಿಸಿದರು.