ಜೀವಂತ ಸಾಕು ಹೆಣ್ಣು ನಾಯಿಯನ್ನೇ ಕಸದ ವಾಹನಕ್ಕೆ ತಳ್ಳಿದ ಮಾಲೀಕ!

| Published : Sep 11 2024, 01:08 AM IST

ಸಾರಾಂಶ

ಜೀವಂತ ಸಾಕು ನಾಯಿಯನ್ನೇ ಮನೆ ಮಾಲೀಕ ಕಸ ವಿಲೇವಾರಿ ಮಾಡುವ ವಾಹನಕ್ಕೆ ತಳ್ಳಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಪ್ರಾಣಿ ಪ್ರಿಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ಜೀವಂತ ಸಾಕು ನಾಯಿಯನ್ನೇ ಮನೆ ಮಾಲೀಕ ಕಸ ವಿಲೇವಾರಿ ಮಾಡುವ ವಾಹನಕ್ಕೆ ತಳ್ಳಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಪ್ರಾಣಿ ಪ್ರಿಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಡೊಂಗರಕೇರಿಯಲ್ಲಿ ಶನಿವಾರ ಈ ಕೃತ್ಯ ಬೆಳಕಿಗೆ ಬಂದಿದೆ. ಕೆಲ ವರ್ಷಗಳಿಂದ ಮನೆಯಲ್ಲಿ ಸಾಕಲಾಗಿದ್ದ ಹೆಣ್ಣು ಶ್ವಾನವನ್ನು ಮಾಲೀಕರೇ ಬಲವಂತವಾಗಿ ಕಸ ವಿಲೇವಾರಿ ಮಾಡುವ ಪಾಲಿಕೆಯ ಲಾರಿಗೆ ಹಾಕಿದ್ದಾರೆ. ಈ ಅಮಾನುಷ ಕೃತ್ಯ ಮಾಡಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಾಯಿಯನ್ನು ವಾಮಂಜೂರು ಡಂಪಿಂಗ್ ಯಾರ್ಡ್ ಬಳಿ ಬಿಡಲಾಗಿದ್ದು, ಪ್ರಾಣಿ ದಯಾ ಸಂಘದ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಈ ಶ್ವಾನ ಕಂಡರೆ ಮಾಹಿತಿ ನೀಡುವಂತೆ ಕೋರಿದ್ದಾರೆ.