ಶ್ರೀ ತ್ಯಾಗರಾಜರ ಪಂಚರತ್ನ ಕೃತಿ ಅತ್ಯಂತ ರಮಣೀಯಃ ಸಾಯಿಕುಮಾರ್ ಎ.ಎಸ್.

| Published : Jan 21 2025, 12:31 AM IST

ಶ್ರೀ ತ್ಯಾಗರಾಜರ ಪಂಚರತ್ನ ಕೃತಿ ಅತ್ಯಂತ ರಮಣೀಯಃ ಸಾಯಿಕುಮಾರ್ ಎ.ಎಸ್.
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಶ್ರೀ ತ್ಯಾಗರಾಜರ ಕೃತಿಗಳಲ್ಲಿ ಒಂದಾದ ಪಂಚರತ್ನ ಕೃತಿ ಅತ್ಯಂತ ರಮಣೀಯವಾದುದು ಎಂದು ಶ್ರೀ ರಾಮಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್. ಹೇಳಿದ್ದಾರೆ

25 ನೇ ವರ್ಷದ ಸದ್ಗುರು ಶ್ರೀ ತ್ಯಾಗರಾಜರು,ಶ್ರೀ ಪುರಂದರದಾಸರ ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ತ್ಯಾಗರಾಜರ ಕೃತಿಗಳಲ್ಲಿ ಒಂದಾದ ಪಂಚರತ್ನ ಕೃತಿ ಅತ್ಯಂತ ರಮಣೀಯವಾದುದು ಎಂದು ಶ್ರೀ ರಾಮಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್. ಹೇಳಿದ್ದಾರೆ.

ಶ್ರೀ ರಾಮಸೇವಾ ಪ್ರತಿಷ್ಠಾನ ದಿಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಏರ್ಪಾಡಾಗಿದ್ದ 25 ನೇ ವರ್ಷದ ಸದ್ಗುರು ಶ್ರೀ ತ್ಯಾಗರಾಜರು, ಶ್ರೀ ಪುರಂದರದಾಸರು ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ವಾಗ್ಗೆಯಕರರಾದ ತ್ರಿಮೂರ್ತಿಗಳಲ್ಲಿ ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿ ತಮ್ಮ ಇಷ್ಟದೈವ ಶ್ರೀ ರಾಮನ ದಿವ್ಯ ತಾರಕ ನಾಮವನ್ನು ತಮ್ಮ ಜೀವಿತಕಾಲ ಪೂರ್ಣವಾಗಿ ಉಪಾಸಿಸಿ ರಾಮನಾಮವನ್ನು, ರಾಮನ ದಿವ್ಯಾ ರೂಪವನ್ನು ಒಂದಾಗಿ ತಿಳಿದು ವೇದ ಇತಿಹಾಸ ಪುರಾಣಗಳ ತತ್ತ್ವಕಾ ಭಾವ ರಹಸ್ಯವನ್ನು, ಉಪನಿಷತ್ ರಹಸ್ಯ ವನ್ನು ಅನುಭವಿಸಿ ತಮ್ಮ ನಾದ ಸುಧಾರಸದಿಂದ ತ್ಯಾಗಬ್ರಹ್ಮಹೋಪನಿಷದ್ ಎಂಬ ಪ್ರಸಿದ್ಧ ಕೃತಿಗಳನ್ನು ಅನುಗ್ರಹಿಸಿದ್ದಾರೆ ಎಂದರು.

ತಮ್ಮ ಈ ಸಂಗೀತ ಸೇವೆಯಲ್ಲೇ ಶ್ರೀ ರಾಮನನ್ನು ಕಂಡಂತ ಸದ್ಗುರು ಶ್ರೀ ತ್ಯಾಗರಾಜರು ಕರ್ನಾಟಕ ಶಾಸ್ತಿಯ ಸಂಗೀತ ದಲ್ಲಿ ಗೆಯವೂ, ಸಾಹಿತ್ಯವೂ ಭಾವಪುಷ್ಟಿಯಿಂದ ತುಂಬಿದೆ ಎಂದು ಹೇಳಿದರು. ಸದ್ಗುರು ಶ್ರೀ ತ್ಯಾಗರಾಜರು ಶ್ರೀ ರಾಮನಲ್ಲಿ ಇಟ್ಟಿದ್ದ ಭಕ್ತಿ ಸೂರ್ಯ, ಚಂದ್ರ ಇರುವರೆವಿಗೂ ಇರುತ್ತದೆ. ಈ ಮಂದಿರದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮ ಶ್ರದ್ಧಾ ಭಕ್ತಿ ಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸಂಗೀತ ಶಿಕ್ಷಕಿಯರಾದ ವಿಜಯಪ್ರಕಾಶ್, ಉಮಾಪ್ರಕಾಶ್, ರೋಹಿಣಿ ನರಸಿಂಹಮೂರ್ತಿ ಮತ್ತಿತರರು ತಮ್ಮ ಶಿಷ್ಯರೊಂದಿಗೆ ಆಗಮಿಸಿ ಈ ಅದ್ಬುತ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪುಟಾಣಿ ಮಕ್ಕಳ ಸಂಗೀತವಂತು ಸುಮಧುರವಾಗಿತ್ತು. ಚಿಕ್ಕಮಗಳೂರು ವಿದುಷಿ ಅಪರ್ಣ ಜಯರಾಮ್, ಜಯರಾಮ್, ಕೃಪಾ ವಿಶ್ವನಾಥ್, ಶಾಲಿನಿ ಕಿರಣ್, ಪದ್ಮಚಂದ್ರಶೇಖರ್ ಹಾಗೂ ಜ್ಯೋತಿ ರಮೇಶ್, ಚ ಪಟ್ಟಣದ ವಿಜಯಪ್ರಕಾಶ್ ಉಮಾಪ್ರಕಾಶ್, ಸಂದ್ಯಾ ರೋಹಿಣಿ ನರಸಿಂಹಮೂರ್ತಿ ಮತ್ತಿತರರು ಪಂಚರತ್ನ ಕೃತಿ ಗೋಷ್ಠಿ ಗಾಯನ ಅತ್ಯಂತ ರಮಣೀಯವಾಗಿ, ಸುಶ್ರಾವ್ಯವಾಗಿ ನಡೆಸಿಕೊಟ್ಟರು.

ಈ ಕಾರ್ಯಕ್ರಮ ದಲ್ಲಿ ಶ್ರೀ ಪುರಂದರ ದಾಸರ, ಭಕ್ತ ಕನಕದಾಸರ ಕೃತಿಗಳನ್ನು ಹಾಡಲಾಯಿತು. ವಿದ್ವಾನ್ ಉಮೇಶ್ ಮತ್ತು ಸಂಗಡಿಗರಿಂದ ನಾದಸ್ವರ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಪಕ್ಕವಾದ್ಯದಲ್ಲಿ ಕೀಬೋರ್ಡ್ ವಿದ್ವಾನ್ ಪ್ರಸನ್ನ ಹಾಗು ಮೃದಂಗ ಶ್ರೀ ಸಾಯಿಕುಮಾರ್ ಸಾತ್ ನೀಡಿದರು. ಚಿಕ್ಕಮ ಗಳೂರು ವಿದುಷಿ ಅಪರ್ಣ ಜಯರಾಮ್ ಹಾಗೂ ಜಯರಾಮ್ ಅವರನ್ನು ಟ್ರಸ್ಟ್ ಅಧ್ಯಕ್ಷ ಸಾಯಿಕುಮಾರ್ ದಂಪತಿ ಸನ್ಮಾನಿಸಿದರು. ಲೀಲಾ ಸಾಯಿಕುಮಾರ್ ಎಲ್ಲರನ್ನು ವಂದಿಸಿದರು.

20ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀರಾಮ ಸೇವಾ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ 25 ನೇ ವರ್ಷದ ಸದ್ಗುರು ಶ್ರೀ ತ್ಯಾಗರಾಜರು,ಶ್ರೀ ಪುರಂದರದಾಸರ ಹಾಗೂ ಭಕ್ತ ಕನಕದಾಸರ ಆರಾಧನೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವಿದುಷಿ ಅಪರ್ಣ ಜಯರಾಮ್,ಹಾಗೂ ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್.ಮತ್ತಿತರರು ಇದ್ದಾರೆ.